ಭಟ್ಕಳ: ಪಟ್ಟಣದ ನಾಗಪ್ಪ ನಾಯಕ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ರಿಬ್ಬನ್ಸ್ ಎಂಡ್ ಬಲೂನ್ಸ್ ಎನ್ನುವ ನೂತನ ತಂತ್ರಜ್ಞಾನ ಆಧರಿತ ಕೇಕ್ ಶಾಫ್ ಅನ್ನು ಭಟ್ಕಳ ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಇಂತಹ ಶಾಪ್‌ಗಳನ್ನು ಜನರು ಮೊದಲು ಮಹಾನಗರದಲ್ಲಿ ನೋಡಬೇಕಿತ್ತು. ಆದರೆ ಈಗ ಭಟ್ಕಳವೂ ಮಂಗಳೂರು, ಉಡುಪಿಯಂತಹ ಮಹಾನಗರಗಳಿಗೆ ಶೆಡ್ಡು ಹೊಡೆಯುತ್ತಿದ್ದು ನೂತನ ತಂತ್ರಜ್ಞಾನದ ಅಂಗಡಿಗಳು ಭಟ್ಕಳಕ್ಕೆ ಬರುತ್ತಿವೆ. ಇದರಿಂದ ಇಲ್ಲಿನ ಹಲವಾರು ನಿರೂದ್ಯೋಗಿಗಳಿಗೆ ಉದ್ಯೋಗವ ದೊರೆಯುತ್ತಿದೆ ಎಂದರು.
ಮಾಲೀಕ ಸಿ.ಎ ಸತೀಶ ಶೆಟ್ಟಿ ಮಾತನಾಡಿ ಒಟ್ಟು ದೇಶದಲ್ಲಿ 163 ಔಟಲೆಟ್‌ಗಳು ಇದ್ದು ಭಟ್ಕಳದಲ್ಲೂ ಆರಂಭಿಸಲಾಗಿದೆ. ಭಟ್ಕಳದ ಶಾಪ್‌ನಲ್ಲಿ ಇಲ್ಲೇ ತಯಾರಾದ ಕೇಕ್ ಮತ್ತಿತರ ತಿನಿಸುಗಳನ್ನು ಪರಿಚಯಿಸಲಾಗುತ್ತಿದೆ ಎಂದರು.
ಹಾಂಗ್ಯೂ ಐಸ್‌ಕ್ರೀಮ್ ಪ್ರದೀಪ ಪೈ ಮಾತನಾಡಿ ನೂತನ ಕೇಕ್ ಶಾಪಿನಲ್ಲಿ ರುಚಿ, ಶುಚಿಯಾದ ಕೇಕ್‌ಗಳು ಲಭ್ಯವಿದ್ದು ಭಟ್ಕಳದ ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು. ಭಟ್ಕಳದ ಎನ್‌ಆರ್‌ಐ ಯೂನುಸ್ ಖಾಜಿಯಾ ಮಾತನಾಡಿದರು.
ಈ ಸಂದರ್ಭದಲ್ಲಿ ದೀಪಾ ಪ್ರದೀಪ ಪೈ, ಉದ್ಯಮಿ ರಾಜೇಶ ನಾಯಕ, ಕೃಷ್ಣಮೂರ್ತಿ ನಾಯಕ, ಖಾಜಿಯಾ ಇಬ್ರಾಹಿಂ, ಮಹ್ಮದ್ ಶಹೀದ್ ಶಿಂಗೇರಿ, ಡಾ. ಸುರೇಶ ನಾಯಕ ಇತರರು ಇದ್ದರು.