ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನೀರುಪಾಲಾಗಿದ್ದ ಪ್ರವಾಸಿಗರು ಶವವಾಗಿ ಪತ್ತೆ.

ನೀರುಪಾಲಾಗಿದ್ದ ಪ್ರವಾಸಿಗರು ಶವವಾಗಿ ಪತ್ತೆ.

Tue, 28 Jun 2022 04:32:40  Office Staff   SO News

ಕುಮಟಾ : ಪ್ರವಾಸಕ್ಕೆ  ಬಂದು ನೀರು ಪಾಲಾಗಿದ್ದ ಇಬ್ಬರ ಪ್ರವಾಸಿಗರು ಶವವಾಗಿ ಪತ್ತೆಯಾಗಿದ್ದಾರೆ. 

ತಾಲೂಕಿನ ಬಾಡ ಗ್ರಾಮದಲ್ಲಿ ಶನಿವಾರ ನಾಲ್ವರು ಪ್ರವಾಸಿಗರು ನೀರುಪಾಲಾಗಿದ್ದರು. ಇಬ್ಬರು ಮೃತದೇಹ ಪತ್ತೆಯಾಗಿ,  ಇನ್ನಿಬ್ಬರಿಗಾಗಿ  ಶೋಧ ನಡೆಸಲಾಗಿತ್ತು. ಬೆಂಗಳೂರಿನಿಂದ ಒಟ್ಟು 87 ಮಂದಿ ವಿದ್ಯಾರ್ಥಿಗಳ ತಂಡ ಕುಮಟಾ ಪ್ರವಾಸಕ್ಕೆ ಬಂದಿದ್ದರು.

 ನೀರುಪಾಲಾಗಿದ್ದ ತೇಜಸ್ ಮತ್ತು  ಕಿರಣಕುಮಾರ್ ಮೃತದೇಹ ಇಂದು ಪತ್ತೆಯಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: