ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನವೆಂಬರ್ ಎಂಟರಂದು ಸಂಭವಿಸಲಿರುವ ಚಂದ್ರಗ್ರಹಣದ ಕುರಿತು ಮಾಹಿತಿ

ನವೆಂಬರ್ ಎಂಟರಂದು ಸಂಭವಿಸಲಿರುವ ಚಂದ್ರಗ್ರಹಣದ ಕುರಿತು ಮಾಹಿತಿ

Tue, 08 Nov 2022 04:44:47  Office Staff   SO News

ರಾಯಚೂರು : ನ. 8ರಂದು ಚಂದ್ರಗ್ರಹಣವು ಸಂಭವಿಸಲಿದ್ದು, ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ. ಉತ್ತರ ಅಮೇರಿಕಾದ ಪಶ್ಚಿಮ ಭಾಗ, ಪೂರ್ವ ರಷ್ಯಾ, ಜಪಾನ್ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿ ಪೂರ್ಣ ಪ್ರಮಾಣದ ಚಂದ್ರಗ್ರಹಣವು ಗೋಚರಿಸಲಿದೆ ಮತ್ತು ಭಾರತದ ಪೂರ್ವ ಭಾಗದಲ್ಲಿನ ಅಗರ್ತಲಾ, ಭುವನೇಶ್ವರ್, ಡಾರ್ಜಿಲಿಂಗ್, ಗುವಾಹಟಿ, ಪೋರ್ಟ್ ಬ್ಲೇರ್ ಮುಂತಾದ ಪ್ರದೇಶಗಳಲ್ಲಿಯೂ ಪೂರ್ಣ ಪ್ರಮಾಣದ ಚಂದ್ರಗ್ರಹಣವು ಗೋಚರಿಸಲಿದೆ ಎಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಶಿಕ್ಷಣ ಸಹಾಯಕರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಚಂದ್ರಗ್ರಹಣವು ಪಾರ್ಶ್ವವಾಗಿ ಗೋಚರಿಸುತ್ತಿದ್ದು, ಭೂಮಿಯ ಛಾಯಾ ಪ್ರದೇಶದಲ್ಲಿ ಕೇವಲ ಚಂದ್ರನ ಒಂದು ಭಾಗವಷ್ಟೇ ಹಾದುಹೋಗುವುದರಿಂದ ಈ ಪಾರ್ಶ್ವ ಚಂದ್ರಗ್ರಹಣದ ಗೋಚರತೆಗೆ ಕಾರಣವಾಗಿರುತ್ತದೆ. ಪಾರ್ಶ್ವ ಚಂದ್ರಗ್ರಹಣವು ರಾಯಚೂರಿನಲ್ಲಿ ಸಂಜೆ 05 ಗಂಟೆ 46 ನಿಮಿಷಕ್ಕೆ ಆರಂಭವಾಗುತ್ತಿದ್ದು, 5 ಗಂಟೆ 57 ನಿಮಿಷಕ್ಕೆ ಗರಿಷ್ಠ ಮಟ್ಟವನ್ನು ತಲುಪಿ, 7 ಗಂಟೆ 26 ನಿಮಿಷಕ್ಕೆ ಕೊನೆಗೊಳ್ಳುತ್ತದೆ. 

ಆದರೆ ಗ್ರಹಣದ ಗೋಚರ ಅವಧಿಯು ಕೇವಲ 33 ನಿಮಿಷಗಳಾಗಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು ಬರಿಗಣ್ಣಿನಿಂದ ಅಥವಾ ದೂರದರ್ಶಕದ ಮೂಲಕ ವೀಕ್ಷಿಸಬಹುದಾಗಿರುತ್ತದೆ. ಗ್ರಹಣ ವೀಕ್ಷಣೆಗಾಗಿ ಆಸಕ್ತರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಆಗಮಿಸಬಹುದಾಗಿದೆ ಎಂದು ತಿಳಿಸಿದ್ದಾರೆ. 


Share: