ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನಮ್ಮದು ಶಾಂತಿಯುತ ರಾಜ್ಯ. ಹೇಗೆ ಇರಬೇಕೆಂಬುದು ನಮಗೆ ಗೊತ್ತಿದೆ : ಸಿಎಂ ಬಸವರಾಜ ಬೊಮ್ಮಾಯಿ.

ನಮ್ಮದು ಶಾಂತಿಯುತ ರಾಜ್ಯ. ಹೇಗೆ ಇರಬೇಕೆಂಬುದು ನಮಗೆ ಗೊತ್ತಿದೆ : ಸಿಎಂ ಬಸವರಾಜ ಬೊಮ್ಮಾಯಿ.

Mon, 11 Apr 2022 20:09:38  Office Staff   SO News

ಉಡುಪಿ : ರಾಜ್ಯದಲ್ಲಿ ಅವರವರ ರಕ್ಷಣೆ ಮಾಡಿಕೊಳ್ಳಲು ಅವರು ಸ್ವತಂತ್ರರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದರು. ಸರಕಾರ ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದೆ. ಕೆಲವೊಂದು ಕಾನೂನುಗಳನ್ನು ಹಿಂದಿನ ಸರಕಾರವೇ ಜಾರಿಮಾಡಿದೆ. ನಾವೇನು ಹೊಸ ಕಾನೂನುಗಳನ್ನು ಮಾಡಿಲ್ಲ ಎಂದರು.
 
ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ನಾವು ಕೆಲಸದ ಮೂಲಕವೇ ಉತ್ತರ ಕೊಡುತ್ತಿದ್ದೇವೆ. ಕಾನೂನು ಪಾಲನೆ ವಿಚಾರದಲ್ಲಿ ಇವರಿಂದ ನಾವು ಕಲಿಯಬೇಕಾಗಿಲ್ಲ. ಹಲವಾರು ಕೊಲೆ ಆರೋಪಿಗಳನ್ನು ಕಾಂಗ್ರೆಸ್ ಸರಕಾರವೇ ಬಿಡುಗಡೆ ಮಾಡಿತ್ತು

 ಹಲವಾರು ಕೊಲೆ ಪ್ರಕರಣಗಳಲ್ಲಿ ನೇರ ಭಾಗಿಯಾಗಿದ್ದವರ ಸಂಸ್ಥೆಗಳ ಮೇಲೆ ಇದ್ದ  ಕೇಸನ್ನ ಕಾಂಗ್ರೆಸ್  ಹಿಂಪಡೆದಿತ್ತು ಎಂದರು.
ನಮ್ಮದು ಅತ್ಯಂತ ಪ್ರಗತಿಪರ ಮತ್ತು ಶಾಂತಿಯುತ ರಾಜ್ಯ. ಇದನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದು ನಮಗೆ ಗೊತ್ತಿದೆ ಎಂದು  ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


Share: