ಭಟ್ಕಳ: ಭಟ್ಕಳದ ನಗರ ಹಾಗೂ ಗ್ರಾಮಾಂತರ ಪೊಲೀಸ ಠಾಣೆಯವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ
ಹೆಲ್ಮೆಟ್ ಧರಿಸುವಂತೆ ಬೈಕ್ ರ್ಯಾಲಿ ನಡೆಸುವುದರ ಮೂಲಕ ಜಾಗೃತಿ ಮೂಡಿಸಿದರು.
ಕಳೆದ ಕೆಲ ದಿನಗಳ ಹಿಂದಷ್ಟೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಮನ.ಡಿ.ಪನ್ನೇಕರ್ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ದ್ವಿಚಕ್ರ ವಾಹನ ಸವಾರರು ನಿಯಮಗಳನ್ನು ಉಲ್ಲಂಘಿಸಿ ತಾಲ್ಲೂಕಿನಲ್ಲಿ ಬೈಕ್ ಚಲಿಸುತ್ತಿರುವ ಬಗ್ಗೆ ದೂರು ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ನಗರ ಹಾಗೂ ಗ್ರಾಮಾಂತರ ಠಾಣಾ ಸಿಪಿಐಗಳಾದ ದಿವಾಕರ್ ಹಾಗೂ ಮಹಾಬಲೇಶ್ವರ ನಾಯ್ಕ ನೇತೃತ್ವದಲ್ಲಿ ಪೊಲೀಸ್ ಪೇದೆಗಳು ಹೆಲ್ಮೆಟ್ ಧರಿಸಿ ಎರಡೂ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಿಗೆ ಬೈಕ್ ರ್ಯಾಲಿ ನಡೆಸಿ, ದ್ವಿಚಕ್ರ ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ನಿಯಮವನ್ನು ಪಾಲಿಸಬೇಕೆಂದು
ಎಂದು ಜಾಗತಿ ಮೂಡಿಸಿದರು.
ಭಟ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಸಾರದಹೊಳೆಯಿಂದ ಶಿರಾಲಿ ಮಾರ್ಗವಾಗಿ ಶಂಸುದ್ದಿನ್ ಸರ್ಕಲನಿಂದ ತೆಂಗಿನಗುಂಡಿ, ಹೆಬ್ಳೆ, ಗಾಂಧಿನಗರ,ಬೆಳಕೆಯಿಂದ ಪುರವರ್ಗದಲ್ಲಿ ಅಂತ್ಯವಾಯಿತು
ನಂತರ ಭಟ್ಕಳ ನಗರ ಠಾಣೆಯ ಪೊಲೀಸರು ತೆಂಗಿನ ಗುಂಡಿ ಸರ್ಕನಿಂದ ಭಟ್ಕಳ ಶಂಸುದ್ದಿನ್ ಮಾರ್ಗವಾಗಿ ಬಂದರ ರಸ್ತೆಯಿಂದ ನಗರ ವ್ಯಾಪ್ತಿಯಲ್ಲಿ ಬರುವ ಸ್ಥಳಗಲ್ಲಿ ರ್ಯಾಲಿ ನಡೆಸಿ ಸಾರ್ವಜನಿಕ ರಲ್ಲಿ ಅರಿವು ಮೂಡಿಸಿದರು
ಈ ವೇಳೆ ಗ್ರಾಮಾಂತರ ಠಾಣೆಯ ಸಿ.ಪಿ.ಐ ಮಹಾಬಲೇಶ್ವರ ನಾಯ್ಕ ಮಾತನಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದ ಮೆರೆಡಿ ವೈಎಸ್ಪಿ ಕೆ.ಯು ಬೆಳ್ಳಿಯಪ್ಪನವರ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಲು ಈ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದ ಅವರು ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ತ್ರಿಬಲ್ ರೈಡ್ ಮಾಡದಂತೆ ಮತ್ತು ಬೈಕಗೆ ಕರ್ಕಸ ಶಬ್ದದ ಸೈಲೆಂಸರ್ ಬಳಸದಂತೆ ಹೇಳಿದರು. ಅದೇ ರೀತಿ ವಾಹನ ಚಲಾಯಿಸುವಾಗ ಮೊಬೈಲಗಳಲ್ಲಿ ಮಾತಾಡುತ್ತಾ ವಾಹನ ಚಲಾಯಿಸಿದವರಿಗೆ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು 18 ವರ್ಷದ ಕೆಳಗಿನ ಮಕ್ಕಳಿಗೆ ಬೈಕ್ ನೀಡದಂತೆ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಾಂತರ ಠಾಣಾ ಸಿಪಿಐಗಳಾದ ದಿವಾಕರ್ ಹಾಗೂ ಮಹಾಬಲೇಶ್ವರ ನಾಯ್ಕ,ನಗರ ಹಾಗೂ ಗ್ರಾಮಾಂತರ ಠಾಣಾಯ ಪಿ.ಎಸ್.ಐ ಗಳಾದ ಸುಮಾ ಆಚಾರ್ಯ, ಹನುಮಂತಪ್ಪ ಕೂಡಗುಂಟಿ, ಭರತ್ ನಾಯಕ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು