ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಜೇಶ್ವರ:ಕನ್ನಡ ಹೋರಾಟಗಾರ ಬೀರಂತಬೈಲು ಬಾಬುರಾವ್ ನಿಧನ

ಮಂಜೇಶ್ವರ:ಕನ್ನಡ ಹೋರಾಟಗಾರ ಬೀರಂತಬೈಲು ಬಾಬುರಾವ್ ನಿಧನ

Thu, 14 Jan 2010 14:43:00  Office Staff   S.O. News Service
ಮಂಜೇಶ್ವರ, ಜನವರಿ 14: ಹಿರಿಯ ಕನ್ನಡ ಹೋರಾಟಗಾರ ಬೀರಂತಬೈಲು ಬಾಬುರಾವ್ ನಿಧನರಾದರು. ಅವರಿಗೆ ೧೦೨ ವಯಸ್ಸಾಗಿತ್ತು.ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು ಐದು ದಶಕಗಳ ಶೀಘ್ರ ಲಿಪಿಕಾರನಾಗಿ ಸೇವೆ ಸಲ್ಲಿಸಿದ್ದ ಅವರು ನಿವೃತ್ತಿಯ ನಂತರ ಬೀರಂತ ಬೈಲಿನಲ್ಲಿ ವಾಸ್ತವ್ಯ ಹೂಡಿದ್ದರು. ಕನ್ನಡಪರವಾದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. 

ಮಂಜೇಶ್ವರ:ಮಟ್ಕಾ : ಐವರ  ಬಂಧನ
 
ಕಾಸರಗೋಡು ಹಳೆ ಬಸ್ ನಿಲ್ದಾಣ ಬಳಿ ಕಟ್ಟಡವೊಂದರಲ್ಲಿ ಮಟ್ಕಾದಲ್ಲಿ ನಿರತರಾಗಿದ್ದ ಐವರನ್ನು ನಗರ ಠಾಣಾ ಸಬ್ ಇನ್ಸಪೆಕ್ಟರ್ ಬಾಬೂ ಪೆರಿಂಗಾತ್ ನೇತೃತ್ವದ ಪೋಲೀಸರ ತಂಡ ಬಂಧಿಸಿದೆ. ಬಂಧಿತರನ್ನು ಮುನೀರ್(೨೫), ಮುಳಿಯಾರ್ ಮಾಸ್ತಿಕುಂಡುವಿನ ಹಸೈನಾರ್(೨೪), ಮಧೂರಿನ ಜಲೀಲ್(೨೧), ಚೆರ್ಕಳದ ಮುಸ್ತಫಾ(೧೯) ಅನಂಗೂರಿನ ಅಬ್ದುಲ್‌ಗಸಾಲಿ ಎಂದು ಗುರುತಿಸಲಾಗಿದೆ. ಇವರಿಂದ ದಂದೆಗೆ ಬಳಸಿದ ೧೦೩೦ ರೂವನ್ನು ವಶ ಪಡಿಸಿಕೊಳ್ಲಲಾಗಿದೆ. 


ಮಂಜೇಶ್ವರ:ಕ್ರಿಕೆಟ್ ಪಂದ್ಯಾಟ
 
ಚಾಲೆಂಜರ್‍ಸ್ ಅಕ್ಕರೆ ಉದ್ಯಾವರ ಕ್ಲಬ್ ಆಶ್ರಯದಲ್ಲಿ ಈ ತಿಂಗಳ ೧೬ ಶನಿವಾರ ಹಾಗೂ ೧೭ ಭಾನುವಾರ ೭ ಜನರ ಕ್ರಿಕೆಟ್ ಪಂದ್ಯಾಟವು ಚಾಲೆಂಜರ್‍ಸ್ ಕ್ರೀಡಾಂಹಣದಲ್ಲಿ  ನಡೆಯಲಿದೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ೨೦೧೨ ಹಾಗೂ ದ್ವಿತೀಯ ಬಹುಮಾನ ೧೦೧೧ ನೀಡಲಾಗೂವುದೆಂದು ಪ್ರಕಟನೆ ತಿಳಿಸಿದೆ. 


ಮಂಜೇಶ್ವರ:ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಹಾಗೂ ಮ್ಯೂಸಿಕಲ್ ರಾಫಿ ನೈಟ್

ಮಂಜೇಶ್ವರ, ಜನವರಿ 14: ಲಕ್ಕಿ ಸ್ಟಾರ್ ಸಿಂಗ್ ಸಾಂಗ್ ಹೊಸಂಗಡಿ ಆಶ್ರಯದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಹಾಗೂ ಮ್ಯೂಸಿಕಲ್ ನೈಟ್ ೧೬ ಶನಿವಾರ ರಾತ್ರಿ ಹೊಸಂಗಡಿ ಪೇಟೆ ಸಮೀಪದ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ೫೦೫೫ ಹಾಗೂ ದ್ವಿತೀಯ ೨೦೨೨ ನೀಡಲಾಗೂವುದೆಂದು ಪ್ರಕಟನೆ ತಿಳಿಸಿದೆ.

ಸರ್ಕಾರಿ ಬಸ್ ಒದಗಿಸಲು ಆಗ್ರಹ

ಕಾಸರಗೊಡು- ಮಂಜೇಶ್ವರ ದಾರಿಯಾಗಿ ಮಚ್ಚಂಪಾಡಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಾರಂಭಿಸಬೇಕೆಂದು  ಮಚ್ಚಂಪಾಡಿ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಮೆಮೋರಿಯಲ್ ಆರ್ಟ್ಸ & ಸ್ಪೋರ್ಟ್ಸ್ ಕ್ಲಬ್ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸಿದೆ. ಆರಿಫ್ ಮಚ್ಚಂಪಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಫಾರೂಕ್ ಪಳ್ಲಂ, ಫಯಾಸ್, ಶಂಸುದ್ದೀನ್ , ರಿಯಾಸ್, ಫಯಾಸ್ ಎಂ.ಬಿ, ಹಾಗೂ ಹಾರಿಸ್ ,ಫಾರೂಕ್,ಬಶೀರ್ ಪಳ್ಲಂ ಮೊದಲಾದವರು ಉಪಸ್ತಿತರಿದ್ದರು.


Share: