ಕಾರವಾರ : ತಾಲೂಕಿನ ದೇವಭಾಗ್ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೆಬರಹ ಪತ್ತೆಯಾಗಿದೆ.
ಇಂಡೋ ಫೆಸಿಫಿಕ್ ಪ್ರಭೇದಕ್ಕೆ ಸೇರಿದ ಡಾಲ್ಫಿನ್ ಸಾವನ್ನಪ್ಪಿದೆ. ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಹೇರಳವಾಗಿ ಡಾಲ್ಫಿನ್ ಇದ್ದು, ಮೀನುಗಾರರ ಬಲೆಗೆ ಸಿಲುಕಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಕಡಲ ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಕಡಲವಿಜ್ನಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.