ಭಟ್ಕಳ: ತಾಲೂಕಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಸಕಲ ರೀತಿಯಿಂದಲೂ ಸಿದ್ಧತೆ ನಡೆದಿದೆ. ತರೇವಾರಿ ಮಡಿಕೆ, ಹಣತೆಗಳು, ಮೊಗೆ, ಸೌತೆ ಸೇರಿದಂತೆ ವಿಭಿನ್ನ ತರಕಾರಿ, ಹೂವುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ವ್ಯಾಪಾರ ವಹಿವಾಟು ಚುರುಕು ಪಡೆದುಕೊಂಡಿದೆ.
ದೀಪಾವಳಿಯ ಅಂಗವಾಗಿ ಲೋಹರ ಪಾತ್ರಗಳನ್ನು ಮರೆಯುವ ಹಾಗೆ ವಿಭಿನ್ನ ಗಾತ್ರದ ಹೂದೆ, ಮಡಿಕೆಗಳು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ. ಆಧುನಿಕತೆಗೆ ವಾಲಿಕೊಂಡು, ಲೋಹ, ಪ್ಲಾಸ್ಟಿಕ್‌ಗಳಲ್ಲಿ ಜೀವ ತೇವ ಜನರೆಲ್ಲ ದೀಪಾವಳಿಯ ಈ ಸಂದರ್ಭದಲ್ಲಿ ಕುಂಬಾರನನ್ನು ನೆನೆಯ ಲಾರಂಭಿಸಿದ್ದಾರೆ. ತಾಲೂಕಿನ ಚಿತ್ತಾಪುರ, ಮುರುಡೇಶ್ವರದಲ್ಲಿ ಸಿದ್ಧವಾದ ಮಣ್ಣಿನ ಮಡಿಕೆಗಳು ಮಾರುಕಟ್ಟೆಗೆ ಬಂದಿದ್ದರೆ, ಹಣತೆ, ಲಾಟೀನು, ಇತರೇ ಕಲಾಕೃತಿಗಳನ್ನು ಮಾರ್ಗವಾಗಿ ತರಿಸಿಕೊಳ್ಳಲಾಗಿದೆ. ನಮ್ಮದು ಮಡಿಕೆ ಮಾಡುವ ವ್ಯಕ್ತಿ ತಲೆತಲಾಂತರಗಳಿಂದ ನಮ್ಮ ಕುಟುಂಬದವರು ಈ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಕುಲಕಸುಬನ್ನು ಬಿಡಬಾರದು ಎನ್ನುವ ಕಾರಣಕ್ಕೆ ಮಕ ಮಾಡುವ ಕಾಯಕವನ್ನು ಮುಂದುವರೆಸಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಮಡಿಕೆ ಮಾಡುವ ಮಣ್ಣು ಬಹಳ ದುಬಾರಿಯಾಗುತ್ತಿದೆ. ಒಂದು ಟಿಪ್ಪರ್ ಮಣ್ಣಿಗೆ 17 ಸಾವಿರ ರುಪಾಯಿ ನೀಡುತ್ತಿದ್ದೇವೆ, ಒಂದು ಟಿಪ್ಪರ್ ಮಣ್ಣು ನಮಗೆ 2 ವರ್ಷಕ್ಕೆ ಸಾಕಾಗುತ್ತದೆ. ಆದರೆ, ಹಣತೆ,ಬೇರೆ ಬೇರೆ ಕಲಾಕೃತಿಗಳನ್ನು ನಾವು ಬೆಂಗಳೂರಿನಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ವೃತ್ತಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ
ಇಲ್ಲಿನ ಚಿತ್ರಾಪುರದ ನಿವಾಸಿ ಮಂಜುನಾಥ ಕುಂಬಾರ, ಮುರುಡೇಶ್ವರ, ಮಂಕಿ ಕಡೆಗಳಿಂದಲೂ ಕೆಲವರು ಮಣ್ಣಿನ ಮಡಿಕೆಗಳನ್ನು ಭಟ್ಕಳ ಪೇಟೆಗೆ ಮಾರಾಟಕ್ಕೆ ಇಟ್ಟುಕೊಂಡಿರುವುದು ಕ೦ಡು ಬ೦ದಿದೆ. ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹೆಗಲು ಕೊಡುತ್ತ ಬಂದಿರುವ ಈ ಮಡಿಕೆ ಮಾರಾಟಗಾರರ ಬಗ್ಗೆ ಗ್ರಾಹಕರಲ್ಲಿಯೂ ಆತೀವ ಸಂತಸ ಕಂಡುಬಂದಿದೆ, ಬಟ್ಟೆ ಅಂಗಡಿಗಳಲ್ಲಿ ದೀಪಾವಳಿಯ ಪ್ರಯುಕ್ತ ಜನರ ಓಡಾಟ ಹೆಚ್ಚಾಗಿದೆ. ತರಕಾರಿ ಅಂಗಡಿಗಳಲ್ಲಿಯೂ ಮಾರಾಟ ಜೋರಾಗಿದೆ. ರಸ್ತೆಯ ಬದಿಯಲ್ಲಿಯೇ ಮೂಟೆಗಟ್ಟಲೆ
ಮೊಗೇ ಕಾಯಿ, ಸೌತೆ ಕಾಯಿ ಬಂದಿಳಿದಿದೆ, ಹಾವೇರಿ ಕಡೆಯಿಂದ ಹೂ ಮಾರಾಟಗಾರರೂ ಭಟ್ಕಳದತ್ತ ಮುಖ ಮಾಡಿದ್ದಾರೆ