ಉಡುಪಿ, ಜ.13: ಬೆಲೆ ಏರಿಕೆಯ ವಿರುದ್ಧ ಹಾಗೂ ಆಹಾರ ಹಕ್ಕಿಗಾಗಿ ಆಗ್ರಹಿಸಿ ಸಿಪಿಎಂ ಮತ್ತು ಸಾಮೂಹಿಕ ಸಂಘಟನೆಗಳು ಬುಧವಾರ ಉಡುಪಿ ತಾಲೂಕು ಕಚೇರಿಯ ಎದುರು ಸಾಮೂಹಿಕ ಧರಣಿ ಮತಪ್ರದರ್ಶನ ನಡೆಸಿದವು.
ಕೇಂದ್ರ ಸರಕಾರ ದೇಶದಾದ್ಯಂತ ಬಿಪಿಎಲ್ ಕಾರ್ಡ್ಗಳನ್ನು ಮತ್ತಷ್ಟು ಕಡಿತ ಮಾಡಲು ಮುಂದಾಗಿದೆ. ರಾಜ್ಯ ಬಿಜೆಪಿ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಗಳಾದ ೨ರೂ. ಕೆ.ಜಿ. ಅಕ್ಕಿ ಹಾಗೂ ಬಿಪಿಎಲ್ ಕಾರ್ಡ್ಗೆ ಆದಾಯ ಮಿತಿ ೩೦ಸಾವಿರ ರೂ. ಹೆಚ್ಚಳವನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.
ಅವಶ್ಯಕ ಸರಕುಗಳಲ್ಲಿ ಎಲ್ಲ ಮುಂಗಡ ವ್ಯಾಪಾರಗಳನ್ನು ನಿಷೇಧಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕು. ಬರ ಹಾಗೂ ನೆರೆ ಪೀಡಿತ ಸಂತ್ರಸ್ತರ ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ತನಕ ತಿಂಗಳಿಗೆ ೩೫ಕೆ.ಜಿ. ಆಹಾರ ಧಾನ್ಯವನ್ನು ಮತ್ತು ಅಗತ್ಯವಿರುವಷ್ಟು ಸೀಮೆಎಣ್ಣೆ ಉಚಿತವಾಗಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಬೆಳೆಹಾನಿ ಅನುಭವಿಸಿರುವ ರೈತರಿಗೆ ಎಕ್ರೆಗೆ ೧೦ಸಾವಿರ ರೂ. ಪರಿಹಾರ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಕೂಲಿಯನ್ನು ೧೫೦ರೂ.ಗೆ ಏರಿಸಿ ವರ್ಷದಲ್ಲಿ ೨೦೦ದಿನಗಳ ಕೆಲಸ ಒದಗಿಸಬೇಕು. ಎಲ್ಲ ಕುಟುಂಬಗಳಿಗೆ ಪಡಿತರ ಚೀಟಿ ನೀಡಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಬೇಕು. ಪ್ರತಿ ಕುಟುಂಬಕ್ಕೆ ರೇಷನ್ ಮೂಲಕ ಕೆ.ಜಿ.ಗೆ ಎರಡು ರೂ. ದರದಲ್ಲಿ ೩೫ಕೆ.ಜಿ. ಆಹಾರಧಾನ್ಯ ಒದಗಿಸಬೇಕು. ಬೇಳೆ ಕಾಳು, ಸಕ್ಕರೆ, ಅಡಿಗೆ ಎಣ್ಣೆ, ಸೀಮೆಎಣ್ಣೆ ಮೊದಲಾದ ೧೪ ಜೀವನಾವಶ್ಯಕ ವಸ್ತುಗಳನ್ನು ಕಡಿಮೆದರದಲ್ಲಿ ರೇಷನ್ ಕಾರ್ಡುಗಳ ಮೂಲಕ ಒದಗಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.
ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಅರ್ಪಿಸಲಾಯಿತು. ಧರಣಿಯಲ್ಲಿ ಸಿಪಿಎಂ ಉಡುಪಿ ತಾಲೂಕು ಕಾರ್ಯದರ್ಶಿ ಪಿ.ವಿಶ್ವನಾಥ ರೈ, ಅದಮಾರು ಶ್ರೀಪತಿ ಆಚಾರ್ಯ, ದೋಗು ಸುವರ್ಣ, ಕವಿರಾಜ್, ವಿದ್ಯಾರಾಜ್, ವಾದಿರಾಜ್ ಬುದಿಯಾ, ರಮೇಶ್ ಮೆಂಡನ್, ಶಶಿಧರ ಗೊಲ್ಲ, ದಾಮೋದರ ಮೆಸ್ತ್ರಿ, ಲಕ್ಷ್ಮಣ್ ಮೊದಲಾದವರು ಉಪಸ್ಥಿತರಿದ್ದರು