ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದಾಂಡೇಲಿಯಲ್ಲಿ ವ್ಯಕ್ತಿ ಎಳೆದೊಯ್ದ ಮೊಸಳೆ. ಆತಂಕ.

ದಾಂಡೇಲಿಯಲ್ಲಿ ವ್ಯಕ್ತಿ ಎಳೆದೊಯ್ದ ಮೊಸಳೆ. ಆತಂಕ.

Sun, 14 Aug 2022 05:56:36  Office Staff   SO News

ದಾಂಡೇಲಿ: ನಗರದ  ಅಲೈಡ್ ಪ್ತದೇಶದ ಕಾಳಿ ನದಿಯಲ್ಲಿ ವ್ಯಕ್ತಿಯೋರ್ವನನ್ನ‌ ಮೊಸಳೆ ಎಳೆದುಕೊಂಡ ಹೋದ ಘಟನೆ  ಶನಿವಾರ  ನಡೆದಿದೆ.

ಸುರೇಶ್ ವಸಂತ ತೇಲಿ (44) ಮೊಸಳೆ ದಾಳಿಗೊಳಗಾದ ವ್ಯಕ್ತಿ ಎಂದು ಹೇಳಲಾಗಿದ್ದು, ಮೀನು ಹಿಡಿಯುತ್ತಿದ್ದಾಗ ಘಟನೆ ನಡೆದಿದೆ.

ಈತನಿಗೆ  ಒಂದು ಗಂಡು ಎರಡು ಹೆಣ್ಣು ಮಕ್ಕಳಿದ್ದಾರೆ‌. ಘಟನೆ ನಡೆದಾಕ್ಷಣ ಆತ ಕೂಗಿಕೊಂಡಾಗ ಮೊಸಳೆ ಎಳೆದೊಯ್ದ ಬಗ್ಗೆ ಗೊತ್ತಾಗಿದೆ‌. 

ಸ್ಥಳಕ್ಕೆ ದಾಂಡೇಲಿ ಪೊಲೀಸರು ಭೇಟಿ ‌ನೀಡಿದ್ದಾರೆ. ರಕ್ಷಣಾ ತಂಡದಿಂದ ಶೋಧ ನಡೆಸಲಾಗಿದೆ.


Share: