ಮಂಜೇಶ್ವರ ಜನವರಿ 14 : ಸ್ನೇಹಿತರೊಂದಿಗೆ ಈಜಲೆಂದು ಹೋದ ಶಾಲಾ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೀಯಪದವವು ಬೆಜ್ಜಂಗಳ ಎಂಬಲ್ಲಿ ನಡೆದಿದೆ.
ಮೃತ ಬಾಲಕನನ್ನು ಮೀಯಪದವು ಮುಹಮ್ಮದ್ ಎಂಬವರ ಪುತ್ರ ಮೀಯಪದವು ವಿದ್ಯಾವರ್ದಕ ಯು.ಪಿ ಶಾಲೆಯ ೭ ನೆ ತರಗತಿ ವಿದ್ಯಾರ್ಥಿ ನೌಶಾದ್(12) ಎಂದು ತಿಳಿದು ಬಂದಿದೆ. ಇಂದು ಸಂಜೆ ಶಾಲಾ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲೆಂದು ಹೋದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದ್ದು ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ