ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನಿಗೆ ಕೊಲೆ ಬೆದರಿಕೆ

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನಿಗೆ ಕೊಲೆ ಬೆದರಿಕೆ

Mon, 13 Jun 2022 01:18:35  Office Staff   S.O. News Service


ಬೆಂಗಳೂರು: ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನಿಗೆ ಸ್ಕೆಚ್​​ ಹಾಕಲಾಗಿದ್ದು,  ಮುತ್ತಪ್ಪ ರೈ ಅಪ್ತ ಬಳಗದಲ್ಲಿ ಮತ್ತೆ ‘ರೈ’ವಲ್ರಿ ಯಾಗಿದೆ.
ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ದಿವಂಗತ ಮುತ್ತಪ್ಪ ರೈ ಅಪ್ತ ಬಳಗದಲ್ಲಿ ಕೋಲ್ಡ್ ವಾರ್ ಆರಂಭವಾಗಿರುವ ಬಗ್ಗೆ ವದಂತಿ ಹರಡಿದ್ದು, ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಗೃಹ ಸಚಿವರಿಗೆ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ದೂರು ಕೊಟ್ಟಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ಗುಣರಂಜನ್ ಶೆಟ್ಟಿ ದೂರು ಕೊಟ್ಟಿದ್ದು,  ತನ್ನ ವಿರುದ್ಧ ಕೊಲೆಗೆ ಸ್ಕೆಚ್ ನಡೆದಿದೆ ಎಂದು ಆರಗಗೆ ದೂರು ನೀಡಿದ್ದಾರೆ. ಆದರೆ ತಾನು ವಿದೇಶದಲ್ಲಿರುವುದಾಗಿ ಹೇಳುತ್ತಿರುವ ಮನ್ಮಿತ್ ರೈ,ಬ್ಯುಸಿನೆಸ್ ವಿಚಾರವಾಗಿ ವಿದೇಶದಲ್ಲಿರುವುದಾಗಿ ಮನ್ಮಿತ್ ರೈ ಹೇಳುತ್ತಿದ್ದಾರೆ.  ಈ ಹಿಂದೆಯೂ ಮುತ್ತಪ್ಪ ರೈ ಅಪ್ತ ಬಳಗದ ಗಲಾಟೆ  ಸದ್ದು ಮಾಡಿತ್ತು.


Share: