ಕರ್ನಾಟಕದ ಕರಾವಳಿಯಲ್ಲಿ ಹಿಂದುತ್ವವಾದಿ ಮತಾಂಧ ಪುಂಡರ ಅಟ್ಟಹಾಸ ಮೇರೆ ಮೀರುತ್ತಿದೆ. ಫೆಬ್ರವರಿ 4 ರ ರಾತ್ರಿ 10ರ ಹೊತ್ತಲ್ಲಿ ಎಸ್ಸೆಫೈ ಸುರತ್ಕಲ್ ವಲಯ ಕಾರ್ಯದರ್ಶಿ ಮುನೀಬ್, ಕಾರ್ಯಕರ್ತರಾದ ನಿಜಾಮುದ್ದೀನ್, ಯಾಕೂಬ್, ಅಜರುದ್ದೀನ್, ಅಕ್ರಂ, ನೌಫಾಲ್ ಅಲ್ತಾಫ್ ಇವರ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಮುನೀಬರಿಗೆ ತಲೆಗೆ ತೀವ್ರತರ ಪೆಟ್ಟಾಗಿದ್ದು ತುರ್ತ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರೂ ಚಿಕಿತ್ಸೆಯಲ್ಲಿದ್ದಾರೆ.ಹಲ್ಲೆಯನ್ನು ಪ್ರಜಾಪ್ರಭುತ್ವ ಪ್ರೇಮಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಮಂಗಳೂರು, ಕುಂದಾಪುರ ಮುಂತಾದೆಡೆ ತೀವ್ರವಾದ ಪ್ರತಿಭಟನೆಗಳು ನಡೆದಿವೆ. ಘಟನೆಗೆ ಸಂಬಂಧಿಸಿ ಭಜರಂಗದಳದ ಸಂದೇಶ, ಅಶೋಕ್ ಹೆನ್ರಿ ಫೆರಾವೋ, ಹಿತೇಶ್ ಎಂಬುವವರನ್ನು ಬಂಧಿಸಲಾಗಿದೆ. ಎಲ್ಲಾ ಅಪರಾಧಿಗಳ ಬಂಧನ, ತಕ್ಕ ಶಿಕ್ಷೆಗೆ ಒತ್ತಾಯಿಸಲಾಗಿದೆ. ಹಿಂದೂ- ಮುಸ್ಲಿಂ ಎಂಬ ಬೇಧ ಭಾವವಿಲ್ಲದೆ ವಿದ್ಯಾರ್ಥಿಗಳು ಸ್ನೇಹಭಾವದಿಂದ ವರ್ತಿಸುವುದು, ಬೆರೆಯುವುದು ಭಜರಂಗದಳದ ಕಾರ್ಯಕರ್ತರು ಈ ರೀತಿ ಮೃಗಗಳಂತೆ ಕೆರಳುವುದಕ್ಕೆ ಕಾರಣವಾಗಿರುವುದು ದುರಂತವಾಗಿದೆ.
ಸೌಜನ್ಯ: ಜನಶಕ್ತಿ