ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಡಿ.೨೩ ರಂದು ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘಕ್ಕೆ ನಿಧಿ ಅರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಡಿ.೨೩ ರಂದು ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘಕ್ಕೆ ನಿಧಿ ಅರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Wed, 20 Dec 2023 00:18:10  Office Staff   SOnews


ಭಟ್ಕಳ:  ಭಟ್ಕಳ ತಾಲೂಕಿನ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದಿAದ ಡಿಸೆಂಬರ ೨೩ ಶನಿವಾರದಂದು ಸಂಜೆ ೫-೩೦ ಕ್ಕೆ ನಾಗಯಕ್ಷೆ  ಸಭಾಭವನದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿ ಸಮರ್ಪಣಾ  ಕಾರ್ಯಕ್ರಮ ನೆರವೇರಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಾಜ್ಯ ಮೀನುಗಾರಿಕಾ ಸಚಿವರು ಹಾಗೂ ಉ.ಕ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಕಾರ್ಯಕ್ರಮ  ಉದ್ಘಾಟಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಭಟ್ಕಳ ಉಪ ವಿಭಾಗದ ಸಹಾಯಕ ಅಯುಕ್ತೆ ನಯನಾ ಎಸ್, ಡಿ.ವೈ.ಎಸ್.ಪಿ.  ಕೆ. ಶ್ರೀಕಾಂತ್ ಹಾಗೂ ನಾಗಯಕ್ಷೆ ಸಭಾಭವನದ ಧರ್ಮದರ್ಶಿ ರಾಮದಾಸ್ ಪ್ರಭು ಉಪಸ್ಥಿತರಿರುವರು. 

ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಝೇಂಕಾರ ಮೆಲೋಡಿಸ್ ತಂಡದ ನೇತ್ರತ್ವದಲ್ಲಿ ರಾಜ್ಯಮಟ್ಟದ ವಿವಿಧ ಕಲಾ ತಂಡಗಳಿAದ ಸಾಂಸ್ಕçತಿಕ ವೈಭವ   ಕಾರ್ಯಕ್ರಮ  ನಡೆಯಲಿದೆ. 


 


Share: