ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಟಿಪ್ಪರ್ ಹಾಯ್ದು ಹೆಬ್ರಿಯಲ್ಲಿ ಮಲಗಿದ್ದ ಕಾರ್ಮಿಕನ ಸಾವು

ಟಿಪ್ಪರ್ ಹಾಯ್ದು ಹೆಬ್ರಿಯಲ್ಲಿ ಮಲಗಿದ್ದ ಕಾರ್ಮಿಕನ ಸಾವು

Sun, 26 Nov 2023 06:28:27  Office Staff   SO News

ಹೆಬ್ರಿ:  ಮಲಗಿದ್ದ ಕಾರ್ಮಿಕನ ಮೇಲೆ ಟಿಪ್ಪರ್ ಹರಿದ ಪರಿಣಾಮ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿಯಲ್ಲಿ  ನಡೆದಿದೆ

 ಸಾಗರ ತಾಲೂಕಿನ ಕೊರ್ಲಿ ಕೊಪ್ಪ ನಿವಾಸಿ ಶಿವರಾಜ್ ಮೃತ ದುರ್ದೈವಿ  ಎಂದು ಗುರುತಿಸಲಾಗಿದೆ. ಹೆಬ್ರಿ ಸಮೀಪದ ಸೋಮೇಶ್ವರ ಪೆಟ್ರೋಲ್ ಬಂಕ್ ಆವರಣದಲ್ಲಿ  ಈ ದುರ್ಘಟನೆ ನಡೆದಿದೆ. 

ಲಾರಿ ಕಾರ್ಮಿಕ ಶಿವರಾಜ್ ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದರು. ಈ ವೇಳೆ ಪೆಟ್ರೋಲ್ ಹಾಕಿಸಿಕೊಂಡು ಹೋಗುತ್ತಿದ್ದ ಟಿಪ್ಪರ್ ಚಾಲಕ,ಮಲಗಿದ್ದ ಶಿವರಾಜ್ ಮೇಲೆಯೇ ವಾಹನ ಚಲಾಯಿಸಿಕೊಂಡು ಹೋಗಿದ್ದಾನೆ. ಇದರ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


Share: