ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಟರ್ಕಿ - ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 5 ಸಾವಿರಕ್ಕೆ ಏರಿಕೆ: ವರದಿ

ಟರ್ಕಿ - ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 5 ಸಾವಿರಕ್ಕೆ ಏರಿಕೆ: ವರದಿ

Wed, 08 Feb 2023 14:47:16  Office Staff   Vb

ಅಂಕಾರ: ಟರ್ಕಿ ಮತ್ತು ಸಿರಿಯಾ ದಲ್ಲಿ ಸೋಮವಾರ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5,000 ದಾಟಿರುವುದಾಗಿ ಅಂದಾಜಿಸಲಾಗಿದ್ದು, ಕುಸಿದುಬಿದ್ದಿರುವ ಕಟ್ಟಡಗಳ ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದ್ದು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾವಿರಾರು ಕಟ್ಟಡಗಳು ನೆಲಸಮ ವಾಗಿದ್ದು ಕಟ್ಟಡದ ಕಬ್ಬಿಣ, ಅಲ್ಯುಮೀ ನಿಯಂ, ಕಲ್ಲು ಮಣ್ಣಿನ ರಾಶಿಯಡಿ ಬದು ಕುಳಿದವರ ರಕ್ಷಣಾ ಕಾರ್ಯ ಮುಂದುವ ರಿದಿರುವಂತೆಯೇ ಮಂಗಳವಾರಪೂರ್ವ ಟರ್ಕಿಯಲ್ಲಿ ಮತ್ತೊಂದು ಭೂಕಂಪನ ಸಂಭವಿಸಿದೆ. ಕಲ್ಲು ಮಣ್ಣಿನ ರಾಶಿಯಡಿಯಿಂದ ಹಲವು ಮೃತದೇಹಗಳನ್ನು ಹೊರತೆಗೆಯ ಲಾಗಿದೆ. ಈ ಮಧ್ಯೆ ಮಂಜು ಮತ್ತು ಮಳೆ ರಕ್ಷಣಾ ಕಾರ್ಯಾಚರಣೆಯನ್ನು ವಿಳಂಬ ಗೋಳಿಸಿದೆ ಎಂದು ವರದಿಯಾಗಿದೆ. 

ಸಾವಿರಾರು ಮಂದಿ ಸೋಮವಾರ ರಾತ್ರಿಯಿಡೀ ತೀವ್ರ ಚಳಿಯ ಮಧ್ಯೆ ತೆರೆದ ಬಯಲಿನಲ್ಲಿ ಆಶ್ರಯ ಪಡೆದಿದ್ದಾರೆ. ಟರ್ಕಿಯ ಗಝಿಯಾಂಟೆಪ್ ನಗರದಲ್ಲಿ ಸಂತ್ರಸ್ತರಿಗೆ ಶಾಪಿಂಗ್ ಮಾಲ್ ಗಳಲ್ಲಿ, ಕ್ರೀಡಾಂಗಣ, ಮಸೀದಿಗಳು ಹಾಗೂ ಸಮುದಾಯ ಕೇಂದ್ರಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.


Share: