ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜೇನುನೊಣಗಳ ದಾಳಿ: ಹಲವರು ಅಸ್ವಸ್ಥ

ಜೇನುನೊಣಗಳ ದಾಳಿ: ಹಲವರು ಅಸ್ವಸ್ಥ

Wed, 22 Mar 2023 16:36:50  Office Staff   so news

ಭಟ್ಕಳ: ತಾಲೂಕಿನ ಮಾರುಕೇರಿಯಲ್ಲಿ  ದಿಢೀರ್ ಜೇನುನೊಣಗಳ ದಾಳಿಯಿಂದ ಶಾಲಾ ಮಕ್ಕಳು ಸೇರಿದಂತೆ ಹತ್ತಕ್ಕೂ ಅಧಿಕ ಜನರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ನಡೆದಿದೆ. 
ರಸ್ತೆಯಲ್ಲಿ ಬೆಳಗ್ಗೆ ನಡೆದು ಬರುತ್ತಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ, ಬೈಕ್‌ನಲ್ಲಿ ಹೋಗುತ್ತಿದ್ದವರಿಗೆ ಜೇನುನೊಣ ಕಚ್ಚಿದ್ದಲ್ಲದೇ ಇವರು ಓಡಿದರೂ ಬೆನ್ನಟ್ಟಿ ದಾಳಿ ಮಾಡಿವೆ. ಜೇನುನೊಣಗಳಿಂದ ಕಡಿತಕ್ಕೊಳ ಗಾದವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಯಿತು.ಇಬ್ಬರು ಮಹಿಳೆಯರಿಗೆ ಜೇನು ಕಚ್ಚಿದ್ದು, ಇಬ್ಬರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರುಕೇರಿಯಲ್ಲಿ ಜೇನು ನೊಣಗಳ ದಿಢೀರ್ ದಾಳಿಯಿ೦ದ ಜನರು ಒಮ್ಮೆ ಭಯಗೊಳ್ಳುವಂತಾಯಿತು. ಮನೆ, ಅ೦ಗಡಿಗಳಿಗೂ ಜೇನು ನೊಣ ದಾಳಿ ಮಾಡಬಹುದೆಂಬ ಭೀತಿಯಿ೦ದ ಕೆಲಕಾಲ ಜನರು ಮನೆ, ಅ೦ಗಡಿಗಳ ಬಾಗಿಲು ಹಾಕಿ ಒಳಗೆ ಕುಳಿತುಕೊಂಡರು. ಜಾನುವಾರುಗಳಿಗೂ ಜೇನುನೊಣ ಕಚ್ಚಿದ ಬಗ್ಗೆ ವರದಿಯಾಗಿದೆ.


Share: