ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜುಲೈ 30 ರವರೆಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ ಅಭಿಯಾನ. ಮಕ್ಕಳ ವಿಶೇಷ ಗ್ರಾಮ ಸಭೆ

ಜುಲೈ 30 ರವರೆಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ ಅಭಿಯಾನ. ಮಕ್ಕಳ ವಿಶೇಷ ಗ್ರಾಮ ಸಭೆ

Sat, 07 May 2022 01:52:20  Office Staff   SO News

ಧಾರವಾಡ : ಮೇ ತಿಂಗಳ ಮೊದಲನೇ ವಾರದಿಂದ ಜುಲೈ 30 ರವರೆಗೆ 12 ವಾರಗಳ ಕಾಲ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ ಅಭಿಯಾನ ಮತ್ತು ಒಂದು ದಿನದ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ನಡೆಸಲು ಸರ್ಕಾರವು ಸುತ್ತೋಲೆಯನ್ನು ಹೊರಡಿಸಿದೆ. ಧಾರವಾಡ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಜರುಗುವ ಅಭಿಯಾನದ ವೇಳಾಪಟ್ಟಿಯು ಈ ಕೆಳಗಿನಂತೆ ಇರುತ್ತದೆ. 

ಮೇ 7 ರಂದು ಹಾರೊಬೆಳವಡಿ, ಹೆಬ್ಬಳ್ಳಿ ಮತ್ತು ಹೊನ್ನಾಪೂರ, 9 ರಂದು ರಾಮಾಪೂರ, 13 ರಂದು ಅರವಟಿಗೆ, 15 ರಂದು ಶಿವಳ್ಳಿ, 16 ರಂದು ಕನಕೂರ, ನಿಗದಿ, 21 ರಂದು ಕರಡಿಗುಡ್ಡ, 23 ರಂದು ಮಾರಡಗಿ ಮತ್ತು ಕಡಬಗಟ್ಟಿ, 27 ರಂದು ಮರೇವಾಡ ಮತ್ತು ಬೆಣಚಿ, 31 ರಂದು ಮಾದನಬಾವಿ, ಜೂನ್ 1 ರಂದು ತೆಗೂರು ಮತ್ತು ಗರಗ, 4 ರಂದು ಕಲಕೇರಿ, ಪುಡಕಲಕಟ್ಟಿ ಮತ್ತು ಮಂಡಿಹಾಳ, 6 ರಂದು ಮನಗುಂಡಿ, 10 ರಂದು ಕ್ಯಾರಕೊಪ್ಪ ಮತ್ತು ಕೊಟಬಾಗಿ, 13 ರಂದು ಹಂಗರಕಿ, ಯಾದವಾಡ ಮತ್ತು ಮುಗದ, 20 ರಂದು ಲೋಕೂರು ಮತ್ತು ದೇವರಹುಬ್ಬಳ್ಳಿ, 22 ರಂದು ಕೋಟೂರು, 24 ರಂದು ತಡಕೋಡ, ಯರಿಕೊಪ್ಪ, 27 ರಂದು ನರೇಂದ್ರ, 30 ರಂದು ಮನಸೂರು, ಜುಲೈ 1 ರಂದು ಚಿಕ್ಕಮಲ್ಲಿಗವಾಡ, 2 ರಂದು ಕುರುಬಗಟ್ಟಿ, 8 ರಂದು ಹಳ್ಳಿಗೇರಿ, 16 ರಂದು ಬೇಲೂರು, 25 ರಂದು ಮುಮ್ಮಿಗಟ್ಟಿ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ ಮತ್ತು ಒಂದು ದಿನದ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ನಡೆಸಲಾಗುತ್ತಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: