ಕಾರವಾರ: ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಹೊರಬದಿಯಲ್ಲಿ ರಾತ್ರಿ ಮಲಗಿದ್ದ ರೋಗಿ ಸಂಬಂಧಿಕರೊಬ್ಬರ ಮೊಬೈಲ್ ಕದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ ಈ ಆಸ್ಪತ್ರೆಯ ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ.
ಅಂದು ರಾತ್ರಿ ಆಸ್ಪತ್ರೆಯ ಹೆರಿಗೆ ವಾರ್ಡ್ ಪಕ್ಕದಲ್ಲಿ ಹಲವು ರೋಗಿಗಳ ಸಂಬಂಧಿಕರು ಮಲಗಿದ್ದರು. ಕೆಲವರು ಕುರ್ಚಿ ಮೇಲೆ ಕುಳಿತು ಮಾತನಾಡುತ್ತಿದ್ದರು. ಅದೇ ವೇಳೆ ಆಗಮಿಸಿದ ಕಳ್ಳನೋರ್ವ ಮಲಗಿದ ವ್ಯಕ್ತಿ ಬಳಿ ತಾನು ಮಲಗುವ ರೀತಿ ನಟನೆ ಮಾಡಿದ್ದಾನೆ. ನಂತರ ವ್ಯಕ್ತಿಯ ತಲೆಯ ಬಳಿ ಮೊಬೈಲ್ ಕಂಡು ಸಾವಕಾಶವಾಗಿ ಮೊಬೈಲ್ ಎಗರಿಸಿದ್ದಾನೆ. ನಂತರ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಬೆಳಿಗ್ಗೆ ಮೊಬೈಲ್ ಕಳ್ಳತನವಾದ ಬಗ್ಗೆ ವ್ಯಕ್ತಿ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನದ ವಿಷಯ ಗೊತ್ತಾಗಿದೆ.