ಧಾರವಾಡ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಕೃಷಿ ಇಲಾಖೆ, ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ, ಹಾಪ್ ಕಾಮ್ಸ್, ಕರ್ನಾಟಕ ರೈತ ಸಂಘ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 20 ರಿಂದ 22 ವರೆಗೆ ತೋಟಗಾರಿಕೆ ಇಲಾಖೆ ಅವರಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಚಾಲನೆ ನೀಡಿದರು.
ನಂತರ ಅವರು ಫಲಪುಷ್ಪ ಪ್ರದರ್ಶನದಲ್ಲಿ ಏರ್ಪಡಿಸಿದ್ದ ವಿಶೇಷ ಆಕರ್ಷಣೆಗಳಾದ ವಿವಿಧ ಹೂಗಳಿಂದ ಅಲಂಕೃತವಾದ ಅಶ್ವಾರೂಢ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳು, ಫಲಪುಷ್ಪಗಳಲ್ಲಿ ನೆಚ್ಚಿನ ಡಾ. ರಾಜಕುಮಾರ ಹಾಗೂ ಡಾ. ಪುನೀತ ರಾಜಕುಮಾರ ರವರ ಕಲಾಕೃತಿಗಳು ಮತ್ತು ಇತರ ಕಲಾಕೃತಿಗಳನ್ನು ವೀಕ್ಷಿಸಿ, ಸಂತೋಷಪಟ್ಟರು. ಕಲಾವಿದರ ಪ್ರತಿಭೆಯನ್ನು ಮತ್ತು ಕೌಶಲ್ಯವನ್ನು ಶ್ಲಾಘಿಸಿದರು.
ಕೃಷಿ, ತೋಟಗಾರಿಕೆ ಬೆಳೆಗಳು ರೈತರ ಬೆನ್ನೆಲುಬಾಗಿವೆ. ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದ್ದು ಹೆಮ್ಮೆಯ ವಿಷಯವಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖಯಿಂದ ಇಂತಹ ಕಾರ್ಯಕ್ರಮಗಳಿಗೆ ಮಹತ್ವವನ್ನು ನೀಡಬೇಕು ಎಂದು ಬಸವರಾಜ ಹೊರಟ್ಟಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ : ಸುರೇಶ ಇಟ್ನಾಳ ಅವರು ವಿವಿಧ ಹೂವುಗಳಿಗೆ ಅಲಂಕೃತಗೊಂಡ ಕಲಾಕೃತಿಗಳನ್ನು, ಪ್ರತಿಮೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಾಫ್ ಕಾಮ್ಸ್ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣನವರ, ಹಿರಿಯ ಸಹಾಯಕ ನಿರ್ದೇಶಕ ಸಂಗಮೇಶ ಗೋಲಪ್ಪನವರ, ಶಿವಾನಂದ ಪಾಟೀಲ, ಸಂಜಯಕುಮಾರ ಗುಡಿಮನಿ, ಮಹಾಂತೇಶ ಪಟ್ಟಣಶೆಟ್ಟಿ, ವಿಜಯಕುಮಾರ ರ್ಯಾಗಿ, ಸಹಾಯಕ ನಿರ್ದೇಶಕ ಶಿವಾನಂದ ಪಾಟೀಲ, ಪ್ರಶಾಂತ ದೇವರಮನಿ, ಕಾರ್ಯಕಾರಿ ಸಮಿತಿ ಸಂಚಾಲಕ ಎ.ಜಿ. ದೇಶಪಾಂಡೆ ಸೇರಿದಂತೆ ಇತರರು ಭಾಗವಹಿಸಿದ್ದರು.