ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಚಿತ್ರಾಪುರ ಶಾಲಾ ವಿದ್ಯಾರ್ಥಿಗಳ ಸಾಧನೆ.

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಚಿತ್ರಾಪುರ ಶಾಲಾ ವಿದ್ಯಾರ್ಥಿಗಳ ಸಾಧನೆ.

Fri, 30 Sep 2022 03:22:49  Office Staff   SO News

ಭಟ್ಕಳ :  ಸರಕಾರಿ ಪ್ರೌಢ ಶಾಲೆ ತೆಂಗನಗುಂಡಿ ಮೈದಾನದಲ್ಲಿ ನಡೆದ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಚಿತ್ರಾಪುರ ಶಾಲಾ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಸಾಧನೆ ಮೆರೆದಿದ್ದಾರೆ.

ಶಾಲೆಯ ವಿದ್ಯಾರ್ಥಿನಿ ದೀಕ್ಷೀತಾ ಗಣಪತಿ ನಾಯ್ಕ  600 ಮೀಟರ್ ಓಟ, 400 ಮೀಟರ್ ಓಟ, 80 ಮೀಟರ್ ಹರ್ಡಲ್ಸ್  3 ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ವೀರಾಗ್ರಣಿ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

 ಶಾಲೆಯ ವಿದ್ಯಾರ್ಥಿ ಕರುಣ ದೇವೆಂದ್ರ ನಾಯ್ಕ 600  ಮೀಟರ್  ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ ಹಾಗೂ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ಶಾಲೆಯ ವಿದ್ಯಾರ್ಥಿನಿ ರಶ್ಮೀತಾ ಗಣಪತಿ ದೇವಡಿಗ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಅಯ್ಕೆಯಾಗಿರುತ್ತಾಳೆ. ಬಾಲಕಿಯರ  ಖೋ ಖೋ  ದ್ವಿತೀಯ ಸ್ಥಾನ ಪಡೆದು 3  ವಿದ್ಯಾರ್ಥಿನಿಯರಾದ ದೀಪಿಕಾ ಗೋಯ್ದ ನಾಯ್ಕ ,ಯಶಸ್ವಿನಿ‌ ವೆಂಕಟ್ರಮಣ ನಾಯ್ಕ , ಜಯಾ  ವೆಂಕಟ್ರಮಣ ನಾಯ್ಕ  ಬೆಳಗಾವಿ ವಿಭಾಗ ಮಟ್ಟದ ಖೋ ಖೋ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ರಾಮದಾಸ ಆಗೇರ ತರಬೇತಿ ನೀಡಿದ್ದರು.

 ಸ.ಮಾ.ಹಿ.ಚಿತ್ರಾಪುರ ಶಾಲೆ ಕಳೆದ 5  ವರ್ಷಗಳಿಂದ ರಾಜ್ಯಮಟ್ಟಕ್ಕೆ ವಿದ್ಯಾರ್ಥಿಗಳು ಸತತವಾಗಿ ಆಯ್ಕೆಯಾಗುತ್ತಿದ್ದಾರೆ ಹಾಗೂ  2018 ರಲ್ಲಿ ಶಾಲೆಯ ವಿದ್ಯಾರ್ಥಿ ಕುಲದೀಪಕುಮಾರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದನ್ನು ಸ್ಮರಿಸಬಹುದಾಗಿದೆ. ಜಿಲ್ಲಾ ವೀರಾಗ್ರಣಿ ಬಾಲಕಿ ದೀಕ್ಷೀತಾ ಗಣಪತಿ ನಾಯ್ಕ . ಹಾಗೂ ರಾಜ್ಯ ಮಟ್ಟ , ವಿಭಾಗಮಟ್ಟ ಆಯ್ಕೆಯಾದ ವಿದ್ಯಾರ್ಥಿಗಳ ಕ್ರೀಡಾ ಸಾಧನೆಗಾಗಿ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ  ಪ್ರಭಾಕರ ರಾಮ ನಾಯ್ಕ ಹಾಗೂ ಎಸ್.ಡಿ.ಎಮ್.ಸಿ ಸರ್ವ ಸದಸ್ಯರುಗಳು ಹಾಗೂ ಶಾಲಾ‌ ಮುಖ್ಯಾಧ್ಯಾಪಕರಾದ  ರಾಮಾ. ಎಸ್ . ಗೊಂಡ ಹಾಗೂ ಶಿಕ್ಷಕ ವೃಂದದವರು ಹಾಗೂ ಊರ ನಾಗರಿಕರು ಅಭಿನಂದನೆ ಸಲ್ಲಿಸಿರುತ್ತಾರೆ.


Share: