ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜಿಲ್ಲಾ ನೋಂದಣಾಧಿಕಾರಿ ಶ್ರೀಧರ ಅಕ್ರಮ ಆಸ್ತಿ ಸಂಪಾದನೆ ಆರೋಪ. ಎಸಿಬಿ ಅಧಿಕಾರಿಗಳ ದಾಳಿ.

ಜಿಲ್ಲಾ ನೋಂದಣಾಧಿಕಾರಿ ಶ್ರೀಧರ ಅಕ್ರಮ ಆಸ್ತಿ ಸಂಪಾದನೆ ಆರೋಪ. ಎಸಿಬಿ ಅಧಿಕಾರಿಗಳ ದಾಳಿ.

Fri, 17 Jun 2022 22:46:14  Office Staff   SO News

ಕಾರವಾರ : ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ತುಮಕೂರು ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ ನೇತೃತ್ವದಲ್ಲಿ ನಗರದ ಎಂಜಿ ರಸ್ತೆ ಪಕ್ಕದಲ್ಲಿರುವ ಕಚೇರಿಗೆ ದಾಳಿ ನಡೆಸಿದ ಅಧಿಕಾರಿಗಳು ಮಾಹಿತಿಗಾಗಿ ದಾಖಲೆಗಳನ್ನ ಹುಡುಕಾಡಿದ್ದಾರೆ.

 ಜಿಲ್ಲಾ ನೋಂದಣಾಧಿಕಾರಿ ಪಿ ಎಸ್ ಶ್ರೀಧರ ಆದಾಯಕ್ಕಿಂತ ಅತ್ಯಧಿಕ ಆಸ್ತಿ ಮಾಡಿದ್ದಾರೆಂಬ ಆರೋಪ ಬಂದಿರುವುದರಿಂದ  ಅವರ ಕಚೇರಿ ಮತ್ತು ಬಾಡಿಗೆ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಶ್ರೀಧರ  ಬೆಂಗಳೂರಿನ ಎಚ್ಎಸ್ಆರ್ ಲೇಔಟ್, ನೆಲಮಂಗಲ, ಹಾರೋಹಳ್ಳೀ ಫಾರ್ಮ್ ಹೌಸ್ ಮೇಲೂ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.


Share: