ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಚಾಮರಾಜಪೇಟೆ ಮೈದಾನದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಕಂಬವನ್ನು ಉ ರುಳಿಸಿದ ದುಷ್ಕರ್ಮಿಗಳು

ಚಾಮರಾಜಪೇಟೆ ಮೈದಾನದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಕಂಬವನ್ನು ಉ ರುಳಿಸಿದ ದುಷ್ಕರ್ಮಿಗಳು

Mon, 13 Jun 2022 00:59:43  Office Staff   S.O. News Service

ಬೆಂಗಳೂರು:ಚಾಮರಾಜಪೇಟೆ ಮೈದಾನದ ಬಳಿ ಪೊಲೀಸರು ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾ ಕಂಬವನ್ನು ಕೆಲ ದುಷ್ಕರ್ಮಿಗಳು ಕಳೆದ ರಾತ್ರಿ ಉರುಳಿಸಿದ್ದಾರೆ ಎಂದು ತಿಳಿದು ಬಂದಿದೆ. ವಿವಾದದ ಹಿನ್ನೆಲೆಯಲ್ಲಿ ಕಣ್ಗಾವಲಿಗಾಗಿ ಸಿಸಿ ಟಿವಿ ಅಳವಡಿಸಲು ಕಂಬವನ್ನು ನೆಡಲಾಗಿತ್ತು. ಆದರೆ, ಸ್ಥಳೀಯರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಪೊಲೀಸರು ಹಾಗೂ ಸ್ಥಳೀಯರ ನಡುವೆ ವಾಗ್ವಾದದವೂ ನಡೆದು ನಂತರ ಅದು ಶಾಂತವಾಗಿತ್ತು. ಆದರೆ, ಕಳೆದ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಕಂಬವನ್ನು ಉರುಳಿಸಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಎಂದಿನಂತೆ ಮೈದಾನದಲ್ಲಿ ಹುಡುಗರು ಕ್ರಿಕೆಟ್ ಆಟದಲ್ಲಿ ತೊಡಗಿದ್ದರು. ಆದರೆ, ಈ ಘಟನೆ ಅವರಿಗೆ ತಿಳಿದು ಬಂದಿರಲಿಲ್ಲ.
ಈ ನಡುವೆ ಸಿಸಿ ಕ್ಯಾಮೆರಾಗಳನ್ನು ಮೈದಾನದಿಂದ ಹೊರಗಿನ ಫುಟ್‍ಪಾತ್‍ನಲ್ಲಿ ಅಳವಡಿಸಲು ನಿರ್ಧರಿಸಲಾಗಿದ್ದು, ಅದರ ಬದಲಾವಣೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


 


Share: