ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗ್ರಾಮ್ ಒನ್ ಆರಂಭಿಸಲು ಅರ್ಜಿ ಆಹ್ವಾನ.

ಗ್ರಾಮ್ ಒನ್ ಆರಂಭಿಸಲು ಅರ್ಜಿ ಆಹ್ವಾನ.

Thu, 19 May 2022 13:04:47  Office Staff   SO News

ಕಾರವಾರ  : ಜಿಲ್ಲೆಯ 29 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಪ್ರಾಂಚೈಸಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತಿಗಳಿದ್ದು ಅದರಲ್ಲಿ 198 ಪಂಚಾಯತಗಳಲ್ಲಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಂಡು ಕಾರ್ಯಾರಂಭಿಸಿದ್ದು. ಉಳಿದ ಅಂಕೋಲಾ ತಾಲೂಕಿನ ಮೊಗಟಾ, ಡೋಂಗ್ರಿ, ಹಟ್ಟಿಕೇರಿ. ಭಟ್ಕಳ ತಾಲೂಕಿನ ಬೆಳ್ಕೆ. ಹೊನ್ನಾವರ ತಾಲೂಕ ಬಳಕೂರು. ಕಾರವಾರ ತಾಲೂಕಿನ ಚೆಂಡಿಯಾ, ವೈಲವಾಡಾ, ಕೆರವಡಿ. ಸಿದ್ದಾಪುರ ತಾಲೂಕಿನ  ಕಾವಂಚೂರ, ತಂಡಾಗುಂಡಿ, ಹಾರ್ಸಿಕಟ್ಟಾ, ಹಸರಗೋಡ. ಶಿರಸಿ ತಾಲೂಕಿನ ಶಿವಳ್ಳಿ, ಸಾಲ್ಕಣಿ, ಮಂಜಗುಣಿ, ಜಾನ್ಮನೆ, ಗುಡ್ನಾಪುರ, ಇಟಗುಳಿ, ಸುಗಾವಿ, ಮೇಲಿನ ಓಣಿಕೇರಿ. ಸುಪಾ ತಾಲೂಕಿನ  ಗಾಂಗೋಡಾ, ಬಜಾರಕುಣಂಗ, ನಾಗೋಡಾ, ಉಳವಿ. ಯಲ್ಲಾಪುರ ತಾಲೂಕಿನ  ಕಣ್ಣಿಗೇರಿ, ಹಿತ್ಲಳ್ಳಿ, ದೇಹಳ್ಳಿ, ಹಾಸಣಗಿ, ವಜ್ರಳ್ಳಿ ಗಳಲ್ಲಿ ಗ್ರಾಮ್ ಒನ್ ಆರಂಭಿಸಲು ಆಹ್ವಾನಿಸಲಾಗಿದೆ.

ಆಸಕ್ತರು ಮೇ.25 ರೊಳಗಾಗಿ ವೆಬ್‍ಸೈಟ್ https://www.karnatakaone.gov.in/public/GramonefranchiseeTerms
  ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: