ಮಂಜೇಶ್ವರ, ಫೆಬ್ರವರಿ ೨೦:ಪತ್ರಿಕೆಯೊಂದರ ಮಂಜೇಶ್ವರ ವರದಿಗಾರನೊಬ್ಬನೀಗೆ ದುಷ್ಕರ್ಮಿಯೊಬ್ಬ ಮಾರಣಾಂತಿಕ ಹಲ್ಲೆ ಗೈದ ಘಟನೆ ಮಂಜೇಶ್ವರ ಸಮೀಪದ ಮಚ್ಚಂಪ್ಪಾಡಿಯಲ್ಲಿ ನಡೆದಿದೆ.
ಮಂಗಳೂರಿನಿಂದ ಪ್ರಸಾರಗೊಳ್ಳುತ್ತಿರುವ ಧೈನಿಕ ಪತ್ರಿಕೆಯ ವರದಿಗಾರ ಆರಿಫ್ ಮಚ್ಚಂಪ್ಪಾಡಿ ಎಂಬವರೀಗೆ ಮಂಜೇಶ್ವರ ಬಡಾಜೆ ನಿವಾಸಿ ಖಲೀಲ್ ಯಾನೆ ಅಬ್ಬಕ ಪಿಟ್ಟ ಎಂಬವ ಹಲ್ಲೆ ಗೈದಿದ್ದಾನೆಂದು ತಿಳಿದು ಬಂದಿದೆ.
ಈತ ಹಲವಾರು ಕ್ರಿಮಿನಲ್ ಹಿನ್ನೆಲೆಯುಳ್ಳ ಆರೋಪಿಯಾಗಿದ್ದು ನಿನ್ನೆ ರಾತ್ರಿ ಆರಿಫ್ ಮನೆಗೆ ತೆರಳುತ್ತಿರುವಾಗ ಇವರ ಮೇಲೆ ಹೊಂಚು ಹಾಕಿ ಸೋಡಾ ಬಾಟ್ಲಿಯಿಂದ ಹಲ್ಲೆ ಗೈದು ತಲವಾರು ತೋರಿಸಿ ಕೊಲೆಬೆದರಿಕೆ ನೀಡಿದ್ದನೆನ್ನಲಾಗಿದೆ.
ಗಾಯಗೊಂಡ ಆರಿಫ್ ನನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ದಾಖಲಿಸಿ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಲವಾರು ಕ್ರಿಮಿನಲ್ ಹಿನ್ನೆಲೆಯುಳ್ಳ ಈತ ಈ ಹಿಂದೆ ಮನೆಯೊಂದಕ್ಕೆ ನುಗ್ಗಿಯೂ ಮಹಿಳೆಯ ಮೇಲೂ ಹಲ್ಲೆಗೈದಿದ್ದು ಮಾತ್ರವಲ್ಲದೆ ಇತ್ತೀಚೆಗೆ ಸ್ಥಳೀಯ ಯುವಕನೋರ್ವ ಮೇಲೆ ಇರಿತ ಪ್ರಕರಣದಲ್ಲೂ ಈತ ಪ್ರಮುಖ ಆರೋಪಿಯಾಗಿದ್ದ.
ಆರೋಪಿ ವಿನಾ ಕಾರಣ ಪತ್ರಿಕಾ ವರದಿಗಾರನ ಮೇಲೆ ಹಲ್ಲೆ ಗೈದಿದ್ದು ಈತನ ಮೇಲೆ ಮಂಜೇಶ್ವರ ಪೊಲೀಸರು ವ್ಯಾಪಕ ಶೋಧ ನಡೆಸಿ ರಾತ್ರಿಯೇ ಆರೋಪಿಯನ್ನು ಸೆರೆ ಹಿಡಿದಿರುತ್ತಾರೆಂದು ತಿಳಿದು ಬಂದಿದೆ.
ಗಡಿನಾಡ ಪತ್ರಕರ್ತರ ಸಂಘಟನೆಯಾದ ಕುಂಬಳೆ ಪ್ರಸ್ ಫಾರಂ. ಪತ್ರಕರ್ತನ ಮೇಲೆ ವಿನಾ ಕಾರಣ ಹಲ್ಲೆ ನಡೆಸಿದ್ದನ್ನು ಖಂಡಿಸಿದೆ.ಮಾತ್ರವಲ್ಲದೆ ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.