ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗೋವುಗಳ ಹೆಸರಿನಲ್ಲಿ ಮತಗಳನ್ನು ಕೇಳುವ ಬಿಜೆಪಿ ಎಂದೂ ಅವುಗಳ ಸೇವೆ ಮಾಡಿಲ್ಲ: ಛತ್ತೀಸ್‌ಗಡ ಸಿಎಂ

ಗೋವುಗಳ ಹೆಸರಿನಲ್ಲಿ ಮತಗಳನ್ನು ಕೇಳುವ ಬಿಜೆಪಿ ಎಂದೂ ಅವುಗಳ ಸೇವೆ ಮಾಡಿಲ್ಲ: ಛತ್ತೀಸ್‌ಗಡ ಸಿಎಂ

Tue, 23 May 2023 13:19:19  Office Staff   Vb

ದುರ್ಗ: ಬಿಜೆಪಿಯು ಗೋವುಗಳ ಹೆಸರಿನಲ್ಲಿ ಮತಗಳನ್ನು ಮಾತ್ರ ಕೇಳುತ್ತದೆ, ಆದರೆ ಅದೆಂದಿಗೂ ಅವುಗಳ ಸೇವೆಯನ್ನು ಮಾಡಿಲ್ಲ ಎಂದು ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಾಫೆಲ್ ಅವರು ರವಿವಾರ ಆರೋಪಿಸಿದರು.

ದುರ್ಗ ಜಿಲ್ಲೆಯಲ್ಲಿನ ತನ್ನ ವಿಧಾನಸಭಾ ಕ್ಷೇತ್ರ ಪಟನ್‌ನಲ್ಲಿ ಆಯೋಜಿಸಲಾಗಿದ್ದ 'ಭರವಸೆಗಳ ಸಮ್ಮೇಳನ'ದಲ್ಲಿ ಮಾತನಾಡಿದ ಬಾಫೆಲ್, ರಾಜ್ಯದಲ್ಲಿಯ ಗೋಶಾಲೆಗಳಲ್ಲಿ ಗೋವುಗಳ ಅನುಪಸ್ಥಿತಿಯ ಕುರಿತು ಬಿಜೆಪಿಯ ಹೇಳಿಕೆಗಳನ್ನು ತರಾಟೆಗೆತ್ತಿಕೊಂಡರು.

ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಗೋಶಾಲೆಗಳಿಗೆ ಭೇಟಿಗಳನ್ನು ನೀಡುತ್ತಿದ್ದಾರೆ ಮತ್ತು ಅಲ್ಲಿ ಜಾನುವಾರುಗಳಿಲ್ಲ ಎಂದು ಹೇಳುತ್ತಿದ್ದಾರೆ. ಬೇಸಿಗೆಯಲ್ಲಿ ಮಧ್ಯಾಹ್ನ ಜಾನುವಾರುಗಳನ್ನು ಮೇಯಲು ಹೊರಗೆ ಬಿಡಲಾಗುತ್ತದೆ ಮತ್ತು ಅವು ಸಂಜೆಯ ವೇಳೆಗಷ್ಟೇ ಮರಳುತ್ತವೆ ಎನ್ನುವುದು ಛತ್ತೀಸ್ ಗಡದ ಜನರಿಗೆ ಗೊತ್ತಿದೆ ಎಂದ ಅವರು, ನೀವು (ಬಿಜೆಪಿ) ಗೋವುಗಳ ಹೆಸರಿನಲ್ಲಿ ಮತಗಳನ್ನು ಕೇಳುತ್ತೀರಿ, ಆದರೆ ಎಂದಿಗೂ ಅವುಗಳ ಸೇವೆಯನ್ನು ಮಾಡಿಲ್ಲ. ಜಾನುವಾರುಗಳು ಯಾವಾಗ ಮೇಯುವ ಸ್ಥಳದಲ್ಲಿರುತ್ತವೆ ಮತ್ತು ಯಾವಾಗ ಗೋಶಾಲೆಗಳಲ್ಲಿ ಇರುತ್ತವೆ ಎನ್ನುವುದು ನಮಗೆ ಗೊತ್ತಿದೆ' ಎಂದರು.


Share: