ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗೋಕರ್ಣದಲ್ಲಿ ಕಲಬುರ್ಗಿ ಯುವಕ ನೀರುಪಾಲು

ಗೋಕರ್ಣದಲ್ಲಿ ಕಲಬುರ್ಗಿ ಯುವಕ ನೀರುಪಾಲು

Wed, 14 Sep 2022 01:37:28  Office Staff   SO News

ಗೋಕರ್ಣ : ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಯುವಕನೊರ್ವ ಸಮುದ್ರದಲ್ಲಿ  ನಾಪತ್ತೆಯಾದ ಘಟನೆ
ಗೋಕರ್ಣದಲ್ಲಿ ನಡೆದಿದೆ. 

ಇಲ್ಲಿನ ಮುಖ್ಯ ಕಡಲತೀರದಲ್ಲಿ ಸ್ನಾನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕಲಬುರ್ಗಿ ಮೂಲದ ಶಿವಕುಮಾರ ಹುಚ್ಚಣ್ಣ (23) ನೀರುಪಾಲಾದ ಯುವಕ ಎಂದು ಹೇಳಲಾಗಿದೆ. ಕಲಬುರ್ಗಿಯಿಂದ ಗೋಕರ್ಣಕ್ಕೆ 9 ಜನ ಯುವಕರ ತಂಡ ಪ್ರವಾಸಕ್ಕೆ  ಬಂದಿತ್ತು.  ಬೆಳಗಿನ ಜಾವ ಸಮುದ್ರ ಸ್ನಾನ ಮಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಶಿವಕುಮಾರ ಕೊಚ್ಚಿ ಹೋಗಿದ್ದಾನೆ. 

ಸ್ಥಳಕ್ಕೆ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಮತ್ತು ಗೋಕರ್ಣ  ಪೊಲೀಸರ ಭೇಟಿ ನೀಡಿದ್ದಾರೆ. ನಾಪತ್ತಯಾಗಿದ್ದ ಯುವಕನಿಗಾಗಿ  ಶೋಧ ಕಾರ್ಯ ನಡೆಸಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: