ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗೋಕರ್ಣ: ಕೋಟಿತೀರ್ಥದಲ್ಲಿ ಮುಳುಗಿ ವ್ಯಕ್ತಿ ಸಾವು.

ಗೋಕರ್ಣ: ಕೋಟಿತೀರ್ಥದಲ್ಲಿ ಮುಳುಗಿ ವ್ಯಕ್ತಿ ಸಾವು.

Wed, 29 Jun 2022 04:11:07  Office Staff   SO News

ಗೋಕರ್ಣ : ಇಲ್ಲಿನ ಕೋಟಿತೀರ್ಥದಲ್ಲಿ  ಈಜಾಡಲು ತೆರಳಿದ ವ್ಯಕ್ತಿಯೊರ್ವ ಮೃತಪಟ್ಟ ಘಟನೆ  ಮಂಗಳವಾರ ನಡೆದಿದೆ. 

ಮೇಲಿನಕೇರಿಯ ಸಂತೋಷ ರೆಬೆಲೂ ( 45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸಂತೋಷ  ಸ್ನಾನಕ್ಕಾಗಿ ತೆರಳಿದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

  ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಗೋಕರ್ಣ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  


Share: