ಕಾರವಾರ : ವನಮಹೋತ್ಸವ ಸಪ್ತಾಹ ಆಚರಿಸಿ ಸಸ್ಯಗಳನ್ನು ಪಾಲನೆ ಪೋಷಣೆ ಮಾಡಿ ಸಂರಕ್ಷಿಸಬೇಕು ಮತ್ತು ಗಿಡಗಳನ್ನು ನೆಡುವುದರ ಮೂಲಕ ಪ್ರಕೃತಿಗೆ ಕೊಡುಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದ ರಾಕ್ ಗಾರ್ಡನ್ ಪಕ್ಕದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಇವರು ಸಹಯೋಗದಲ್ಲಿ ಆಯೋಜಿಸಿದ್ದ ವನಮಹೋತ್ಸವನ್ನು ಕಾರ್ಯಕ್ರಮವನ್ನು ಸಸಿ ನೆಟ್ಟು ಸಪ್ತಾಹ ಮಾಡಿ ಮಾತನಾಡಿದ ಅವರು, ವನಮಹೋತ್ಸವ ಕಾರ್ಯಕ್ರಮವು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಜುಲೈ 1 ರಿಂದ ಜುಲೈ 7 ರವರೆಗೆ ಒಟ್ಟು 5 ಕೋಟಿ ಸಸಿ ನೆಟ್ಟು ಅದನ್ನು ಪೋಷಿಸಲಾಗುತ್ತಿದೆ ಹಾಗೂ ಮಕ್ಕಳು ಮತ್ತು ಯುವಕರಿಗೆ ಗಿಡ, ಮರಗಳು ಮತ್ತು ಪ್ರಕೃತಿಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯ ಸಾರ್ವಜನಿಕರು ಅರಣ್ಯ ಇಲಾಖೆ ಅಭಿಯಾನಕ್ಕೆ ಸಹಕಾರ ನೀಡಿ ಪ್ರಕೃತಿ ಬೆಳವಣಿಗೆಗೆ ತಮದೆ ಆದ ಕೊಡುಗೆ ನೀಡಬೇಕು ಎಂದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ , ನಗರಸಭೆ ಉಪಾಧ್ಯಕ್ಷ ಪ್ರಕಾಶ್ ನಾಯ್ಕ್, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.