ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗದ್ದೆ ನಾಟಿ ಮಾಡಿ ಗಮನ ಸೆಳೆದ ಸಚಿವ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ

ಗದ್ದೆ ನಾಟಿ ಮಾಡಿ ಗಮನ ಸೆಳೆದ ಸಚಿವ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ

Thu, 13 Jul 2023 06:15:05  Office Staff   SO News

ಭಟ್ಕಳ: ಸಚಿವರ ಮಕ್ಕಳೆಂದರೆ ಎಸಿ.ಕಾರು ಐಷಾರಾಮಿ ಜೀವನ ನಡೆಸೋ ಈಗಿನ ಕಾಲದಲ್ಲಿ ಇಲ್ಲೊಬ್ಬ ಸಚಿವರ ಪುತ್ರಿಯೋರ್ವಳು ಮಹಿಳೆಯೋರೊಂದಿಗೆ ಗದ್ದೆಗಿಳಿದು ನಾಟಿ ಮಾಡುವುದರ ಮೂಲಕ ತಂದೆಯಂತೆ ತಾನು ಕೂಡ ಸರಳತೆಗೆ ಸಾಕ್ಷಿಯಾಗಿದ್ದಾಳೆ 

ಹೌದು ಮೀನುಗಾರಿಕೆ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ ಮುರುಡೇಶ್ವರದಲ್ಲಿ ಗದ್ದೆಗೆಳಿದು ನಾಟಿ ಮಾಡುವುದರ ಮೂಲಕ ಈಗ ಸದ್ಯ ಗಮನ ಸೆಳೆದಿದ್ದಾಳೆ. ಬೀನಾ ಸದ್ಯ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದು ತನ್ನ ಬಿಡುವಿನ ವೇಳೆಯಲ್ಲಿ ಮನೆಯ ಪಕ್ಕದಲ್ಲಿರುವ ಗದ್ದೆಗೆ ಹೋಗಿ ನಾಟಿ ಮಾಡುವುದರ ಮೂಲಕ ತಂದೆಯಂತೆ ಪುತ್ರಿಯೂ ಕೂಡ ಸರಳತೆಗೆ ಸಾಕ್ಷಿಯಾಗಿದ್ದಾಳೆ. 

ಈಕೆ  ವಿಧಾನಸಭಾ ಚುನಾವಣೆ ವೇಳೆಯಲ್ಲಿ ತನ್ನ ತಂದೆಗೆ ಬೆನ್ನೆಲುಬಾಗಿ ನಿಂತು ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡುವುದರ ಮೂಲಕ ತಂದೆಯ ಗೆಲುವಿಗೆ ಶ್ರಮಿಸುವುದರ ಮೂಲಕ ತಾಲೂಕು ಹಾಗೂ ಜಿಲ್ಲೆಯ ಜನತೆಯ ಗಮನ ಸೆಳೆದಿದ್ದಳು. 

ಸದ್ಯ ಈಗ ತನ್ನ ಬಿಡುವಿನ ವೇಳೆಯಲ್ಲಿ ಗದ್ದೆ ನಾಟಿ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.


Share: