ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಖಾಲಿ ಕಂಪೌಡ್ ಒಳಗಡೆ ಅಕ್ರಮ ಕೋಣ ವಧೆ : ಭಟ್ಕಳದಲ್ಲಿ ಮಾಂಸ ಸಹಿತ ಆರೋಪಿಯ ಬಂಧನ

ಖಾಲಿ ಕಂಪೌಡ್ ಒಳಗಡೆ ಅಕ್ರಮ ಕೋಣ ವಧೆ : ಭಟ್ಕಳದಲ್ಲಿ ಮಾಂಸ ಸಹಿತ ಆರೋಪಿಯ ಬಂಧನ

Tue, 12 Jul 2022 06:21:33  Office Staff   SO NEWS

ಭಟ್ಕಳ: ನಗರದ ನಾಗಪ್ಪ ನಾಯಕ ರಸ್ತೆ ೨ನೇ ಕ್ರಾಸ್‌ನಲ್ಲಿರುವ ಆಲ್ ತಯ್ಯಬ್ ಆಲ್ ಖತೀಬ್ ಮನೆಯ ಕಂಪೌಡ್ ಒಳಗಡೆ ಇರುವ ಖಾಲಿ ಜಾಗಾದಲ್ಲಿ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಕೋಣವೊಂದನ್ನು ವಧೆ ಮಾಡಿರುವ ಕುರಿತು ಮಾಹಿತಿ ಪಡೆದ ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಸುಮಾ ಬಿ.ಪಿ. ಹಾಗೂ ‌ಎ.ಎಸೈಗಳಾದ ಗೋಪಾಲ ನಾಯಕ,
ನಿರಂಜನ ನಾಯ್ಕ ದಾಳಿ ಮಾಡಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ. 

ಖಚಿತ ಮಾಹಿತಿಯ ಮೇರೆಗೆ ನಾಗಪ್ಪ ನಾಯಕ ರಸ್ತೆ ೨ನೇ ಕ್ರಾಸ್‌ನಲ್ಲಿರುವ ಮನೆಯ ಕಂಪೌಡ್ ತಪಾಸಣೆ ನಡೆಸಿದಾಗ ಖಾಲಿ ಜಾಗಾದಲ್ಲಿ ಈತನು ಮಾರಾಟ ಮಾಡುವ ಉದ್ದೇಶದಿಂದ ಕೋಣವನ್ನು ವಧೆ ಮಾಡಿ ಸುಮಾರು ೩೦ ಕೆ.ಜಿ. ಮಾಂಸ ಅಜಮಾಸ ಕಿಮ್ಮತ್ತು ೧೫,೦೦೦-೦೦ ಯನ್ನು ಸಂಗ್ರಹಿಸಿದ್ದು ಕಂಡು ಬಂದಿದ್ದು ತಕ್ಷಣ ಆತನನ್ನು ಬಂಧಿಸಿ, ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಯಿತು.

ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಸುಮಾ ಬಿ.ಇ. ಅವರು ನೀಡಿದ ದೂರಿನನ್ವಯ ಸಬ್ ಇನ್ಸಪೆಕ್ಟರ್ ಹೆಚ್. ಬಿ. ಕುಡಗುಂಟಿ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Share: