ಭಟ್ಕಳ : ಕ್ರೀಡೆಯಲ್ಲಿ ಸ್ಪರ್ಧೆ ಇರುವುದು ಸಹಜ. ಆದರೆ ಆ ಸ್ಪರ್ಧೆ ವೈಮನಸ್ಸಿಗೆ ಕಾರಣವಾಗಬಾರದು. ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಹೆಬ್ಬಾರ ಎಂಟರ್ ಪ್ರೆöÊಸಸ್ ನ ಮಾಲಿಕ ದರ್ಶನ ಹೆಬ್ಬಾರ ಹೇಳಿದರು.
ಅವರು ಶನಿವಾರ ಎಂ.ಆರ್.ಎಸ್. ಸ್ಪೋರ್ಟ್ಸ ಕ್ಲಬ್ ವತಿಯಿಂದ ಮಣ್ಕುಳಿಯಲ್ಲಿ ನಡೆದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಎಂ.ಆರ್.ಎಸ್. ಸ್ಪೋರ್ಟ್ಸ ಕ್ಲಬ್ ಆಯೋಜಿಸಿರುವ ಕಬ್ಬಡಿ ಪಂದ್ಯಾಟಕ್ಕೆ ಶುಭಕೋರಿದ ಅವರು ಕ್ರೀಡಾಪಟುಗಳ ಬೆಳವಣಿಗೆಗೆ ಇಂತಹ ಪಂದ್ಯಾಟ ಸಹಕಾರಿಯಾಗಲಿದೆ ಎಂದರು. ಗುರುಕೃಪಾ ಬ್ಯಾಂಕಿನ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ ಮಣ್ಕುಳಿಯ ಎಂ.ಆರ್.ಎಸ್. ಸ್ಪೋರ್ಟ್ಸ ಕ್ಲಬ್ ಕಳೆದ ಹಲವಾರು ವರ್ಷಗಳಿಂದ ಇಂತಹ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಿ ತಾಲ್ಲೂಕಿನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಕೇವಲ ಕ್ರೀಡೆಗೆ ಮಾತ್ರ ಮೀಸಲೀರದೇ ಊರಿನ ಸಾಮಾಜಿಕ ಕಾರ್ಯದಲ್ಲೂ ಸಕ್ರೀಯರಾಗಿ ಪಾಲ್ಗೊಂಡು ಊರಿನ ಅಭೀವೃದ್ದಿ ಸಹಕಾರ ನೀಡುತ್ತೀರುವುದು ಶ್ಲಾಘನೀಯ ಎಂದರು. ರಾಜ್ಯ ಕಬ್ಬಡಿ ರೆಫರೀ ಬೋರ್ಡ ಕನ್ವಿಯರ್ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ ಕಬ್ಬಡಿ ಪಂದ್ಯಾಟದಲ್ಲಿ ಭಟ್ಕಳದ ಯುವಕರು ರಾಜ್ಯ ರಾಷ್ಟ ಮಾಡಿದ ಸಾಧನೆಯ ಬಗ್ಗೆ ವಿವರಿಸಿ ತಂಡಕ್ಕೆ ಶುಭಹಾರೈಸಿದರು. ಎಂ.ಆರ್.ಎಸ್. ಸ್ಪೋರ್ಟ್ಸ ಕ್ಲಬ್ ಸಂಸ್ಥಾಪಕ ಸದಸ್ಯ ದಿನೇಶ ನಾಯ್ಕ ಮಾರಿಮನೆ ಮಾತನಾಡಿದರು.
ಎಂ.ಆರ್.ಎಸ್. ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ಸತೀಶ ನಾಯ್ಕ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿದರು. ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಹರೀಶ ನಾಯ್ಕ, ಗುರುಕೃಪಾ ಬ್ಯಾಂಕ್ ನಿರ್ದೇಶಕ ಕುಮಾರ ನಾಯ್ಕ, ಊರಿನ ಮುಖಂಡರಾದ ಉಮೇಶ ನಾಯ್ಕ, ಮಂಜುನಾಥ ನಾಯ್ಕ ಹಾಗೂ ಉದ್ಯಮಿ ಶಂಕರ ನಾಯ್ಕ ಇದ್ದರು.