ಕಾರ್ಕಳ, ಅ.19: ಮುಸ್ಲಿಂ ಸಮುದಾಯ ಸ್ವಯಂ ಬದಲಾಗುವ ತನಕ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಕೆಡುಕಿನಿಂದ ಒಳಿತಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ಅನೈತಿಕತೆಯಿಂದ ನೈತಿಕತೆಯ ಕಡೆಗೆ ಮುಸ್ಲಿಮರು ಸಮಗ್ರವಾಗಿ ಬದಲಾಗಲು ಸಜ್ಜಾಗಬೇಕು .ಹಾಗಾದರೆ ಮಾತ್ರ ಮುಸ್ಲಿಂ ಸಮುದಾಯ ತಮ್ಮ ಗತ ವೈಭವವನ್ನು ಮರಳಿ ಪಡೆಯಬಹುದು ಎಂದು ಅಖಿಲ ಭಾರತ ಉಲಮಾ ಮಂಡಳಿಯ ನಿರ್ದೇಶಕ ತಾಜುಲ್ ಉಲಮಾ ಸೈಯದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್‌ರವರು ಹೇಳಿದ್ದಾರೆ.
ಕಾರ್ಕಳದ ಬಂಗ್ಲೆಗುಡ್ಡೆ ಸಲ್ಮಾನ್ ಜುಮಾ ಮಸೀದಿಯ ಆವರಣದಲ್ಲಿ ಹಯಾತುಲ್ ಇಸ್ಲಾಂ ಅಸೋಸಿಯೇಶನ್‌ನ ಹಾಗೂ ಸರ್ ಹಿಂದ್ ಇಸ್ಲಾಮಿಕ್ ಅಕಾಡಮಿಗಳ ಆಶ್ರಯದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಮನುಷ್ಯನಿಗೆ ತಾಳ್ಮೆ, ವಿನಯ, ಸೌಜನ್ಯ ಮುಖ್ಯ. ಮನುಷ್ಯ ತಾಳ್ಮೆ ತಪ್ಪಿದರೆ ಅನಾಹುತವನ್ನೇ ತಂದೊಡ್ಡಬಹುದು ಎಂದು ಅವರು ಹೇಳಿದರು. ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್‌ನ ನಿರ್ದೇಶಕ ಎಚ್.ಐ.ಅಬೂಸೂಫ್ಯಾನ್ ಇಬ್ರಾಹೀಂ ಮದನಿ ಮಾತನಾಡಿ, ಉಳ್ಳಾಲ ತಂಳ್ ೬೦ ವರ್ಷಗಳ ಹಿಂದೆ ಕೇರಳದಿಂದ ಬಂದು ಇಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ರಾಂತಿಯನ್ನೆ ಮಾಡಿದ್ದಾರೆ ಎಂದರು.
ವೇದಿಕೆಯಲ್ಲಿ ಸುಲೈಮಾನ್ ಸಅದಿ ಬಂಗ್ಲೆಗುಡ್ಡೆ, ಹಯಾತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಬಿ.ಎಂ. ಅಬ್ದುಲ್ ಖಾದರ್, ಕಾರ್ಯ ಕ್ರಮದ ಸಂಚಾಲಕ, ಪುರಸಭಾ ಸದಸ್ಯ ಮುಹಮ್ಮದ್ ಶರೀಫ್, ಪುರಸಭಾ ಸದಸ್ಯ ಅಶಾಕ್ ಅಹ್ಮದ್, ಮುಹಮ್ಮದ್ ಅಕ್ರಂ ಕುಂಟಲ್ಪಾಡಿ, ನಾಸಿರ್ ಶೇಖ್ ಬೈಲೂರು, ಐಡಿಯಲ್ ಅಬು ರ ಹ್ಮಾನ್,ಅಬ್ಬಾಸ್ ಮದನಿಕಾಬೆಟ್ಟು, ಶರೀಫ್ ಸಲಫಿ ಎಣ್ಣೆಹೊಳೆ, ಅಶ್ರಫ್ ಸಲಾಫಿ ಸಾಣೂರು, ಅಬ್ದುಲ್ಲಾ ಸೂಫಿ ಬಜಗೋಳಿ, ಅಬ್ದುರ್ರಹ್ಮಾನ್ ಮದನಿ ಕುಕ್ಕುಂದೂರು, ಅಶ್ರಫ್ ಹಿಯಾಮಿ ಹೊಸ್ಮಾರು, ಮೊಹಿಯ್ಯುದ್ದೀನ್ ಸಲಾಫಿ ಬಂಗ್ಲೆಗುಡ್ಡೆ ಉಪಸ್ಥಿತರಿದ್ದರು.