ಮಂಗಳೂರು, ಜ.೯: ಕನ್ನಡ ಜಗತ್ತು ಕೇವಲ ಭಾಷೆ ಮತ್ತು ಸಾಹಿತ್ಯಕ್ಕೆ ಸೀಮಿತವಾಗಿಲ್ಲ. ಅದು ಸಂಕೀರ್ಣತೆಯಿಂದ ಕೂಡಿದ್ದು ಮತ್ತು ವಿಸ್ತಾರಮಯವಾಗಿದೆ. ಈ ನಿಟ್ಟಿನಲ್ಲಿ ಸಂಶೋಧನೆಯನ್ನು ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರು ಗಂಭೀರವಾಗಿ ಪರಿಗಣಿಸಬೇಕು. ಇದರಿಂದ ಗುಣಾತ್ಮಕ ಫಲಿತಾಂಶ ಬರಲು ಸಾಧ್ಯವಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಕೆ.ಚಿನ್ನಪ್ಪ ಗೌಡ ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಸಂಶೋಧಕರ ಒಕ್ಕೂಟದ ವತಿಯಿಂದ ನಗರದ ವಿ.ವಿ. ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆದ ‘ಕನ್ನಡ ಸಂಶೋಧನಾ ವಿಧಾನ’ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಶೋಧನೆ ಏಕಪ್ರಕಾರದ ಚೌಕಟ್ಟನ್ನು ಹೊಂದಿದೆ. ಹಾಗಾಗಿ ಸಂಶೋಧನೆಯ ಮೌಲ್ಯವನ್ನು ಹೆಚ್ಚಿಸಲು ನಿಯಮಗಳನ್ನು ಪರಿಷ್ಕರಿಸಬೇಕಾಗಿದೆ. ಮಾರ್ಗದರ್ಶಕರು ಕೂಡ ಸಂಶೋಧನಾ ವಿದ್ಯಾರ್ಥಿಗಳಿಗೆ ಹೊಸ ಆಯಾಮಗಳ ಪರಿಚಯ ಮಾಡಿಕೊಡಬೇಕಾಗಿದೆ ಎಂದು ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.
ಸಂಶೋಧನೆಗಳು ನಿರಂತರವಾಗಿ ನಡೆಯಬೇಕು. ಅದು ಕುತೂಹಲದಿಂದ ಕೂಡಿರಬೇಕು. ಪ್ರಶ್ನೆ ಮತ್ತು ವಿಸ್ಮಯಗಳನ್ನು ಅರಸುವಂತಾಗಿರಬೇಕು. ಭಾಷೆಯ ಭಿನ್ನತೆಯನ್ನು ಹುಡುಕುತ್ತಾ ಸಮನ್ವಯತೆ ಸಾಧಿಸಬೇಕು ಎಂದು ಕರ್ನಾಟಕ ಸಂಶೋಧಕರ ಒಕ್ಕೂಟದ ಗೌರವ ಕಾರ್ಯಾಧ್ಯಕ್ಷ ಕಾ.ತ. ಚಿಕ್ಕಣ್ಣ ಹೇಳಿದರು.
ಸಂಶೋಧಕರ ಒಕ್ಕೂಟದ ವಲಯ ಸಂಚಾಲಕ ಡಾ. ನಿಕೇತನ ಸ್ವಾಗತಿಸಿದರು. ಡಾ. ನಾರಾಯಣ ಸ್ವಾಮಿ ವಂದಿಸಿದರು. ಡಾ. ನರಸಿಂಹಮೂರ್ತಿ ವಂದಿಸಿದರು.
‘ಕನ್ನಡ ಸಂಶೋಧನೆ : ಸ್ವರೂಪ-ವ್ಯಾಪ್ತಿ-ಜೀವನಾವಕಾಶಗಳು’ ಬಗ್ಗೆ ಡಾ.ಬಿ. ಶಿವರಾಮ ಶೆಟ್ಟಿ, ‘ಕನ್ನಡ ಶಾಸ್ತ್ರೀಯ ಭಾಷೆ ಮತ್ತು ಸಂಶೋಧನಾ ಸಾಧ್ಯತೆಗಳು’ ಬಗ್ಗೆ ಡಾ.ಸತ್ಯನಾರಾಯಣ ಮಲ್ಲಿಪಟ್ಣ ಮಾತನಾಡಿದರು.
ಡಾ. ಸಬೀಹಾ ಭೂಮಿಗೌಡ ‘ಕನ್ನಡ ಅಭಿವೃದ್ಧಿ: ಸಂಶೋಧನೆ-ಮುಂದಿನ ಹೆಜ್ಜೆಗಳು’ ವಿಷಯದ ಬಗ್ಗೆ ವಿಷಯ ಮಂಡಿಸಿದರು.