ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸುಳ್ಯದಲ್ಲಿ ‘ಬತ್ತದ ಲೋಕ’ ಅನಾವರಣ: ಕೃತಿ ಬಿಡುಗಡೆ

ಸುಳ್ಯದಲ್ಲಿ ‘ಬತ್ತದ ಲೋಕ’ ಅನಾವರಣ: ಕೃತಿ ಬಿಡುಗಡೆ

Mon, 12 Apr 2010 11:00:00  Office Staff   S.O. News Service
ಸುಳ್ಯ, ಎ.೧೧: ಹೊಸತನದ ಹುಟ್ಟಿನಲ್ಲಿ ವಾಸ್ತವ ಬದುಕು ತೇಲುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಬತ್ತಕ್ಕೆ ಮಾತ್ರ ಜಗತ್ತನ್ನು ಉಳಿಸುವ ಶಕ್ತಿ ಇದೆ ಎನ್ನು ವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

‘ಬತ್ತ ಉಳಿಸಿ ಆಂದೋಲನ ಕರ್ನಾಟಕ’ ಇದರ ವತಿಯಿಂದ ರವಿವಾರ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆದ ಬತ್ತ ಕುರಿತ ಜಾಗೃತಿ ಮತ್ತು ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

 

ದೇಶಿ ಚಿಂತನೆ: ಸಮಾರಂಭದಲ್ಲಿ ಸಂಶೋಧಕ ಡಾ.ಸುಂದರ ಕೇನಾಜೆಯವರ ಸಂಶೋಧನಾ ಕೃತಿ ‘ಬತ್ತದ ಲೋಕ’ವನ್ನು ಬಿಡುಗಡೆಗೊಳಿಸಿದ ಕರ್ನಾಟಕ ಜಾನಪದ ಅಕಾಡಮಿಯ ಮಾಜಿ ಅಧ್ಯಕ್ಷ ಡಾ.ಹಿ.ಶಿ. ರಾಮಚಂದ್ರ ಗೌಡ ಪಾಶ್ಚಾತ್ಯ ಚಿಂತನೆಗೆ ಪರ್ಯಾಯವಾಗಿ ದೇಶಿ ಚಿಂತನೆಯ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಎಂದರು.

ಕೃತಿ ಪರಿಚಯ ಮಾಡಿದ ಕಾಸರಗೋಡು ತ್ರಿವೇಣಿ ಕಾಲೇಜು ಪ್ರಾಂಶುಪಾಲ ಡಾ.ಕಮಲಾಕ್ಷ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡಿನ ನಿವೃತ್ತ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಕೆ. ಮುಖ್ಯ ಅತಿಥಿಯಾಗಿದ್ದರು. ಲೇಖಕ ಡಾ.ಸುಂದರ ಕೇನಾಜೆ ಮಾತನಾಡಿದರು.

‘ಬತ್ತದ ಲೋಕ’ ಕೃತಿಯ ಮುಖಪುಟ ಕಲಾವಿದ ದಿನೇಶ್ ಕುಕ್ಕುಜಡ್ಕ ಮತ್ತು ಪ್ರಕಾಶಕ ಮೈಸೂರಿನ ಓಂಕಾರಪ್ಪರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಸ್ವಾಗತಿಸಿ ದರು. ಮೈಸೂರು ಅರಿಯು ಪ್ರಕಾಶನದ ಡಾ.ಎಂ. ಸಿ.ಮನೋಹರ್ ವಂದಿಸಿದರು. ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಕಾರ್ಯಕ್ರಮ ನಿರೂಪಿಸಿದರು.

*ಸಮಾರಂಭದಲ್ಲಿ ನಶಿಸಿ ಹೋಗುವ ಬತ್ತದ ಅನೇಕ ದೇಶಿ ತಳಿಗಳನ್ನು  ಪ್ರದರ್ಶನಕ್ಕ್ಕೆ ಇಡಲಾಗಿತ್ತು.

*ಅಂಬೆಮೊಹರ್ ಕಾಳಜೀರಂ, ನಾರಿಕೇಳ, ಕಪ್ಪು ಬಾಸುಮತಿ, ರತ್ನಾಚೂಡಿ, ಗಂಧಸಾಲೆ, ಕಾಗೆಸಾಲೆ, ಕರಿಮುಂಡಗ, ಕೆಂಪುಖಾರ್, ಕ್ಯಾನರಿ, ರಾಜಭೋಗ, ಗಾದಿಸಣ್ಣ, ಸೇಲಂಸಣ್ಣ, ಜೀರಿಗಿಸಣ್ಣ, ಕರಿಗ ಜಿವಿಲೆ, ರಾಜಮುಡಿ, ದೊಡ್ಡಿ ಬತ್ತ ಸೇರಿದಂತೆ ನೂರಾರು ತಳಿಗಳು ಪ್ರದರ್ಶನಕ್ಕಿದ್ದವು.


Share: