ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಜೇಶ್ವರ: ಮೀಂಜ ಪಂಚಾಯತ್ - ಮುಸ್ಲಿಂ ಲೀಗ್ ಬಿ.ಜೆ.ಪಿ ಮೈತ್ರಿಗೆ ಕ್ಷಣಗಣನೆ...?

ಮಂಜೇಶ್ವರ: ಮೀಂಜ ಪಂಚಾಯತ್ - ಮುಸ್ಲಿಂ ಲೀಗ್ ಬಿ.ಜೆ.ಪಿ ಮೈತ್ರಿಗೆ ಕ್ಷಣಗಣನೆ...?

Sun, 29 Nov 2009 14:20:00  Office Staff   S.O. News Service
ಮಂಜೇಶ್ವರ ನವೆಂಬರ್ 29: ಮೀಂಜ ಗ್ರಾಮ ಪಂಚಾಯತಿನ ನೂತನ ಅಧ್ಯಕ್ಷ,ಉಪಾಧ್ಯಕ್ಷ ಪದವಿಗೆ ಇಂದು (ನ.೩೦) ಮತದಾನ ನಡೆಯಲಿದ್ದು ಮುಸ್ಲಿಂ ಲೀಗ್- ಬಿ.ಜೆ.ಪಿ ಮೈತ್ರಿ ಸ್ಪರ್ಧೆಗಿಳಿಯೂವೂದು ಬಹುತೇಖ ಖಚಿತಗೊಂಡಿದೆ. ಪಂಚಾಯತ್ ಅಧ್ಯಕ್ಷರಾಗಿದ್ದ ಮುಸ್ಲಿಂ ಲೀಗಿನ ಕೆ.ಅಬ್ದುಲ್ಲ ಹಾಗೂ ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್ ನ ಶ್ರೀಮತಿ ಶೋಭಾಸೋಮಪ್ಪರವರನ್ನು ಸಿ.ಪಿ.ಎಂ-ಬಿ.ಜೆ.ಪಿ-ಲೀಗ್ ಬಂಡುಕೋರರು ಜೊತೆಗೂಡಿ ಅವಿಶ್ವಾಸಗೊತ್ತುವಳಿ ಮೂಲಕ ಇತ್ತೀಚೆಗೆ ಪದಚ್ಯುತಿಗೊಳಿಸಿದ್ದರು.ಆದರೆ ಪಕ್ಷದ ಸಚೇಕಾಜ್ಞೆ ಉಲ್ಲಂಘಿಸಿದ್ದ ಲೀಗಿನ ಬಿ.ಮೊಹಮ್ಮದ್ ಕುಞ್ಞ ಹಾಗೂ ಬಿ.ಫಾತಿಮ್ಮರವರನ್ನು ಪಕ್ಷದಿಂದ ಉಚ್ಚಾಟಿಸದ ಮುಸ್ಲಿಂ ಲೀಗ್ ನಾಯಕತ್ವ ಇಂದು ನಡೆಯುವ ಚುನಾವಣೆಯಲ್ಲಿ ಬಿ.ಜೆ.ಪಿ ಜತೆ ಮೈತ್ರಿ ಮಾಡಿ ಮತ್ತೆ ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡಿದೆ.
 
ಬಿ.ಮೊಹಮ್ಮದ್ ಕುಞ್ಞಿ ಅಧ್ಯಕ್ಷಗಾದಿಗೆ ಸ್ಪರ್ಧೀಸಲಿದ್ದು ಬಿ.ಜೆ.ಪಿ ಪ್ರತ್ಯಕ್ಷ ಬೆಂಬಲ ನೀಡಲಿದೆಯೆಂದು ಬಲ್ಲಮೂಲಗಳಿಂದ ತಿಳಿದುಬಂದಿದೆ. ಮೀಂಜ ಪಂಚಾಯತಿನ ಒಟ್ಟು ೧೪ ಸ್ತಾನಗಳಲ್ಲಿ ಬಿ.ಜೆ.ಪಿ ೪, ಮುಸ್ಲಿಂ ಲೀಗ್ ೩, ಕಾಂಗ್ರೆಸ್ ೨, ಸಿ.ಪಿ.ಎಂ ೨, ಸಿ.ಪಿ.ಐ ೨ , ಕೇರಳಾ ಕಾಂಗ್ರೆಸ್ ೧ ಸ್ತಾನ ಹೊಂದಿದ್ದು , ಮುಸ್ಲಿಂ ಲೀಗಿನ ಬಿ.ಮೊಹಮ್ಮದ್ ಕುಞ್ಞ ಸ್ಪರ್ಧೆಗಿಳಿದರೆ ಸಿ.ಪಿ.ಐ ಕೂಡಾ ಪ್ರತಿಸ್ಪರ್ಧೆಗಿಳಿಯಲಿದೆಯೆಂದು ತಿಳಿದು ಬಂದಿದೆ.

ವರದಿ: ಆರಿಫ್ ಮಂಜೇಶ್ವರ ,ಮಚ್ಚಂಪಾಡಿ 


Share: