ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕುಂಜತ್ತೂರು:ವ್ಯಾಪಾರಿ ಯುವಕನ ಮೃತ ದೇಹ ಬಾವಿಯಲ್ಲಿ ಪತ್ತೆ

ಕುಂಜತ್ತೂರು:ವ್ಯಾಪಾರಿ ಯುವಕನ ಮೃತ ದೇಹ ಬಾವಿಯಲ್ಲಿ ಪತ್ತೆ

Fri, 06 Nov 2009 04:12:00  Office Staff   S.O. News Service
ಕುಂಜತ್ತೂರು, ನವೆಂಬರ್ ೫ : ವ್ಯಾಪಾರಿಯಾಗಿರುವ ಯುವಕನೊಬ್ಬನ ಮೃತ ದೇಹ ಬಾವಿಯಲ್ಲಿ ಪತ್ತೆಯಾದ ಬಗ್ಗೆ ಬಂದ್ಯೋಡ್ ನಿಂದ ವರದಿಯಾಗಿದೆ.
 
ಮೃತ ಪಟ್ಟ ವ್ಯಕ್ತಿಯನ್ನು ಬಂದ್ಯೋಡ್ ನಿವಾಸಿ ವಿವೇಕ್ ಎಂದು ಗುರುತಿಸಲಾಗಿದೆ. ಹೇರೂರ್ ಬಿ.ಸಿ.ರೋಡ್ ನಲ್ಲಿ ವ್ಯಾಪಾರಿಯಾಗಿರುವ ವಿವೇಕ್ ಬುದವಾರ ರಾತ್ರಿ ೮.೩೦ ರ ವೇಳೆ ಮನೆಗೆ ತಲುಪಿದ್ದು ಸ್ವಲ್ಪ ಹೊತ್ತಿನಲ್ಲೇ ನಾಪತ್ತೆಯಾಗಿದ್ದರೆಂದು ಹೇಳಲಾಗಿದೆ.ಇದರಿಂದ ಗಾಬರಿಗೊಂಡ ಮನೆಯವರು ಹಲವು ಕಡೆ ಹುಡುಕಿದರು ಪತ್ತೆಯಾಗಿರಲಿಲ್ಲ.ಶೋಧದ ನಡುವೆ ಮನೆಯ ಬಾವಿಯ ಬಳಿ ಚಪ್ಪಲಿಯೊಂದು ಪತ್ತೆಯಾಗಿದ್ದು ಇದರಿಂದ ಅಗ್ನಿ ಶಾಮಕ ಧಳಕ್ಕೆ ಮಾಹಿತಿ ನೀಡಲಾಯ್ತು.ಸ್ಥಳಕ್ಕೆ ತಲುಪಿದ ಅಗ್ನಿ ಶಾಮಕ ಧಳ ಬಾವಿಯಲ್ಲಿ ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಲಾಯ್ತು.ಘಟನೆಗೆ ಕಾರಣ ತಿಳಿದು ಬಂದಿಲ್ಲ.ಮೃತದೇಹ ಮಂಗಲ್ಪಾಡಿ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಯ್ತು.

ವರದಿ: ಅಬ್ದುಲ್ ರಹಮಾನ್ ಉದ್ಯಾವರ

Share: