ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ:ಏಪ್ರಿಲ್‌ನಲ್ಲಿ ಯು‌ಎ‌ಇ ಕನ್ನಡ ಸಾಹಿತ್ಯ ಸಮ್ಮೇಳನ

ದುಬೈ:ಏಪ್ರಿಲ್‌ನಲ್ಲಿ ಯು‌ಎ‌ಇ ಕನ್ನಡ ಸಾಹಿತ್ಯ ಸಮ್ಮೇಳನ

Thu, 18 Feb 2010 03:06:00  Office Staff   S.O. News Service

ದುಬೈ, ಫೆಬ್ರವರಿ ೧೮: ಧ್ವನಿ ಪ್ರತಿಷ್ಠಾನ, ದುಬೈ ಬೆಳ್ಳಿ ಹಬ್ಬ ಮಹೋತ್ಸವದ ಪ್ರಯುಕ್ತ, ಶ್ರೀ ಕೃಷ್ಣದೇವರಾಯನ ಪಟ್ಟಾಭಿಷೇಕದ ೫೦೦ನೇ ವರ್ಷಾಚರಣೆಯ ನೆನಪಿಗಾಗಿ, ಕರ್ನಾಟಕ ಸಂಸ್ಕೃತಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಭವ್ಯ ಪರಂಪರೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಏಪ್ರಿಲ್‌ನಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲು ದುಬೈ ಧ್ವನಿ ಪ್ರತಿಷ್ಠಾನ ತೀರ್ಮಾನಿಸಿದೆ.ಮುಂಬೈ ಮತ್ತು ದುಬೈಯನ್ನು ಕೇಂದ್ರಿಕರಿಸಿ ಬೆಳ್ಳಿಹಬ್ಬ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಏರ್ಪಡಿಸಲಾಗುವುದು ಎಂದು ಖ್ಯಾತ ಲೇಖಕ, ಕವಿ ಹಾಗೂ ಧ್ವನಿ ಪ್ರತಿಷ್ಠಾನ ದುಬೈ ಅಧ್ಯಕ್ಷ ಪ್ರಕಾಶರಾವ್ ಪಯ್ಯಾರ್ ದುಬೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಸಮ್ಮೇಳನವನ್ನು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟಿಸಲಾಗುವುದು. ಸಮ್ಮೇಳನದಲ್ಲಿ ಕರ್ನಾಟಕದ ಸಚಿವರು, ಅಧಿಕಾರಿಗಳು, ಸಾಹಿತಿಗಳು, ಉದ್ಯಮಿಗಳು, ಕಲಾವಿದರು, ಕನ್ನಡ ಸಾಂಸ್ಕೃತಿಕ ರಾಯಭಾರಿಗಳು, ವಿವಿಧ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.ಸಮ್ಮೇಳನದಲ್ಲಿ ಪ್ರಥಮ ಯುನೈಟೆಡ್ ಅರಬ್ ಎಮಿರೆಟ್ಸ್ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಪ್ರಶಸ್ತಿಯನ್ನು ಸಾರ್ವಜನಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಿ ಗೌರವಿಸಲಾಗುವುದು. ಸಮ್ಮೇಳನದಲ್ಲಿ ವಿವಿಧ ಕಾರ್ಯಕ್ರಮಗಳು, ಗೋಷ್ಠಿಗಳು ನಡೆಯಲಿವೆ. ಗಲ್ಪ್ ರಾಷ್ಟ್ರದ ಅನಿವಾಸಿ ಭಾರತೀಯ ಕನ್ನಡಿಗರ ಸಂಘ ಸಂಸ್ಥೆಗಳ ಹೆಸರು, ವಿಳಾಸ, ದೂರವಾಣಿ, ಮೊಬೈಲ್, ಫ್ಯಾಕ್ಸ್, ಇ-ಮೇಲ್ ಮತ್ತು ಪರಿಚಯ ಪತ್ರವನ್ನು Prakash rao payyar, President, DHWANI PRATISTAN, DUBAI, p.B. box no. 8508 Dubai, United Arab Emirates, ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.೦೦೯೭೧-೫೦೬೯೭೬೦೮೧ email: prakashpayyar@yahoo.com ಸಂಪರ್ಕಿಸಬಹುದು.


Share: