ಬೆಂಗಳೂರು, ಜನವರಿ 19:ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ೧ ಕೋಟಿ ಹೆಚ್ಚು ಮೌಲ್ಯದ ಕೊಕೇನ್ನ್ನು ನಗರದ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ರೇಸ್ ಕೋರ್ಸ್ ರಸ್ತೆಯಲ್ಲಿ ಉಮೇಶ್ ಮತ್ತು ಮೊಹನ್ ಎಂಬ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು. ಇಬ್ಬರು ಆರೋಪಿಗಳು ಕೇರಳದ ಮೂಲದವರೆಂದು ತಿಳಿದು ಬಂದಿದೆ.
2 ಮೊಬೈಲ್, 1 ಕೆ.ಜಿ. ಕೊಕೇನ್ ಅರ್ದಕೆ.ಜಿ. ಗಾಂಜಾ, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಅಲೋಕುಮಾರ್ ಹೇಳಿದ್ದಾರೆ.