ಹೊಸದಿಲ್ಲಿ,ಅ.೧೬: ದೇಶದೆಲ್ಲೆಡೆ ದೀಪಾವಳಿಯ ಸಂಭ್ರಮ ಗರಿಗೆದರುತ್ತಿರುವಂತೆಯೇ ಉತ್ತರಭಾರತದಾದ್ಯಂತ ಪೊಲೀಸರು ದಾಳಿ ನಡೆಸಿ, ನೂರಾರು ಕ್ವಿಂಟಾಲ್‌ಗಳಷ್ಟು ಕಲಬೆರಕೆ ಸಿಹಿತಿಂಡಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲದಲ್ಲಿ ಗುರುವಾರ ತಡರಾತ್ರಿ ದಾಳಿ ನಡೆಸಿದ ಪೊಲೀಸರು ಕನಿಷ್ಠ ೩೦ ಕ್ವಿಂಟಾಲ್‌ನಷ್ಟು ಕಲಬೆರಕೆಯಾದ ಖೋಯಾ (ಹಾಲಿನ ಕೆನೆ) ಮತ್ತು ತುಪ್ಪವನ್ನು ವಶಪಡಿಸಿಕೊಂಡಿದ್ದಾರೆ. ಆಗ್ರಾ ಮತ್ತು ಧೌಲ್‌ಪುರಗಳಿಂದ ಭಾರೀ ಪ್ರಮಾಣದ ವಿಷಕಾರಿಯಾದ ಖೋಯಾನ್ನು ಸಾಗಾಟ ಮಾಡಲಾಗುತ್ತಿದೆಯೆಂಬ ಸುಳಿವು ರೈಲ್ವೆ ಪೊಲೀಸರಿಗೆ ದೊರೆತ ನಂತರ ದಾಳಿ ಕಾರ್ಯಾಚರಣೆ ನಡೆಯಿತು.
ಭೋಪಾಲ್‌ಗೆ ಆಗಮಿಸಿದ ಶ್ರೀಧಾಮ ಎಕ್ಸ್‌ಪ್ರೆಸ್‌ನಲ್ಲಿ ಶೋಧ ನಡೆಸಿದ ಪೊಲೀಸರು ಈ ಕಲಬೆರಕೆಯಾದ ಸಿಹಿಸಾಮಗ್ರಿಗಳನ್ನು ವಶಪಡಿಸಿಕೊಂಡರು. ಈ ಮಧ್ಯೆ ರಾಜಸ್ಥಾನದ ಉದಯಪುರದಲ್ಲಿ ರೈಲಿನಲ್ಲಿ ಸಾಗಾಟವಾಗುತ್ತಿದ್ದ ೧೬೫೦ ಕೆ.ಜಿ. ವಿಷಭರಿತ ಖೋಯಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಾಮಗ್ರಿಗಳನ್ನು ನಕಲಿ ಸಿಹಿತಿಂಡಿ ತಯಾರಿಕೆ ಜಾಲದ ಕೇಂದ್ರಸ್ಥಳವಾದ ಧೌಲಾಪುರಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ಖೋಯಾದಲ್ಲಿ ಮಾರ್ಜಕ ರಾಸಾಯನಿಕಗಳು (ಡಿಟರ್ಜಂಟ್) ಹಾಗೂ ಸೋಡಾಪುಡಿಯನ್ನು ಕಲಬೆರಕೆ ಮಾಡಲಾಗಿತ್ತೆಂದು ತಿಳಿದುಬಂದಿದೆ.
ಉತ್ತರಪ್ರದೇಶದ ವಿವಿಧೆಡೆ ಪೊಲೀಸರು ಕಲಬೆರೆಕೆ ಸಿಹಿತಿಂಡಿಗಳನ್ನು ವಶಪಡಿಸಿಕೊಂಡ ಬಗ್ಗೆ ವರದಿಗಳು ಬಂದಿವೆ.ಬಿಜ್‌ನೂರ್‌ನಲ್ಲಿ ೮ ಕ್ವಿಂಟಾಲ್‌ನಷ್ಟು ಕಲಬೆರಕೆಗೊಂಡ ಸಿಹಿತಿಂಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲಿಘರ್‌ನಲ್ಲಿ೭೫೦ ಕೆ.ಜಿ. ಕಲಬೆರಕೆಯಾದ ಪನೀರ್ ಮತ್ತು ೧ ಸಾವಿರ ಲೀಟರ್ ಸಿಂಥೆಟಿಕ್ ಹಾಲನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಬಸ್ತಿಯಲ್ಲ ೧೦ ಕ್ವಿಂಟಾಲ್ ಕಲಬೆರಕೆ ಖೋಯಾ ಪತ್ತೆಯಾಗಿದೆ.
ಉತ್ತರಖಂಡದಲ್ಲೂ ೮ ಸಾವಿರ ಕೆ.ಜಿ. ಕಲಬೆರಕೆ ಖೋಯಾವನ್ನು ವಶಪಡಿಸಿಕೊಳ್ಳಲಾಗಿದೆ. ಗಾಝಿಯಾಬಾದ್‌ನಲ್ಲಿ ದಿಲ್ಲಿಗೆ ಸಾಗಿಸಲಾಗುತ್ತಿದ್ದ ೪ ಸಾವಿರ ಕೆ.ಜಿ. ಖೋಯಾ ಪೊಲೀಸರ ವಶವಾಗಿದೆ. ಮಧ್ಯಪ್ರದೇಶದ ಜಬಲ್‌ಪುರ ಮತ್ತು ಇಂದೋರ್‌ಗಳಲ್ಲಿ ಒಟ್ಟು ೮ ಸಾವಿರ ಕೆ.ಜಿ., ಪಂಜಾಬ್‌ನ ಲುಧಿಯಾನದಲ್ಲಿ ೬ ಸಾವಿರ ಕೆ.ಜಿ ಹಾಗೂ ಪಾಟಿಯಾದಲ್ಲಿ ೨೦೦೦ ಸಾವಿರ ಕೆ.ಜಿ. ಕಲಬೆರಕೆಗೊಂಡ ಖೋಯಾವನ್ನು ವಶಪಡಿಸಿಕೊಳ್ಳಲಾಗಿದೆ.
ಮಧ್ಯಪ್ರದೇಶದ ಶಿವ್‌ಪುರಿಯಲ್ಲಿ ಕಲಬೆರಕೆಯಾದ ಖೋಯಾ ಸಾಗಾಣಿಕೆಯಾಗುತ್ತಿದ್ದ ವ್ಯಾನನ್ನು ವಶಪಡಿಸಿಕೊಂಡ ಪೊಲೀಸರೊಂದಿಗೆ ಅಂಗಡಿ ಮಾಲಕರು ಕಾಳಗಕ್ಕಿಳಿದರು.
ದಿಲ್ಲಿಯಲ್ಲಿ ಕಟ್ಟೆಚ್ಚರ
ದೀಪಾವಳಿಯ ಸಂದರ್ಭದಲ್ಲಿ ಕಲಬೆರಕೆಯಾದ ಸಿಹಿಸಾಮಗ್ರಿಗಳು ದಿಲ್ಲಿ ಮತ್ತು ಇತರ ನಗರಗಳಿಗೆ ರವಾನೆಯಾಗುತ್ತಿರುವುದಾಗಿ ವರದಿಗಳು ತಿಳಿಸಿವೆ. ಈ ಮಧ್ಯೆ ದಿಲ್ಲಿ ಸರಕಾರವು ಕಲಬೆರಕೆ ಸಿಹಿತಿಂಡಿಗಳ ಪೂರೈಕೆದಾರರ ವಿರುದ್ಧ ಉಗ್ರ ಕ್ರಮವನ್ನು ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದೆ. ರಾಜಧಾನಿಯನ್ನು ಪ್ರವೇಶಿಸುವ ಕೇಂದ್ರಗಳ ಕಟ್ಟುನಿಟ್ಟಿನ ನಿಗಾವಿರಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ ಕಲಬೆರೆಕೆ ಸಿಹಿತಿಂಡಿಗಳನ್ನು ಉತ್ಪಾದನೆ ಮತ್ತು ಮಾರಾಟ ಮಾಡುವವರ ವಿರುದ್ಧ ೧೦೦ಕ್ಕೂ ಅಧಿಕ ದಾಳಿಗಳನ್ನು ನಡೆಸಲಾಗಿದೆಯೆಂದು ದಿಲ್ಲಯ ಆರೋಗ್ಯ ಸಚಿವ ಕಿರಣ್ ವಾಲಿಯಾ ತಿಳಿಸಿದ್ದಾರೆ.