ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಡುಬಿದ್ರಿಯಲ್ಲಿ ಸಮಾವೇಶಗೊಂಡ ಧಾರ್ಮಿಕ ಪಂಡಿತರು ಹಾಗೂ ಜಮಾತ್ ಪ್ರತಿನಿಧಿಗಳ ವಿಚಾರ ವಿನಿಮಯ ಸಭೆ

ಪಡುಬಿದ್ರಿಯಲ್ಲಿ ಸಮಾವೇಶಗೊಂಡ ಧಾರ್ಮಿಕ ಪಂಡಿತರು ಹಾಗೂ ಜಮಾತ್ ಪ್ರತಿನಿಧಿಗಳ ವಿಚಾರ ವಿನಿಮಯ ಸಭೆ

Thu, 19 Nov 2009 03:25:00  Office Staff   S.O. News Service
ಪಡುಬಿದ್ರಿ: ದಕ್ಷಿಣ ಭಾರತದ ಅರೇಬಿಕ್ ಕಾಲೇಜುಗಳಲ್ಲಿ ಒಂದಾದ ಪಟ್ಟಕ್ಕಾಡ್, ಜಾಮಿಯಾ- ನೂರಿಯಾ ಅರೇಬಿಕ್ ಕಾಲೇಜಿನ ೫೫ನೇ ಘಟಿಕೋತ್ಸವದ ಪ್ರಚಾರಾರ್ಥವಾಗಿ ಜನವರಿ ೨ರಂದು ಹೆಜಮಾಡಿಯ ಕನ್ನಂಗಾರ್ ಬೈಪಾಸ್ ಬಳಿ ನಡೆಯುವ ಮಹಾ ಸಮ್ಮೇಳನದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಮುಸ್ಲಿಂ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸುವಂತೆ ರಾಜ್ಯದ ಹಿರಿಯ ಮತ ಪಂಡಿತ ಹಾಗೂ ಮಿತ್ತಬೈಲ್ ಮುದರ್ರಿಸ್ ಶೈಖುನಾ ಅಲ್‌ಹಾಜ್ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕರೆ ನೀಡಿದ್ದಾರೆ. 
 
ಅವರು ಇತ್ತೀಚೆಗೆ ಪಡುಬಿದ್ರಿಯಲ್ಲಿ ಸಮಾವೇಶಗೊಂಡ ಧಾರ್ಮಿಕ ಪಂಡಿತರು ಹಾಗೂ ಜಮಾತ್ ಪ್ರತಿನಿಧಿಗಳ ವಿಚಾರ ವಿನಿಮಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 
ಹಿರಿಯ ವಿದ್ವಾಂಸ ಬೊಳ್ಳೂರು ಅಝ್‌ಹರ್ ಪೈಝೀಸ್ ಅಸೋಸಿಯೇಶನ್ ರಾಜ್ಯಾ ಘಟಕದ ಅಧ್ಯಕ್ಷ ಉಸ್ಮಾನುಲ್ ಫೈಝಿ ಉದ್ಘಾಟಿಸಿದರು. ಮೂಲ್ಕಿ ಮುದರ್ರಿಸ್ ಅಬ್ದುಲ್ ರಹ್ಮಾನ್ ಮದನಿ, ನಿಟ್ಟೆ ಖತೀಜ್ ಮಾಹಿನ್‌ದಾರಿಮಿ, ಸುರತ್ಕಲ್ ರೇಂಜ್ ಜಂಇಯ್ಯತುಲ್ ಮು‌ಅಲ್ಲಮೀ ಅಧ್ಯಕ್ಷ ಕೆ.ಎ.ಝೈನುದ್ದೀನ್ ಮುಸ್ಲಿಯಾರ್, ಸಿರಾಜುದ್ದೀನ್ ಫೈಝಿ ಫಲಿಮಾರು, ಜಮಾತ್ ಅಧ್ಯಕ್ಷ ಎಮ್.ಪಿ.ಮೊದಿನಬ್ಬ, ತುಂಬೆ ಮುದರ್ರಿಸ್ ಜಮಾಲುದ್ದೀನ ಫೈಝಿ, ಫಲಿಮಾರು ಖತೀಜ್ ಅಬ್ದುಲ್ ರಹ್ಮಾನ್ ಫೈಝಿ, ಅಬ್ದುಲ್ ರಹ್ಮಾನ್ ಕನ್ನಂಗರ್, ಹೆಚ್.ಸೂಫಿ ಹೆಜಮಾಡಿ, ನಿಟ್ಟೆ ಜಮಾತ್ ಅಧ್ಯಕ್ಷ ಯೂಸುಫ್ ಹಾಜಿ, ಮೊಹಿಯುದ್ದೀನ್ ಕುಟ್ಟಿ ಮುಸ್ಲಿಯಾರ್, ಮೊಹಮ್ಮದ್ ಹಳೆಯಂಗಡಿ, ಮನ್ಸೂರ್, ಲತೀಫ್ ಫೈಝಿ, ಪಿ.ಎಚ್.ಮೊದಿನಬ್ಬ, ಸ್ವಾದಿಕ್ ಫೈಝಿ, ಬಿ.ಹೆಚ್.ಹಮ್ಮಾಬ್ಬ ಇನ್ನಾ, ಹೆಚ್. ಹುಸೈನ್, ಝುಬೈರ್ ಮುಸ್ಲಿಯಾರ್ ಅಂಕೋಲ ಉಪಸ್ಥಿತರಿದ್ದರು.
 
ಇದೇ ಸಂದರ್ಭದಲ್ಲಿ ಸಮ್ಮೇಳನದ ಕಾರ್ಯಕ್ರಮಗಳ ರೂಪರೇಖೆಗಳ ಬಗ್ಗೆ ಚರ್ಚಿಸಿ ಈ ಕೆಳಗಿನ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಶೈಖುನಾ ಅಲ್‌ಹಾಜ್ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ (ಗೌರವಾಧ್ಯಕ್ಷರು),  ಕೆ.ಅಬ್ದುಲ್ ರಹ್ಮಾನ್ ಕನ್ನಂಗರ್ (ಅಧ್ಯಕ್ಷ), ಪಿ.ಎಮ್. ಅಬ್ದುಲ್ ಹಮೀದ್ ಮದನಿ, ಮಾಹಿನ್‌ದಾರಿಮಿ, ಮೊಹಿಯುದ್ದೀನ್ ಕುಟ್ಟಿ ಮುಸ್ಲಿಯಾರ್, ಇಬ್ರಾಹೀಮ್ ಕಾಟಿಪಳ್ಳ (ಉಪಾಧ್ಯಕ್ಷರುಗಳು), ಕೆ.ಎಮ್. ಉಸ್ಮಾನುಲ್ ಫೈಝಿ, ಕೆ.ಎ.ಝೈನುದ್ದೀನ್ ಮುಸ್ಲಿಯಾರ್(ಸಂಚಾಲಕರು), ಎಮ್.ಪಿ,ಮೈದೀನಬ್ಬ (ಪ್ರಧಾನ ಕಾರ್‍ಯದರ್ಶಿ), ಯೂಸುಫ್ ಹಾಜಿ, ಮನ್ಸೂರ್, ಅಬ್ದುಲ್ ರಹಿಮಾನ್ (ಜೊತೆ ಕಾರ್ಯದರ್ಶಿಗಳು), ಹೆಚ್.ಸೂಫಿ (ಕೋಶಾಧಿಕಾರಿ), ಸಿರಾಜುದ್ದೀನ್ ಫೈಝಿ (ಪತ್ರಿಕಾ ಕಾರ್ಯದರ್ಶಿ), ಹಣಕಾಸು ಉಸ್ತುವಾರಿ ಸಮಿತಿಗೆ  ಈ ಕೆಳಗಿನವರನ್ನು ಆರಿಸಲಾಯಿತು. ಅಝ್‌ಹರ್ ಪೈಝಿ (ಜೆರ್ಮನ್), ಕೆ.ಎಮ್.ಅಬ್ದುಲ್ ರಹ್ಮಾನ್ ಫೈಝಿ, (ವೈಸ್ ಜೆರ್ಮನ್), ಹುಸೈನ್ ಮಟ್ಟು, ಕಂಡತ್ತಿಲ ಮೊಹಮ್ಮದ್ (ಸಂಚಾಲಕರು), ಟಿ.ಪಿ. ಮೊಹಿಯುದ್ದೀನ್ ಕುಟ್ಟಿ ಮುಸ್ಲಿಯಾರ್, ಪಿ.ಎಚ್. ಮೈದಿನಬ್ಬ, ಬಿ.ಹೆಚ್.ಹಮ್ಮಾಬ್ಬ (ಸದಸ್ಯರು).


Share: