ಮಂಗಳೂರು, ಅ.9: ಮನುಷ್ಯರ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಪವಿತ್ರ ಕುರ್‌ಆನ್‌ನ ಆಶಯಗಳನ್ನು ಎಲ್ಲರೂ ಅರಿತರೆ ಸಮಾಜದ ಸುಧಾರಣೆ ಸಾಧ್ಯ ಎಂದು ಮಂಗಳೂರು ಮಸ್ಜಿದುನ್ನೂರ್ ಖತೀಬ್ ಅಬ್ದುಲ್ ಅಝೀಝ್ ಮೌಲವಿ ಅಭಿಪ್ರಾಯಿಸಿದ್ದಾರೆ.
ತೊಕ್ಕೊಟ್ಟಿನ ಹೈಲ್ಯಾಂಡ್ ಕಾಂಪ್ಲೆಕ್ಸ್ನಲ್ಲಿ ಶುಕ್ರವಾರ ಅಲ್ ಫುರ್ಖಾನ್ ಅರೆಬಿಕ್ ಇನ್‌ಸ್ಟಿಟ್ಯೂಟ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಲ್ ಫುರ್ಖಾನ್ ಎಂದು ಕುರ್‌ಆನ್‌ನ ಹೆಸರನ್ನಿಟ್ಟು ಆರಂಭಗೊಂಡಿರುವ ಈ ಶಿಕ್ಷಣ ಕೇಂದ್ರ ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.
ಮುಖ್ಯ ಅತಿಥಿಯಾಗಿ ವಕ್ಫ್ ಬೋರ್ಡ್‌ನ ದ.ಕ. ಜಿಲ್ಲಾಧ್ಯಕ್ಷ ಅಲ್ಹಾಜ್ ವೈ.ಮುಹಮ್ಮದ್ ಕುಂಞಿ ಮಾತನಾಡಿ, ಮಕ್ಕಳಿಗೆ ಲೌಕಿಕ ವಿದ್ಯೆಯ ಜೊತೆಗೆ ಧಾರ್ಮಿಕ ವಿದ್ಯೆ ನೀಡಿದರೆ ಪ್ರಜ್ಞಾವಂತ ಸಮೂಹ ಸೃಷ್ಟಿಸಬಹುದು ಎಂದರು.
ಶಾಸಕ ಯು.ಟಿ.ಖಾದರ್, ಯುನಿಟಿ ಹೆಲ್ತ್ ಕಾಂಪ್ಲೆಕ್ಸ್‌ನ ನಿರ್ದೇಶಕ ಡಾ.ಸಿ.ಪಿ.ಹಬೀಬುರ್ರಹ್ಮಾನ್, ಅಬುಲ್‌ಗೈಸ್ ನದ್ವಿ, ಕೆ.ಎಂ.ಶರೀಫ್, ಶೌಕತ್ ಅಲಿ, ಅಬ್ದುಸ್ಸಲಾಂ ಉಪ್ಪಿನಂಗಡಿ, ಜಿ.ಎ.ಎಚ್.ಮಹ್ಮೂದ್, ಯು.ಎಂ.ಹಸನಬ್ಬ ಉಪಸ್ಥಿತರಿದ್ದರು.
ಹವ್ವಾ ಜುಮಾ ಮಸೀದಿಯ ಖತೀಬ್ ಯಹ್ಯಾ ತಂಙಳ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಕೇಂದ್ರದ ನಿರ್ದೇಶಕ ಮುಹಮ್ಮದ್ ಕುಂಞಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಾಫಿಝ್ ಮುಹಮ್ಮದ್ ಕಮರ್ ಕುರ್‌ಆನ್ ಪಠಿಸಿದರು. ಮುಹಮ್ಮದ್ ಮುಬೀನ್ ಕಾರ್ಯಕ್ರಮ ನಿರೂಪಿಸಿದರು. ಎ. ಇಸ್ಹಾಕ್ ವಂದಿಸಿದರು.