ಮಂಜೇಶ್ವರ ಜನವರಿ 29:ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡು ಆಸಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ಕಳೆದ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಬಳಿ ನಡೆದಿದೆ. ಮೃತರನ್ನು ಬಂದ್ಯೋಡು ಪೆರಿಂಗಡಿಯ ಅಬ್ದುಲ್ಲ ಎಂಬವರ ಪುತ್ರ ಅಬ್ದುಲ್ ಕರೀಂ(೩೨) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಕಡಂಬಾರಿನ ಸಹೋದರನ ಮನೆಯಿಂದ ಹಿಂತಿರುಗುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆಯಿತೆನ್ನಲಾಗಿದೆ. ಗಂಭೀರ ಗಾಯಗೊಂಡ ಕರೀಂನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರಿ ಮಧ್ಯೆ ಸಾವು ಸಂಭವಿಸಿದೆ. ಶಿಪ್ ಒಂದರಲ್ಲಿ ಉದ್ಯೋಗಿಯಾಗಿರುವ ಕರೀಂ ಎರಡು ವಾರಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಮಂಗಲ್ಪಾಡಿ ಸಿ.ಎಚ್ಚ್.ಸಿ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಮೃತದೇಹವನ್ನು ಮನೆಯವರಿಗೆ ಬಿಟ್ಟು ಕೊಡಲಾಯಿತು. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಪ್ರಸಿದ್ದ ಕ್ರಿಮಿನಲ್ ಕಾರಾಟ್ ನೌಷಾದ್ ಹಾಗೂ ಸಹಚರನ ಬಂಧನ
ಮಂಜೇಶ್ವರ ಜನವರಿ 29:ಕುಪ್ರಸಿದ್ದ ಕ್ರಿಮಿನಲ್ ಕಾಞಂಗಾಡು ಕಾರಾಟ್ಟ್‌ವಯಲಿನ ಕಾರಾಟ್ ನೌಷಾದ್(೩೨) ಹಾಗೂ ಆತನ ಸಹಚರ ವಡಗರೆಯ ಶೆಬೀರ್(೨೨) ನನ್ನು ಕುಂಬಳೆ ಪೋಲೀಸರು ಬಂಧಿಸಿದ್ದಾರೆ. ಕಾರಾಟ್ ನೌಷಾದ್ ವಿರುದ್ದ ಕುಂಬಳೆ ಬದಿಯಡ್ಕ ಹಾಗೂ ಹೊಸದುರ್ಗ ಕಾಸರಗೋಡು,ಬೇಕಲ್ ಠಾಣೆಗಳಲ್ಲಿ ಹಳವು ಪ್ರಕರಣಗಳಿವೆಯೆಂದು ಪೋಲೀಸರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಈತನ ವಿರುದ್ದ ಹಲವಾರು ಪ್ರಕರಣಗಳಿವೆ. ಇಂದು ಬೆಳಿಗ್ಗೆ ಬಸ್ಸೊಂದರಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದ ಬಗ್ಗೆ ಕುಂಬಳೆ ಪೋಲೀಸರಿಗೆ ಸಿಕ್ಕಿದ ಖಚಿತ ಮಾಹಿತಿ ಆದಾರದ ಮೇರೆಗೆ ಬಸ್ ಅಡ್ಡಕಟ್ಟಿ ಕುಂಬಳೆ ಸಬ್ ಇನ್ಸಪೆಕ್ಟರ್ ರಾಜೀವನ್ ನೇತೃತ್ವದ ಪೋಲೀಸರ ತಂಡ ಇಬ್ಬರನ್ನು ಬಂಧಿಸಿದೆ. ಕಾರಾಟ್ ನೌಷಾದ್ ಕುಪ್ರಸಿದ್ದ ವಾಹಣ ಚೋರ ಪೆರಿಯಾಟ್ಟಡುಕ್ಕ ರಿಯಾಸ್‌ನ ಸಹಚರಣೆಂದು ತಿಳಿದು ಬಂಧಿದೆ. ಇವರನ್ನು ಕುಂಬಳೆ ಪೋಲೀಸರು ತನಿಖೆ ನಡೆಸುತ್ತಿದ್ದು .ಹೊಸದುರ್ಗ ಪೋಲೀಸರಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ.
ಮೀಯಪದವು ಮದಂಗಾಲ್ ಅನ್ಸಾರುಲ್ ಮಸಾಕೀನ್ ಅಸೋಸಿಯೇಶನ್ ನೂತನ ಪದಾಧಿಕಾರಿಗಳು
ಮಂಜೇಶ್ವರ ಜನವರಿ 29: ಮೀಯಪದವು ಮದಂಗಾಲ್ ಅನ್ಸಾರುಲ್ ಮಸಾಕೀನ್ ಅಸೋಸಿಯೇಶನ್ ಇದರ ವಾರ್ಷಿಕ ಮಹಾಸಭೆಯು ಆರಿಫ್ ಬಾಬುಮಲೆ ಅಧ್ಯಕ್ಷತೆಯಲ್ಲಿ ಜರುಗಿತು. ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಝೀಝ್ ಮದಂಗಾಲ್, ಉಪಾಧ್ಯಕ್ಷರಾಗಿ ಅಝೀಝ್ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ಆರಿಫ್ ಬಾಬುಮಲೆ ,ಜೊತೆ ಕಾರ್ಯದರ್ಶಿಯಾಗಿ ರಹೀಂ, ಕೋಶಾಧಿಕಾರಿಯಾಗಿ ಅಶ್ರಫ್ ನನ್ನು ಆಯ್ಕೆ ಮಾಡಲಾಯಿತು.
ವರದಿ: ಆರಿಫ್ ಮಚ್ಚಂಪಾಡಿ, ಮಂಜೇಶ್ವರ