ಉಡುಪಿ, ಅ.2: ಅವಶ್ಯಕ ವಸ್ತುಗಳನ್ನು ಆಮದು ಮಾಡಿಕೊಳ್ಳುವ ದೇಶ ಗುಲಾಮ ಗಿರಿಯನ್ನು ಅನುಭವಿಸುತ್ತದೆ ಎಂಬುದನ್ನು ಗಾಂಧೀಜಿ ಕಂಡುಕೊಂಡಿದ್ದರು. ಈಗ ಭಾರತ ಎಲ್ಲವನ್ನೂ ಆಮದು ಮಾಡಿಕೊ ಳ್ಳುತ್ತ ಗುಲಾಮಗಿರಿಯತ್ತ ವಾಲುತ್ತಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಲೇಖಕ ರಂಝಾನ್ ದರ್ಗಾ ಧಾರವಾಡ ಅಭಿಪ್ರಾ ಯಪಟ್ಟಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ಕಾಲೇಜಿನ ನೂತನ ರಂದ್ರ ಮಂಟಪದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾದ ವಿಶೇಷ ಕಾರ್ಯಕ್ರಮ ದಲ್ಲಿ ಅವರು ‘ಗಾಂಧಿ ಮತ್ತು ಮಾನವ ಸಂಬಂಧಗಳು’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ದೇಶದ ಭಾವೈಕ್ಯ ಉಳಿಸಲು, ಮಾನವ ಸಂಬಂಧಗಳು ಗಟ್ಟಿಗೊಳ್ಳಲು ಹಾಗೂ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಸುಧಾರಿಸಲು ಗಾಂಧಿ ಮಂತ್ರ ಇಂದು ಅನಿವಾರ್ಯ ವಾಗಿದೆ. ಈ ಬಗ್ಗೆ ಭಾರತೀಯರು ಗಂಭೀರ ಚಿಂತನೆ ಮಾಡಬೇಕಾಗಿದೆ ರಂಜಾನ್ ಎಂದರು.
ಗಾಂಧೀಜಿಯ ಹಿಂದೂ ಧರ್ಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಆಗಿತ್ತು. ಅದನ್ನು ಪಾಲಿಸಿದವರು ಎಂದಿಗೂ ಭಯೋತ್ಪಾದಕ ಅಥವಾ ಕೋಮುವಾದಿ ಆಗಲು ಸಾಧ್ಯವಿಲ್ಲ ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ಈ ನಿಟ್ಟಿನಲ್ಲಿ ಗಾಂಧೀಜಿ ಪಾಲಿಸಿಕೊಂಡ ಬಂದ ತತ್ವ ಗಳನ್ನು ಇಂದಿನ ಭಾರತೀಯರು ತಿಳಿದು ಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಗಾಂಧಿಜಿ ಧರ್ಮಗಳ ಬಗ್ಗೆ ಹೇಳುತ್ತ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜಕೀಯ ವ್ಯವಸ್ಥೆಯ ಕುರಿತು ಜನರಿಗೆ ತಿಳಿ ಹೇಳಿ ಬ್ರಿಟಿಷರ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟಕ್ಕೆ ಅಣಿಗೊಳಿಸಿದ್ದರು. ಗಾಂಧೀಜಿ ಪ್ರಾರ್ಥನೆಯನ್ನು ಸತ್ಯಾಗ್ರಹವನ್ನಾಗಿ ಪರಿವರ್ತಿಸಿಕೊಂಡು ಬ್ರಿಟಿಷರ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದ್ದರು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಪಿ. ವೆಂಕಟರಮಣ ಗೌಡ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಗಾಂಧಿ ಪ್ರತಿಷ್ಠಾನದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ‘ಭಾರತ ಸ್ವಾತಂತ್ರ ಹೋರಾಟದ ಮಹಾ ಪುರುಷರು’ ಲೇಖನಾ ಸಿದ್ಧತಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಎಂಜಿಎಂ ಪಿಯು ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಕರ್ಕೇರ ಸ್ವಾಗತಿಸಿದರು. ಮುರಳೀಧರ್ ವಂದಿಸಿ ದರು. ಡಾ.ವಸಂತ ಕುಮಾರ್ ಕಾರ್ಯ ಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನಾ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮಂಜುನಾಥ ಭಟ್, ವಿದ್ಯಾರ್ಥಿಗಳಾದ ಸಂಧ್ಯಾ ಹಾಗೂ ಶರತ್ ಹೆಗ್ಡೆಯವರಿಂದ ಭಜನಾ ಕಾರ್ಯಕ್ರಮ ನಡೆಯಿತು