ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: 70ರ ಸಂಭ್ರಮದಲ್ಲಿ ‘ಲೊರೆಟ್ಟೊ ಮಾತಾ’ ದೇವಾಲಯ: ಇಂದು ನವೀಕೃತ ದೇವಾಲಯ, ಮಹಾದ್ವಾರ ಉದ್ಘಾಟನೆ

ಬಂಟ್ವಾಳ: 70ರ ಸಂಭ್ರಮದಲ್ಲಿ ‘ಲೊರೆಟ್ಟೊ ಮಾತಾ’ ದೇವಾಲಯ: ಇಂದು ನವೀಕೃತ ದೇವಾಲಯ, ಮಹಾದ್ವಾರ ಉದ್ಘಾಟನೆ

Fri, 30 Apr 2010 06:20:00  Office Staff   S.O. News Service
ಬಂಟ್ವಾಳ, ಎ.29: ಎಪ್ಪತನೆ ವರ್ಷಾಚರಣೆಯ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕು ಲೊರೆಟ್ಟೊ ಪದವಿನಲ್ಲಿರುವ ಲೊರೆಟ್ಟೊ ಮಾತಾ ದೇವಾಲಯವು ಇದೀಗ ನವೀಕೃತಗೊಂಡಿದ್ದು, ಇದರ ಹಾಗೂ ಮಹಾದ್ವಾರದ ಉದ್ಘಾಟನಾ ಸಮಾರಂಭ ಎ.೩೦ರಂದು ನಡೆಯಲಿದೆ. ನವೀಕೃತ ದೇವಾಲಯ ಮತ್ತು ನೂತನ ಮಹಾದ್ವಾರದ ಉದ್ಘಾಟನೆ ಯನ್ನು ಬೆಳಗ್ಗೆ ೯:೧೫ಕ್ಕೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ.ಅಲೋಷಿಯಸ್ ಪಾವ್ಲ್ ಡಿಸೋಜ ನೆರವೇರಿಸಲಿದ್ದು, ಬಳಿಕ ನಡೆಯುವ ಸಭಾ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಪ್ರಾಂತ್ಯಾಧಿಕಾರಿ, ಅರ್ಸುಲೆನ್ ಪ್ರಾನ್ಸಿಸ್ಕನ್‌ನ ಮೇಲ್ವಿಚಾರಕಿ ಭ. ಲೆನಿಟಾ ಡಿಸೋಜ ಪಾಲ್ಗೊಳ್ಳಲಿದ್ದು, ಗೌರವಾನ್ವಿತ ಅತಿಥಿಗಳಾಗಿ ಬಂಟ್ವಾಳ ವಲಯದ ಪ್ರಧಾನ ಧರ್ಮಗುರು ವಂ. ರೊಕಿಡೇಸಾ, ಯುವ ಮುಂದಾಳು ಡೋಲ್ಫಿ ಪ್ರಶಾಂತ್ ಡಿಸೋಜ, ಶಾಸಕ ಬಿ. ರಮಾನಾಥ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಜಿ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಬೆಲ್ಜಿಯಂನ ಉದ್ಯಮಿ ಅಲೆಕ್ಸ್ ಮಿನೇಜಸ್ ಭಾಗವ ಹಿಸಲಿದ್ದಾರೆ. ಎರಡನೆ ಮಹಾಯುದ್ಧದ ವೇಳೆ ಆಗಿನ ಧರ್ಮಾಧ್ಯಕ್ಷ ಅ.ವಂ.ಎ.ಆರ್. ಫೆರ್ನಾಂಡೀಸ್‌ರ ಅನುಮತಿಯೊಂದಿಗೆ ಹಾಗೂ ಆಗ್ರಾರ್ ದೇವಾಲಯದ ಸಹಾಯಕ ಧರ್ಮಗುರು ವಂ.ಚಾರ್ಲ್ಸ್ ನಜ್ರೆತ್‌ರ ಪವಿತ್ರ ಬಲಿಪೂಜೆಯೊಂದಿಗೆ ೧೯೩೮ ನ.೧ರಂದು ಬಂಟ್ವಾಳ ಧರ್ಮಗುರು ವಂ. ಬಾಲ್ತಜಾರ್ ಆರಾನ್ಹಾ ಲೊರೆಟ್ಟೊ ದೇವಾಲಯದ ಕೆಲಸಕ್ಕೆ ಚಾಲನೆ ನೀಡಿದರು. ಈ ದೇವಾಲಯವು ೧೯೩೯ ನವಂಬರ್ ೧ರಂದು ಅಧಿಕೃತ ಉದ್ಘಾಟನೆಗೊಂಡು ಬಂಟ್ವಾಳ ಮತ್ತು ಆಗ್ರಾರ್ ದೇವಾಲಯದ ೯ ವಾಳೆಗಳಿಂದ ಪ್ರಾರಂಭವಾಯಿತು. ಸೇವೆ ಸಲ್ಲಿಸಿದ ಧರ್ಮಗುರುಗಳು: ಈ ದೇವಾಲಯದಲ್ಲಿ ಧರ್ಮಗುರು ಗಳಾಗಿ ವಂ.ಚಾರ್ಲ್ಸ್ ಪಿ.ನಜ್ರೆತ್ (೧.೧೧.೧೯೩೯-೩೦.೧೨.೧೯೪೯), ವಂ. ಪೀಟರ್ ಕ್ರಾಸ್ತಾ (೩೦.೧೨.೧೯೪೯- ೨೧.೫.೧೯೫೦), ವಂ.ಜೆರಾಲ್ಡ್ ಮಿರಾಂಡಾ (೨೧.೫.೧೯೫೦- ೨೬.೧.೧೯೬೧), ವಂ. ಅಲ್ಫೊನ್ಸಾ ಡಿಕೊನ್ಹಾ (೨೬.೧.೧೯೬೧ - ೭.೪.೧೯೭೧), ವಂ. ಒಸ್ವಾಲ್ಡ್ ಲಸ್ರಾದೊ (೧.೪.೧೯೭೧ - ೨೩.೫.೧೯೭೧) ವಂ. ಪ್ಲಾಸಿಡ್ ಪಿರೇರಾ (೨೩.೫.೧೯೭೧- ೧೬.೫.೧೯೮೧), ವಂ.ಗೊಡ್‌ಪ್ರಿ ಎಲ್. ಸಲ್ಡಾನಾ (೧೬.೫.೧೯೮೧- ೨೪.೫.೧೯೮೮), ವಂ.ನೊರ್ಬಡ್ ಲೋಬೋ (೨೪.೫. ೧೯೮೮ -೧೮.೫.೧೯೯೫), ವಂ. ವಿಕ್ಟರ್ ಡಿಸೋಜ (೧೮.೫.೧೯೯೫- ೨೧.೫. ೧೯೯೮), ವಂ.ಆಂಟೋನಿ ಲೋಬೋ (೨೫.೫.೧೯೯೮- ೨೫.೫.೨೦೦೫) ಸೇವೆ ಸಲ್ಲಿಸಿದ್ದು, ದೇವಾಲಯದ ಪ್ರಗತಿ ಗೋಸ್ಕರ ಹಗಲಿರುಳು ಶ್ರಮಿಸಿದ್ದಾರೆ. ಪ್ರಸ್ತುತ ಈ ದೇವಾಲಯದಲ್ಲಿ ವಂ. ಸಿಪ್ರಿಯಾನ್ ಪಿಂಟೊ (೨೫.೫.೨೦೦೫ರಿಂದ)ರವರು ಧರ್ಮ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ದೇವಾಲಯಕ್ಕೆ ನೂತನ ಶಾಲಾ ಕಟ್ಟಡ, ಮಹಾದ್ವಾರ, ದೇವಾಲಯದ ನಕರಣ ಮುಂತಾದ ಅಭಿವೃದ್ಧಿ ಕಾರ್ಯಗಳಲ್ಲದೇ ಅನೇಕ ಜನಪಯೋಗಿ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಧರ್ಮಗುರು ವಂ.ಸಿಪ್ರಿಯಾನ್ ಪಿಂಟೋ, ಪಾಲನಾ ಮಂಡಳಿಯ ಉಪಾಧ್ಯಕ್ಷ ಜ್ಯೊಕುವೆಲ್ಲೊ, ಕಾರ್ಯದರ್ಶಿ ಹ್ಯೂಬರ್ಟ್ ಲೋಬೊ ಹಾಗೂ ದೇವಾಲಯದ ಸಮಸ್ತ ಕ್ರೈಸ್ತ ಬಂಧುಗಳ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Share: