ಕಾರ್ಕಳ, ಫೆಬ್ರವರಿ ೧೩: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮತ್ತು ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ನ ಸಹಯೋಗದೊಂದಿಗೆ ನವೋದಯ ಸ್ವಸಹಾಯ ಸಂಘಗಳ ದಶಮಾನೋತ್ಸವ ಕಾರ್ಯಕ್ರಮವು ಕಾರ್ಕಳ ಪುಲ್ಕೇರಿ ಪಡುತಿರುಪತಿ ಮೈದಾನದಲ್ಲಿ ಇಂದಿನಿಂದ ೧೪ ರವರೆಗೆ ನಡೆಯಲಿದೆ.
ಗ್ರಾಮೀಣ ಹಿಂದುಳಿದ ಜನತೆಯ ಎಳಿಗೆಗಾಗಿ ಆರ್ಥಿಕ, ಸಮಾಜಿಕವಾಗಿ ಸದೃಡರಾಗಬೆಕೇಂಬ ಉದ್ದೇಶದಿಂದ ಕಾರ್ಕಳದ ಸಾಣೂರು ಗ್ರಾಮದ ಸೂರಲ್ನಲ್ಲಿ ೨೦೦೦ನೇ ಜನವರಿ ೨೯ರಂದು ನವೋದಯ ಸ್ವ-ಸಹಾಯ ಸಂಘ ಆರಂಭಗೊಂಡಿದ್ದು, ಕೃಷಿಕರು ಹಾಗೂ ಮಹಿಳೆಯರಲ್ಲಿ ಸಂಘಟನಾ ಚೈತನ್ಯ ಮೂಡಿಸುವುದರ ಮೂಲಕ ಸ್ವಾವಲಂಬಿ ಬದುಕಿಗೆ ಚಾಲನೆ ನೀಡಿದೆ.
ಸಹಕಾರಿ ರಂಗದ ರಂಗದ ಮುಂದಾಳು, ಸಂಘಟನಾ ಚತುರ ಅಪೆಕ್ಸ್ ಬ್ಯಾಂಕ್ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ರವರ ನೇತೃತ್ವದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡ ನವೋದಯ ಸ್ವಸಹಾಯ ಸಂಘಗಳು ನಂತರದ ದಿನಗಳಲ್ಲಿ ನವೋದಯ ಚಾರಿಟೇಬಲ್ ಟ್ರಸ್ಟ್ ಆಗಿ ಪರಿವರ್ತನೆಗೊಂಡಿತು ಅಂದು ಅವಿಭಜಿತ ದಕ್ಷಿಣಕನ್ನಡಕ್ಕೆ ಸೀಮಿತ ಗೊಂಡಿದ್ದ ನವೋದಯ ಸ್ವ-ಸಹಾಯ ಸಂಘಗಳು ಇಂದು ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಈದೀಗ೨೬ಸಾವಿರಕ್ಕೂ ಹೆಚ್ಚು ನವೋದಯ ಸ್ವ-ಸಹಾಯ ಗುಂಪುಗಳ ರಚನೆಯಾಗಿ ಸುಮಾರು ೨ಲಕ್ಷದ ೭೦ಸಾವಿರಕ್ಕೂ ಮಿಕ್ಕಿದ ಸದಸ್ಯರನ್ನು ಹೊಂದಿದೆ.
ನವೋದಯ ಸ್ವ-ಸಹಾಯ ಸಂಘಗಳಿಗೆ ಇಂದು ದಶಮಾನೋತ್ಸವದ ಸಂಭ್ರಮ. ಅಪೆಕ್ಸ್ ಬ್ಯಾಂಕ್ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ರವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನಸಾಗರವೇ ಹರಿದು ಬರಲಿದೆ.

ಜನತೆಯನ್ನು ಸ್ವಾಗತಿಸುವ ಸ್ವಾಗತ ಗೊಪುರಗಳು, ಪ್ರವೇಶ ದ್ವಾರದಲ್ಲಿ ಭಗೀರಥನು ಗಂಗೆಯನ್ನು ಧರೆಗಿಳಿಸುವ ಪ್ರಾತ್ಯಕ್ಷಿಕೆ, ಬೃಹತ್ ಕಟೌಟ್ಗಳು, ಕೃಷಿ ಪರಿಕರಗಳ ವಸ್ತು ಪ್ರದರ್ಶನಗಳು ಹಾಗೂ ಅತ್ಯಧುನಿಕ, ವೈಜ್ನಾನಿಕ ಕೃಷಿ ಉಪಕರಣಗಳ ಮಾರಾಟ ಮಳಿಗೆಗಳು ದಶಮಾನೋತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.

ವಿವಿಧ ವೇಷಭೂಷಣಗಳು, ದೇಶದ ವಿವಿಧ ಪ್ರದೇಶಗಳ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ಥಬ್ಧ ಚಿತ್ರಗಳು, ಬಣ್ಣದ ಕೊಡೆಗಳು, ಪೋಲಿಸ್ ಬ್ಯಾಂಡ್, ಕಹಳೆ, ಭಜನಾ ತಂಡ, ಗೊಂಬೆಯಾಟ, ಎತ್ತಿನ ಗಾಡಿ ಮದುಮಗಳು, ನಾಸಿಕ್ ಬ್ಯಾಂಡ್, ನವಿಲು ನೃತ್ಯ, ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಡ್ರಂ ಆರ್ಕೆಸ್ಟ್ರಾ, ಕೃಷ್ಣದೇವರಾಯ ಟ್ಯಾಬ್ಲೊ ಮೊದಲಾದ ೪೪ಕ್ಕೂ ಮಿಕ್ಕಿ ಈ ಬೃಹತ್ ಮೇರವಣಿಗೆಯಲ್ಲಿ ಸ್ವಸಹಾಯ ಸಂಘಗಳ ಸದಸ್ಯರ ಸಮವಸ್ತ್ರದೊಂದಿಗೆ ಕಾರ್ಕಳದ ಸ್ವರಾಜ್ಯ ಮೈದಾನದಿಂದ ಪುಲ್ಕೇರಿ ಬೈಪಾಸ್ ವರೆಗೆ ಸಾಗಲಿರುವ ಮೆರವಣಿಗೆಗೆ ಮೆರುಗು ನೀಡಲಿದೆ.
ವಿಶೇಷರೀತಿಯಲ್ಲಿ ಕಾರ್ಯಕ್ರಮದ ವೇದಿಕೆ ಹಾಗೂ ಚಪ್ಪರದ ಬಳಿ ಅಲ್ಲಲ್ಲಿ ನಳ್ಳಿಗಳನ್ನು ಅಳವಡಿಸಿದ್ದು, ದಣಿವನ್ನು ನೀಗಿಸಲು ಈ ನಳ್ಳಿನಲ್ಲಿ ಶರ್ಬತ್ನ ವ್ಯವಸ್ಥೆಯನ್ನು ಕಲ್ಪಸಲಾಗಿದೆ.
ಸಮಾವೇಶದಲ್ಲಿ ನವೋದಯದ ಕಲ್ಪನೆಯ ನಾಲ್ಕು ಮನೆಗಳು ಗಮನ ಸೆಳೆಯುತ್ತಿದೆ. ಸ್ವಸಹಾಯ ಸಂಘಕ್ಕೆ ಸೇರ್ಪಡೆಯಾಗುವ ಮುನ್ನ ವ್ಯಕ್ತಿಯೋರ್ವರ ಗ್ರಾಮೀಣ ಬದುಕು, ಇಂದು ಹೇಗೆ ಬದಲಾವಣೆಯಾಗಿದೆ ? ಎಂಬುವುದರ ಚಿತ್ರಣಗಳನ್ನು ತೋರ್ಪಡಿಸುವ ಮನೆಗಳ ಸೃಷ್ಟಿಯು ಬದುಕಿನ ಅಭಿವೃದ್ದಿಯ ವಿವಿಧ ಪ್ರಕಾರಗಳನ್ನು ಸಾರುತ್ತಿದೆ.
ನವೋದಯದ ರೂವಾರಿ ಎಂ.ಎನ್.ರಾಜೇಂದ್ರ ಕುಮಾರ್....
ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದ ಜನತೆಯ ಕನಸ್ಸನ್ನು ನನಸಾಗಿಸುವ ಹಲವು ಯೋಜನೆಗಳನ್ನು ಸಹಕಾರಿ ರಂಗದ ಮುಖ್ಯ ದ್ಯೇಯಗಳಲ್ಲೊಂದಾದ, ನಾವು ಎಲ್ಲರಿಗಾಗಿ ಎಲ್ಲರು ನಮಗಾಗಿ ಸಮಾನ ಮನಸ್ಸಿನ ಚಿಂತನೆ ಜನರನ್ನು ಒಗ್ಗೊಡಿಸಿ ಗುಂಪುಗಳಾಗಿ ವಿಂಗಡಿಸಿ ದಿನ,ವಾರ,ತಿಂಗಳಿಗಿಷ್ಟಂತೆ ಉಳಿತಾಯ ಮಾಡಿ ಅವಶ್ಯಕತೆಗಳಿಗನುಗುಣವಾಗಿ ಸಾಲವನ್ನು ಮಾಡಿ ತಮ್ಮ ಯೋಜನೆಗಳನ್ನು ಪೂರ್ತಿಗೊಳಿಸುವುದರ ಜತೆಗೆ ಕೆವಲ ಅಡುಗೆ ಮನೆಗೆ ಸಿಮಿತವಾಗಿದ್ದ ಮಹಿಳೆಯರು ಇಂದು ಸ್ವತಂತ್ರ ಬದುಕಿನೊಂದಿಗೆ ಸಂಸಾರವನ್ನು ನಡೆಸಬಲ್ಲ ಗೃಹಿಣಿಯಾಗಿ ರೂಪಿತವಾಗಿರುವುದು ಸಂತಸದ ವಿಚಾರ.
ನವೋದಯ ಸ್ವಸಹಾಯ ಸಂಘಗಳಿಗೆ ಸೇರುವ ಮೊದಲು ತೆಂಗಿನ ಸೊಗಿನ ಚಾವಣಿಯಲ್ಲಿ ಸಂಸಾರ ನಡೆಸಲು ಸರಿಯಾದ ವ್ಯವಸ್ಥೆಗಳಿಲ್ಲದೆ ಸಮಾಜದ ಕಟ್ಟಕಡೆಯ ವ್ಯಕಿಯಾಗಿ ಬದುಕುತ್ತಿದ್ದವರು ನವೋದಯ ಸೇರಿದ ನಂತರ ಹಂತ ಹಂತವಾಗಿ ಬದುಕಿನ ವಿವಿಧ ಮಜಲುಗಳು ದಾಟಿ ಸ್ವಾವಲಂಬಿ ಬದುಕನ್ನು ನಡೆಸುತ್ತಿರುವುದು ಕಾಣಬಹುದಾಗಿದೆ.
ಸಿಯಾಳದಲ್ಲಿ ಬಿರುಂಡಿ........

ಸಮಾವೇಶಕ್ಕೆ ಬರುವ ಜನತೆಯ ಬಾಯರಿಕೆಯನ್ನು ನೀಗಿಸಲು ಬಿರುಂಡಿ ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿದ್ದು ಜನತೆ ಕುಳಿತು ಕೊಳ್ಳುವಲ್ಲಿಗೆ ಸಿಯಾಳ ಆಕೃತಿಯ ನೀರಿನ ಟ್ಯಾಂಕಿನಿಂದ ನಳ್ಳಿ ಮೂಲಕ ಪಾನೀಯವನ್ನು ತಲುಪಿಸುವ ವ್ಯವಸ್ಥೆ ಎಲ್ಲರ ಗಮನ ಸೆಳೆದಿದೆ.
ಇಂದಿನ ಕಾರ್ಯಕ್ರಮ
ಕಾರ್ಕಳ: ನವೋದಯ ಸ್ವಸಹಾಯ ಗುಂಪುಗಳ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಕಾರ್ಕಳ ಪಡುತಿರುಪತಿ ಮೈದಾನದಲ್ಲಿ ಇಂದು ಪೂರ್ವಾಹ್ನ ೯ಗಂಟೆಯಿಂದ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಈಶ್ವರ್ ಭಟ್ ನೇತೃತ್ವದಲ್ಲಿ ಸಾಮೂಹಿಕ ಮಹಾಲಕ್ಷ್ಮಿ ಪೂಜೆ ನಡೆಯಲಿದೆ.
೧೦ರಿಂದ ಸಭಾಕಾರ್ಯಕ್ರಮವನ್ನು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದು, ರಾಜ್ಯ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಆಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಮುಂಬಾಯಿ ನಬಾರ್ಡ್ನ ಛೇರ್ಮೆನ್ ಉಮೇಶ್ಚಂದ್ರ ಸಾರಂಗಿ ನವೋದಯ ಸ್ವಸಹಾಯ ಸಂಘಗಳಿಗೆ ಸನ್ಮಾನಿಸಲಿದ್ದಾರೆ. ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ, ಡಾ.ಎಚ್.ವಿ.ಪಾರ್ಶ್ವನಾಥ್, ಡಾ.ವೆಂಕಟೇಶ್ ಬಿ.ತಗತ್ ಉಪಸ್ಥಿತರಿರುವರು.
ಅಪರಾಹ್ನ ೩-೩೦ರಿಂದ ನವೋದಯ ಸ್ವಸಹಾಯ ಸಂಘಗಳ ಸದಸ್ಯರ ಬೃಹತ್ ಆಕರ್ಷಣಿಯ ಮೆರವಣಿಗೆ ಅನಂತಶಯನ ದೇವಸ್ಥಾನದ ವಠಾರದಿಂದ ಹೊರಡಲಿದೆ. ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ಗೋಪಾಲ ಬಿ.ಹೋಸೂರು ಉದ್ಘಾಟಿಸಲಿದ್ದಾರೆ.
ಸಂಜೆ ೫-೩೦ಕ್ಕೆ ನವೋದಯ ಸ್ವ-ಸಹಾಯ ಸಂಘಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಶಾಸಕ ಗೋಪಾಲ ಭಂಡಾರಿ, ಮಾಜಿ ಶಾಸಕ ಸುನಿಲ ಕುಮಾರ್, ಜಿ.ಪಂ. ಉಪಾಧ್ಯಕ್ಷ ಡಾ.ಸಂತೋಷ್ ಕುಮಾರ್ ಶೆಟ್ಟಿ, ತಾ.ಪಂ.ಅಧ್ಯಕ್ಷ ಉದಯ ಎಸ್. ಕೋಟ್ಯಾನ್, ಪುರಸಭಾಧ್ಯಕ್ಷ ಸುಬೀತ್ ಎನ್.ಆರ್ ಉಪಸ್ಥಿತರಿರುವರು.
=============
(ಚಿತ್ರ: ೧೧ಕಾರ್ಕಳ- ಎಮ್ಎನ್ಆರ್) ಅಪೆಕ್ಸ್ ಬ್ಯಾಂಕ್ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್
(ಚಿತ್ರ: ೧೧ಕಾರ್ಕಳ-ಎನ್ಒಡಿ) (ಚಿತ್ರ: ೧೧ಕಾರ್ಕಳ-ಎನ್ಒಡಿ೧) ಪೋಟೋ ಕ್ಯಾಪ್ಷನ್: (ಚಿತ್ರ: ೧೧ಕಾರ್ಕಳ-ಎನ್ಒಡಿ೨) (ಚಿತ್ರ: ೧೧ಕಾರ್ಕಳ-ಎನ್ಒಡಿ೩) (ಚಿತ್ರ: ೧೧ಕಾರ್ಕಳ-ಎನ್ಎಡಿ೪)