ಸಕಲೇಶಪುರ, ಜನವರಿ ೨೬: ಯಸಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಬೃಷ್ಟಾಚಾರ ನಡೆಯುತ್ತಿದ್ದು, ಈ ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಯಿಸಿ ಗ್ರಾ.ಪಂ. ಎದುರು ಸೋಮವಾರ ಸಾಮ್ರಾಟ್ ಅಶೋಕ್ ಯುವಕ ಸಂಘದವರು ಪ್ರತಿಭಟಿಸಿ, ಉಪವಾಸ ಸತ್ಯಾಗ್ರಹ ಅರಂಭಿಸಿದರು
ಬೆಳಿಗ್ಗೆ 11 ಗಂಟೆಯಿಂದ ದರಣಿ ಪ್ರಾರಂಬಿಸಿದ ಪ್ರತಿಭಟನೆಕಾರರು ಸರಕಾರದ ವಿವಿಧ ಯೋಜನೆಗಳನ್ನು ಗ್ರಾ.ಪಂ.ನ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗ ದುರ್ಬಳಕೆ ಮಾಡಿಕೊಂಡಿದೆ ಎಂದು ಅರೋಪಿಸಿ ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಶಾಂತ್ ಮಾತನಾಡಿದರು ಜಿಲ್ಲಾಡಿಳಿತ ಕ್ರಮಕೈಗೊಳ್ಳದಿರುವ ಬಗ್ಗೆ ಅನುಮಾನ ವ್ಯಕ್ತ ಪಡಿಸಿದರು. ೩ ತಿಂಗಳ ಹಿಂದೆ ಜಿಲ್ಲಾ ಲೋಕಾಯುಕ್ತ ಇಲಾಖೆ ಮತ್ತು ರಾಜ್ಯ ಲೋಕಾಯುಕ್ತ ಇಲಾಖೆಗೆ ದಾಖಲೆ ಸಮೇತ ದೂರು ನೀಡಿದ್ದೇವೆ ಎಂದರು.
ಸಂಘದ ಅಧ್ಯಕ್ಷ ದೇವೇಂದ್ರ ಮಾತನಾಡಿ, ಆಶ್ರಯ ಯೋಜನೆ ಶೌಚಾಲಯ ನಿರ್ಮಾಣ ಕಾಮಗಾರಿ, ಶೇ ೨೦ ರ ಹಣ, ಮರಳು ಸುಂಕದ ಹಣ, ಪಂಪ್‌ಸೆಟ್ ರಿಪೇರಿ ಹಣ ಸೇರಿದಂತೆ ಅನೇಕ ಹಗರಣಗಳು ನಡೆದಿವೆ ಈ ಎಲ್ಲಾ ಹಗರಣಗಳ ತನಿಕರಯಾಗಬೇಕೆಂದರು. ಪ್ರತಿಭಟನೆಯಲ್ಲಿ ಸ್ಥಳಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು. ಸ್ಥಳಕ್ಕೆ ಕಾರ್ಯನಿರ್ವಾಹನ ಅಧಿಕಾರಿ ಶಿವರಾಮೇಗೌಡ ತನಿಕೆ ನಡೆಸಿ ಕ್ರಮಕೈಗೊಳ್ಳುವ ಬರವೆಸೆ ನೀಡಿದರು.