ಉಡುಪಿ, ಫೆ.೧೧: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ‘ಬ್ಯಾರಿ ಸಾಹಿತ್ಯ -ಸಾಂಸ್ಕೃತಿಕ ಸಂಭ್ರಮ’ ಸಮಾರಂಭವನ್ನು ಫೆ.೧೪ರಂದು ಪಡುಬಿದ್ರಿಯ ಬಂಟರ ಭವನದಲ್ಲಿ ಆಯೋಜಿಸಲಾಗಿದೆ.
ಸಮಾರಂಭವನ್ನು ಬೆಳಗ್ಗೆ ೧೦:೩೦ಕ್ಕೆ ದುಬೈ ಬ್ಯಾರಿ ಕಲ್ಚರಲ್ ಫೋರಂನ ಪೋಷಕ ಶೇಖಬ್ಬ ಕನ್ನಂಗಾರ್ ಉದ್ಘಾಟಿಸಲಿರುವರು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ ಭಾಗವಹಿಸಲಿರುವರು. ನಝೀರ್ ಪೊಲ್ಯ ಅವರ ವ್ಯಂಗ್ಯಚಿತ್ರ ಪ್ರದರ್ಶನವನ್ನು ಮುಸ್ಲಿಮ್ ಒಕ್ಕೂಟದ ಪಡುಬಿದ್ರಿ ವಲಯ ಅಧ್ಯಕ್ಷ ಎಂ.ಪಿ.ಮೊದಿನಬ್ಬ ಉದ್ಘಾಟಿಸಲಿರುವರು ಎಂದು ಅಕಾಡೆಮಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹಿಮಾನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಬಳಿಕ ೨೦ವರ್ಷಕ್ಕಿಂತ ಕೆಳಗಿನ ಯುವತಿಯರಿಗೆ ಮೆಹಂದಿ ಸ್ಪರ್ಧೆ ಹಾಗೂ ೨೦ವರ್ಷದ ಕೆಳಗಿನ ಯುವಕರಿಗೆ ಬ್ಯಾರಿ ಹಾಡು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುವುದು.
ಮಧ್ಯಾಹ್ನ ೨:೩೦ಕ್ಕೆ ಮುಹಮ್ಮದ್ ಕುಳಾಯಿ ಅವರ ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ಜರಗಲಿದೆ. ಯು.ಎ.ಕಾಸೀಮ್, ಉಸ್ಮಾನ್ ಅಲಿ ಉಡುಪಿ, ಅಶ್ರಫ್ ಅಪೋಲೊ, ಶೇಕ್ ಹಮೀದ್ ಹೆಜಮಾಡಿ, ಇಬ್ರಾಹಿಂ ತಣ್ಣೀರುಬಾವಿ, ಶರೀಫ್ ಕಾರ್ಕಳ, ಸಿದ್ದಿಕ್ ಪಡುಬಿದ್ರಿ, ಹಮೀದ್ ಕೋಡಿ, ಹುಸೈನ್ ಕಾಟಿಪಳ್ಳ ಅವರು ಬ್ಯಾರಿ ಕವನಗಳನ್ನು ವಾಚಿಸಲಿರುವರು.
ಸಂಜೆ ೪:೩೦ಕ್ಕೆ ಅಕಾಡೆಮಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹ್ಮಾನ್ ಅವರ ಅಧ್ಯಕ್ಷತೆಯಲ್ಲಿ ಜರಗುವ ಸಮಾರೋಪ ಸಮಾರಂಭದಲ್ಲಿ ಜನಪದ ವಿದ್ವಾಂಸ ಗಣನಾಥ ಎಕ್ಕಾರು ಮುಖ್ಯ ಭಾಷಣಕಾರರಾಗಿ ಆಗಮಿಸಲಿರುವರು. ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ವಸಂತ ವಿ.ಸಾಲ್ಯಾನ್, ಉಡುಪಿ ತಾಲೂಕು ಗ್ರಾಪಂ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಂದ್ರನಾಥ ಜಿ.ಹೆಗ್ಡೆ, ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಲ್ಬನ್ ರೊಡ್ರಿಗಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ೬:೩೦ರಿಂದ ನಡೆಯಲಿರುವ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶೌಕತ್ ಪಡುಬಿದ್ರಿ ಬಳಗದಿಂದ ಬ್ಯಾರಿ ಜನಪದ ಹಾಡುಗಳು, ಬ್ಯಾರಿ ಖವ್ವಾಲಿ, ಮಿಮಿಕ್ರಿ ಹಾಗೂ ಇಬ್ರಾಹಿಂ ತಣ್ಣೀರುಬಾವಿ ತಂಡದಿಂದ ‘ಪತ್ತ್ ಇನ್ನವುಡೆ ಮುತ್ತು’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಪಿ.ಮುಹಮ್ಮದ್, ಹಂಝ ಮಲಾರ್, ಎಸ್.ಪಿ.ಉಮರ್ ಫಾರೂಕ್ ಪಡುಬಿದ್ರಿ, ಪತ್ರಕರ್ತ ಹಮೀದ್ ಪಡುಬಿದ್ರಿ ಉಪಸ್ಥಿತರಿದ್ದರು.
ಬ್ಯಾರಿ ಲೇಖನ ಸ್ಪರ್ಧೆಯ ವಿಜೇತರು
ಬ್ಯಾರಿ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮದ ಪ್ರಯುಕ್ತ ಏರ್ಪಡಿಸಲಾಗಿದ್ದ ‘ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ?’ ಎಂಬ ವಿಷಯದ ಕುರಿತ ಲೇಖನ ಸ್ಪರ್ಧೆಯಲ್ಲಿ ರೂಪಾ ಪ್ರಭಾಕರ್ ಚಿಟ್ಪಾಡಿಬೈಲ್ ಉಡುಪಿ ಪ್ರಥಮ ಬಹುಮಾನ, ಎ.ಕೆ.ನಂದಾವರ ಪಾಣೆಮಂಗಳೂರು ದ್ವಿತೀಯ ಹಾಗೂ ಮರ್ಯಮ್ ಇಸ್ಮಾಯಿಲ್ ಉಳ್ಳಾಲಬೈಲ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಸಂಜೆ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ವಿತರಿಸಲಾಗುವುದು