ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಉಡುಪಿ: `ಲವ್ ಜಿಹಾದ್' ವದಂತಿಗೆ ಸಾಕ್ಷಿ ಸಮೇತ ತೆರೆ ಎಳೆದ ದ.ಕ.ಜಿಲ್ಲಾ ಪೊಲೀಸರು

ಉಡುಪಿ: `ಲವ್ ಜಿಹಾದ್' ವದಂತಿಗೆ ಸಾಕ್ಷಿ ಸಮೇತ ತೆರೆ ಎಳೆದ ದ.ಕ.ಜಿಲ್ಲಾ ಪೊಲೀಸರು

Sat, 24 Oct 2009 14:09:00  Office Staff   S.O. News Service

ಕೇರಳದಲ್ಲಿ ಹುಟ್ಟಿಕೊಂಡಿದೆ ಎಂದು ಗುಲ್ಲೆಬ್ಬಿಸಲಾದ `ಲವ್ ಜಿಹಾದ್' ದ.ಕ.ಜಿಲ್ಲೆಯಲ್ಲೂ ವ್ಯಾಪಕವಾಗಿ ಹಬ್ಬಿದೆ ಎಂಬ ಇಲ್ಲಿನ ಸಂಘಪರಿವಾರ ಪ್ರೇರಿತ ಮಾಧ್ಯಮಗಳ ವರದಿ ಮತ್ತು ನಿರ್ದಿಷ್ಟ ವಲಯದಲ್ಲಿ ಹುಟ್ಟಿಕೊಂಡ ವದಂತಿಗೆ ಸರಣಿ ಹಂತಕನೊಬ್ಬನನ್ನು ಬಂಧಿ ಸುವ ಮೂಲಕ ಜಿಲ್ಲಾ ಪೊಲೀಸರು ತೆರೆ ಎಳೆದಿದ್ದಾರೆ ಎಂಬ ಮಾತು ಸಾರ್ವಜನಿಕ ವಲ ಯದಿಂದ ಕೇಳಿ ಬರುತ್ತಿದೆ.

ಕೆಲವು ಪೂರ್ವಾಗ್ರಹ ಪೀಡಿತ ಪತ್ರಕರ್ತರು, `ದ.ಕ.ಜಿಲ್ಲೆಯ ಮುಸ್ಲಿಂ ಯುವಕರು, ಅಮಾ ಯಕ ಹಿಂದೂ ಯುವತಿಯರನ್ನು ಪ್ರೀತಿಯ ನಾಟಕವಾಡಿ `ಜಿಹಾದ್'ಗೆ ತಳ್ಳುತ್ತಿದ್ದಾರೆ’ ಎಂಬ ಗಾಳಿ ಸುದ್ದಿಗೆ ರೆಕ್ಕಪುಕ್ಕ ಕಟ್ಟಿ ಜಿಲ್ಲೆಯ ಮತೀಯ ಸೌಹಾರ್ದತೆಯನ್ನು ಕೆಡಿಸಲು ಮುಂದಾಗಿದ್ದರು. ಇದಕ್ಕೆ ಪೂರಕ ಎಂಬಂತೆ ಸಂಘಪರಿವಾರದ ಕೆಲವು ಅಂಗ ಸಂಸ್ಥೆಗ ಳು ಕೂಡ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಗಳ ಮುಂದೆ ಪ್ರತಿಭಟನೆ ನಡೆಸಿತ್ತು.

ಸುಳ್ಳನ್ನು ನೂರು ಬಾರಿ ಹೇಳಿ ಅದು ಸತ್ಯ ಎಂದು ಬಿಂಬಿಸುವ ಪ್ರಯತ್ನವನ್ನೂ ಮಾಡಿ ತ್ತು. ಆದರೆ, ಈ ಎಲ್ಲ ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಜಿಲ್ಲಾ ಪೊಲೀಸರ ಸಾಹಸ ಮಯ ಕಾರ್ಯಾಚರಣೆಯಿಂದ ಸಾಬೀತಾಗಿರುವುದು ದ.ಕ.ಜಿಲ್ಲೆಯ ಶಾಂತಿ ಪ್ರಿಯ ಜನ ನಿಟ್ಟುಸಿರು ಬಿಡುವಂತಾಗಿದೆ.

ಬಂಟ್ವಾಳದ ಅನಿತಾ ನಾಪತ್ತೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದು ಸಂಘಪರಿವಾರದ ಕಾರ್ಯಕರ್ತರು ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಪ್ರತಿಭಟನೆ ನ ಡೆಸಿ, ಅನಿತಾಳನ್ನು `ಲವ್ ಜಿಹಾದ್' ಮೂಲಕ ಅಪಹರಿಸಲಾಗಿದೆ ಎಂಬಿತ್ಯಾದಿ ಆರೋಪ ಗಳನ್ನು ಮಾಡಿದ್ದರು. ಆವರೆಗೂ ಅನಿತಾ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿ ಸಿರದ ಪೊಲೀಸರು ನಂತರ ತನಿಖೆಯನ್ನು ಚುರುಕುಗೊಳಿಸಿದರು. ಕೆಲವೇ ದಿನದಲ್ಲಿ ಸರಣಿ ಹಂತಕ ಮೋಹನ್ ಕುಮಾರ್‌ನನ್ನು ಬಂಧಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಹುಡುಗಿಯರ ನಾಪತ್ತೆ ಪ್ರಕರಣದ ಹಿಂದಿನ ನಿಗೂಢತೆಯನ್ನು ಭೇದಿಸಿದ್ದಾರೆ.

ಪೊಲೀಸರ ಎಡವಟ್ಟು:

ಸರಣಿ ಹ೦ತಕ ಮೋಹನ್ ಕುಮಾರ್‌ನ ಕ್ರೂರ ಕ್ರತ್ಯಕ್ಕೆ ಬಲಿಯಾದ ೧೮ ಯುವತಿಯರ ಪೈಕಿ ೧೨ ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಇವರ ನಾಪತ್ತೆ ಪ್ರಕರಣದ ಬಗ್ಗೆ ಆಯಾ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಇದೀಗ ಇವರೆಲ್ಲಾ ತನ್ನ ಶೀಲ, ಪ್ರಾಣ ಕಳಕೊಂಡರೂ ಕೂಡ ಸಂಘಪರಿವಾರ ಅದರ ಬಗ್ಗೆ ಕನಿಷ್ಠ ಖಂಡನೆ ವ್ಯಕ್ತಪಡಿಸುವಂತಹ ಸೌಜನ್ಯತೆಯನ್ನೂ ತೋರಿಸಿಲ್ಲ ಎಂದು ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಘಪರಿವಾರದ ಕಾರ್ಯಕರ್ತರು ಮತ್ತು `ಸಂಘ' ಪ್ರೇರಿತ ಮಾಧ್ಯಮಗಳು ನಾಪತ್ತೆ ಯಾದ ಯುವತಿಯರು `ಲವ್ ಜಿಹಾದ್' ಬಲೆಗೆ ಬಿದ್ದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ದ್ದರೆ, ಪೊಲೀಸರ ಎಡವಟ್ಟು ಕೂಡ ಅವರ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತಿದೆ ಎಂ ದು ಸಾರ್ವಜನಿಕ ವಲಯದಿಂದ ಆರೋಪಗಳು ಕೇಳಿಬರುತ್ತಿವೆ.

ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ಪಾಂಗಲ್ಪಾಡಿ ಬಳಿಯ ಬಾಬು ಎಂಬವರ ಮಗಳಾದ ಲೀಲಾ ಯಾನೆ ಲೀಲಾವತಿ ೨೦೦೫ರಲ್ಲಿ ಕಾಣೆಯಾಗಿದ್ದಳು. ಎಡಪಂಥೀಯ ಸಂಘಟನೆಗಳ ಹೋರಾಟದಲ್ಲಿ ಪಾಲ್ಗೊಂಡಿದ್ದ ಈಕೆ ನಕ್ಸಲರ ಜತೆ ಸಂಪರ್ಕ ಸಾಧಿಸಿರ ಬೇಕು ಎಂದು ಪೊಲೀಸರು ಶಂಕಿಸಿದರು. ಅಷ್ಟೇ ಅಲ್ಲ ಪಶ್ಚಿಮ ವಲಯ ಐಜಿಪಿ ಗೋಪಾ ಲ್ ಹೊಸೂರು ಕೂಡಾ ಈಕೆಯನ್ನು `ನಕ್ಸಲ್ ಪಟ್ಟಿ'ಗೆ ಸೇರಿಸಿ, ಪತ್ತೆ ಹಚ್ಚಿ ಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಕೊಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದರು.

ಇದೀಗ ಅದೇ ಲೀಲಾವತಿ, ಸರಣಿ ಹಂತಕ ಮೋಹನ್ ಕುಮಾರ್‌ನ ಪೈಶಾಚಿಕ ಕೈಗೆ ಸಿಲುಕಿ ಕೊಲೆಯಾಗಿದ್ದಾಳೆ ಎಂದು ಐಜಿಪಿ ಬುಧವಾರ ಹೇಳಿಕೊಳ್ಳುವ ಮೂಲಕ ಇಲಾಖೆ ಯಲ್ಲಾದ ಎಡವಟ್ಟನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಮಾಧ್ಯಮಗಳ ಸೃಷ್ಟಿ:

`ಲವ್ ಜಿಹಾದ್' ಯಾವುದೇ ರಾಜಕೀಯ ಪಕ್ಷದ ಚುನಾವಣಾ ಸ್ಟಂಟ್ ಅಲ್ಲ. ಅದು ಕೆಲವು ಮಾಧ್ಯಮಗಳ ಸೃಷ್ಟಿ. ಎಲ್ಲೋ ಕುಳಿತು ಕಪೋಲ ಕಲ್ಪಿತವಾಗಿ ಬರೆದು ನಂತರ ಅದನ್ನು ಒಂದು ಸಮುದಾಯದ ಮೇಲೆ ಹೊರಿಸುವ ಪ್ರಯತ್ನ ಮಾಡುತ್ತಿರುವಾಗಲೇ ಪೊಲೀಸರು ಮೋಹನ್ ಕುಮಾರ್ ಎಂಬ ನರಹಂತಕನನ್ನು ಬಂಧಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್.

`ಲವ್ ಜಿಹಾದ್'ನ ಬಣ್ಣ ಬಯಲು: ದ.ಕ. ಜಿಲ್ಲೆಯಲ್ಲಿ `ಲವ್ ಜಿಹಾದ್' ನಡೆಯುತ್ತಿದೆ. ಇದ ರ ವಿರುದಟಛಿ ವಿಸ್ತೃತ ತನಿಖೆ ಅತ್ಯಗತ್ಯ ಎಂದು ಬೊಬ್ಬಿಡುವ ಸಂಘಪರಿವಾರದ ಕಾ ರ್ಯಕರ್ತರಿಗೆ ಲವ್ ಜಿಹಾದ್‌ನ ಬಣ್ಣ ಬಯಲು ಮಾಡುವ ಮೂಲಕ ಜಿಲ್ಲಾ ಪೊಲೀ ಸರು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಯ ಖತೀಬ್ ಎಸ್.ಬಿ. ದಾರಿಮಿ.


Share: