ಇಂದು ನಮ್ಮ ಸರಕಾರ ನಮ್ಮ ಎಲ್ಲಾ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಕೊಡುವ ಪ್ರತಿಜ್ಞೆಯ ಪಾಲನೆಯೊಂದಿಗೆ ನಿಮ್ಮ ಮುಂದೆ ಬಂದಿದೆ ಎಂದು ಪ್ರಧಾನ ಮಂತ್ರಿಗಳು ಎಪ್ರಿಲ್
1 ರಂದು ದೇಶವನ್ನುದ್ದೇಶಿಸಿ ಹೇಳಿದ್ದಾರೆ. ‘ಮಕ್ಕಳಿಗೆ ಪುಕ್ಕಟೆ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾನೂನು, 2009′ ಜಾರಿಗೆ ಬಂದಿರುವ ಸಂದರ್ಭದಲ್ಲಿ ಅವರು ಪ್ರಸಾರ ಭಾಷಣ ಮಾಡಿದ್ದಾರೆ. ಅವರು ಪ್ರಸಾರ ಭಾಷಣ ಮಾಡಿರುವುದೇ ಯುಪಿಎ ಸರಕಾರ ಇದು ತನ್ನ ‘ಇನ್ನೊಂದು ಮಹತ್ಸಾಧನೆ‘ ಎಂದು ಬಿಂಬಿಸಲು ಹೊರಟಿದೆ ಎಂಬುದರ ಸಂಕೇತ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಇದೊಂದು ಪ್ರಗತಿಪರ ಹೆಜ್ಜೆ ಎಂಬುದೇನೋ ನಿಜ. ಇದು 6ರಿಂದ 14 ವರ್ಷದ ಎಲ್ಲಾ ಮಕ್ಕಳಿಗೂ ಶಿಕ್ಷಣದ ಹಕ್ಕು ಒದಗಿಸುತ್ತದೆ. ಆದರೆ 6 ವರ್ಷಕ್ಕಿಂತ ಕೆಳಗಿನ ಮತ್ತು 14 ವರ್ಷಕ್ಕಿಂತ ಮೇಲಿನ ಮಕ್ಕಳು ಇದರ ವ್ಯಾಪ್ತಿಗೆ ಬರುವುದಿಲ್ಲ. ಈ ಕಾನೂನು ತರಲು ಕೂಡಾ 16ವರ್ಷಗಳ ಕಾಲ ಪ್ರಜಾಪ್ರಭುತ್ವ ಆಂದೋಲನ ಹೋರಾಟ ಮಾಡಬೇಕಾಯಿತು. ಆಮೇಲೂ ಬಂದಿರುವುದು ಅದು ಕೇಳಿರುವಂತಹ ಕಾನೂನು ಅಲ್ಲ; ಯುಪಿಎ-2 ಸರಕಾರ ಅದನ್ನು ಸಾಕಷ್ಟು ದುರ್ಬಲಗೊಳಿಸಿಯೇ ತಂದಿದೆ.ಅದರ ನಿಜವಾದ ಜಾರಿಗೆ ಮತ್ತಷ್ಟು ಹೋರಾಟಗಳು ಬೇಕಾಗುತ್ತವೆ ಎಂದು ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಆಂದೋಲನದ ಮುಖಂಡರಿಗೆ ಸಂದೇಹ ಇದ್ದೇ ಇದೆ.ಮುಖ್ಯವಾಗಿ ಯುಪಿಎ-1 ಮತ್ತು ಯುಪಿಎ-2 ಸರಕಾರಗಳು ಹಿಂದಿನ ಕೇಂದ್ರ ಸರಕಾರಗಳಂತೆಯೇ ಶಿಕ್ಷಣಕ್ಕೆ ನೀಡಿರುವ ಹಣದ ಪ್ರಮಾಣವೇ ಈ ಸಂದೇಹಕ್ಕೆ ಪ್ರಮುಖ ಕಾರಣ. ಪ್ರಧಾನ ಮಂತ್ರಿಗಳೇನೋ ಹಣಕಾಸು ಮಿತಿಗಳು ಈ ಕಾನೂನಿನ ಜಾರಿಗೆ ಅಡ್ಡಿಯಾಗದಂತೆ ತಮ್ಮ ಸರಕಾರ ರಾಜ್ಯ ಸರಕಾರಗಳೊಡಗೂಡಿ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಮಾನವ ಸಂಪನ್ಮೂಲ ಇಲಾಖೆಯ ಅಂದಾಜುಗಳ ಪ್ರಕಾರವೇ ಈ ಹಕ್ಕಿನ ಜಾರಿಗೆ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ 1.73ಲಕ್ಷ ಕೋಟಿ ರೂ.ಗಳು ಬೇಕು. ಅಂದರೆ ವರ್ಷಕ್ಕೆ 34600ಕೋಟಿ. ಆದರೆ ಈ ವರ್ಷ ಇದೆ ಯುಪಿಎ-2 ಸರಕಾರ ಕೊಟ್ಟಿರುವುದು ಕೇವಲ 22000 ಕೋಟಿ ರೂ. ಇಂತಹ ಅರೆಮನಸ್ಸಿನ ಪ್ರಯತ್ನಗಳಿಂದ ಪ್ರಧಾನಮಂತ್ರಿಗಳು ಆಶಿಸಿರುವಂತೆ ಅವರಿಗೆ ದೊರೆತ ಶಿಕ್ಷಣದ ಬೆಳಕು ಭಾರತದ ಪ್ರತಿಯೊಂದು ಮಗುವನ್ನೂ ತಲುಪುವುದು ನಿಜವಾಗಿಯೂ ಸಾಧ್ಯವೇ? ಒಕ್ಕೂಟ ತತ್ವಗಳನ್ನು ಒಂದೊಂದಾಗಿ ಗಾಳಿಗೆ ತೂರುತ್ತಿರುವ ಯುಪಿಎ-2 ಸರಕಾರದ ನೀತಿಗಳಿಂದಾಗಿ ಸತತ ಹಣಕಾಸು ತೊಂದರೆಗಳಿಂದ ತತ್ತರಿಸುತ್ತಿರುವ ರಾಜ್ಯ ಸರಕಾರಗಳಿಂದ ಈ ನಿಟ್ಟಿನಲ್ಲಿ ನೆರವು ನಿರೀಕ್ಷಿಸುವುದು ಪ್ರಜಾಪ್ರಭುತ್ವವಾದಿಗಳ ಆತಂಕವನ್ನು ಇನ್ನೂ ಹೆಚ್ಚಿಸಿದೆ.ವಿದೇಶಿ ವಿವಿಗಳ ಮಸೂದೆಯನ್ನು ಬೆಂಬಲಿಸಬೇಕಂತೆ !ಶಿಕ್ಷಣದ ಹಕ್ಕು ಕೊಟ್ಟಿದ್ದೇನೆ ಎನ್ನುವ ಸರಕಾರ ಶಿಕ್ಷಣವನ್ನು ಉಳ್ಳವರ ಹಕ್ಕಾಗಿಯೇ ಉಳಿಸಲೂ ಕಟಿಬದ್ಧವಾಗಿರುವಂತೆ ಕಾಣುತ್ತದೆ. ವಿದೇಶಿ ವಿಶ್ವವದ್ಯಾಲಯಗಳ ಮಸೂದೆಯನ್ನು ಹೇಗಾದರೂ ಮಾಡಿ ಪಾಸು ಮಾಡಿಕೊಳ್ಳಬೆಕು ಎಂದು ಯುಪಿಎ-2 ಸರಕಾರ ಹತಾಸ ಪ್ರಯತ್ನ ನಡೆಸುತ್ತಿದೆ ಎಂದು ಅದು ವರದಿ ಮಾಡಿದೆ. ಈ ವಿಷಯದಲ್ಲಿ ಬಿಜೆಪಿ ಬೆಂಬಲ ಗಳಿಸಲು ಸ್ವತಃ ಮಾನವ ಸಂಪನ್ಮೂಲ ಮಂತ್ರಿ ಕಪಿಲ್ ಸಿಬಾಲ್ ಬಿಜೆಪಿ ಮುಖಂಡ ಹಾಗೂ ಎನ್ ಡಿಎ ಸರಕಾರದಲ್ಲಿ ಅದೇ ಹುದ್ದೆಯಲ್ಲಿದ್ದ ಮುರಳಿ ಮನೋಹರ ಜೋಷಿಯವರನ್ನು ಭೇಟಿಯಾಗಿದ್ದರು. ಎಡಪಕ್ಷಗಳ ಕಡು ವಿರೋಧವಲ್ಲದೆ, ಯುಪಿಎ-2 ಸರಕಾರವನ್ನು ಬೆಂಬಲಿಸುವ ಬಿಎಸ್ಪಿ, ಆರ್ಜೆಡಿ, ಸಮಾಜವಾದಿ ಪಕ್ಷಗಳೂ ಇದನ್ನು ವಿರೋಧಿಸುತ್ತಿರುವುದರಿಂದ ಯುಪಿಎ-2 ಇದನ್ನು ಪಾಸು ಮಾಡಿಸಿಕೊಳ್ಳಲು ಬಿಜೆಪಿಯನ್ನೇ ನೆಚ್ಚಿಕೊಂಡಿದೆ. ಜೋಷಿಯವರು ಈ ಮಸೂದೆಯ ಬಗ್ಗೆ ಪೂರ್ಣ ವಿವರಗಳನ್ನು ಕೇಳಿದರಂತೆ. ಅದಕ್ಕೆ ತಕ್ಷಣವೆ ಸ್ಪಂದಿಸಿದ ಸಿಬಾಲ್ ಈ ಮಸೂದೆಯ ಮುಖ್ಯಾಂಶಗಳನ್ನು ಕುರಿತಂತೆ ಒಂದು ಟಿಪ್ಪಣಿಯನ್ನು ಅವರಿಗೆ ಕಳಿಸಿದ್ದಾರಂತೆ. ಅವರ ಪ್ರತಿಕ್ರಿಯೆ ‘ನಕಾರಾತ್ಮಕ‘ವಾಗಿಲ್ಲ ಎಂದೂ ಅವರು ಹೇಳಿದ್ದಾರೆ. ದೇಶಬಾಂಧವರ ಪಾಡು ದೇಶದ ಗೃಹಮಂತ್ರಿಗೇ ತಿಳಿದಿಲ್ಲ!
ಭಾರತದಲ್ಲಿ 77 ಶೆಕಡಾ ಜನ ದಿನಕ್ಕೆ 20ರೂ.ಗಿಂತ ಕಡಿಮೆ ಆದಾಯದಲ್ಲಿ ಬದುಕು ಸಾಗಿಸಬೇಕಾಗಿದೆ ಎಂಬುದು ನಿಜವಲ್ಲ,ಅದು ಎಡಪಕ್ಷಗಳು ಹರಡುತ್ತಿರುವ ಮಿಥ್ಯೆ ಎಂದು ಯುಪಿಎ ಸರಕಾರದ ಮಾನ್ಯ ಗ್ರಹಮಂತ್ರಿಗಳು ಹೇಳಿದ್ದಾರೆ.ಎಡಪಕ್ಷಗಳು ಹೇಳುತ್ತಿರುವುದು ಹಿಂದಿನ ಯುಪಿಎ ಸರಕಾರ 2004ರಲ್ಲಿ ನೇಮಿಸಿದ ರಾಷ್ಟ್ರೀಯ ಅಸಂಘಟಿತ ವಲಯದ ಉದ್ದಿಮೆಗಳ ಅಯೋಗ ಒದಗಿಸಿದ ಅಂಕಿ-ಅಂಶಗಳನ್ನೇ.ಈ ಆಯೋಗ ಅಸಂಘಟಿತ ವಲಯದಲ್ಲಿ ಕೆಲಸದ ಮತ್ತು ಬದುಕಿನ ಪರಿಸ್ಥಿತಿಗಳನ್ನು ಕುರಿತ ವರದಿಯನ್ನು ಆಗಸ್ಟ್2007ರಲ್ಲಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದೆ. ಈ ವರದಿಯ ಮೊದಲ ಅಧ್ಯಾಯದ ಮೊದಲ ಪುಟದಲ್ಲಿ ಹೀಗೆ ಹೇಳಲಾಗಿದೆ: 2004-05ರ ಅಂತ್ಯದ ವೇಳೆಗೆ 83.6 ಕೋಟಿ ಅಥವಾ ಜನಸಂಖ್ಯೆಯ 77ಶೇಕಡಾ ಜನ ದಿನಕ್ಕೆ ರೂ.20ಕ್ಕಿಂರ ಕಡಿಮೆಯಲ್ಲಿ ಬದುಕುತ್ತಿದ್ದರು. ಇವರು ಬಹುಪಾಲು ಭಾರತದ ಅನೌಪಚಾರಿಕ ವಲಯದ ಭಾಗ.ಎಂದು ಗ್ರಹಮಂತ್ರಿಗಳ ಹೇಳಿಕೆಗೆ ಸಿಪಿಐ(ಎಂ) ಪ್ರತ್ಯುತ್ತರ ಕೊಟ್ಟಿದೆ.ಮಾನ್ಯ ಗ್ರಹಮಂತ್ರಿಗಳು ತಮ್ಮ ದೇಶಬಾಂಧವರ ಬದುಕಿನ ಸಾಮಾಜಿಕ
-ಆರ್ಥಿಕ ಪರಿಸ್ಥಿತಿಗಳ ಒಳ್ಳೆಯ ಜ್ಞಾನ ಪಡೆಯಲು ತಮ್ಮ ಸರಕಾರದ ಬಳಿಯೇ ಇರುವ ವರದಿಗಳ ಅಧ್ಯಯನ ಮಾಡುವುದು ಒಳ್ಳೆಯದು ಎಂಬ ಸಿಪಿಐ(ಎಂ) ಸಲಹೆಯನ್ನು ಪ್ರಜಾಪ್ರಭುತ್ವವಾದಿ ಗಳೆಲ್ಲರೂ ಸಮರ್ಥಿಸುತ್ತಾರೆ.ತನ್ನ ಮಡಿಲಲ್ಲಿಯೇ ಮಾವೋವಾದಿ ಹಿಂಸಾಚಾರವನ್ನು ಸಮರ್ಥಿಸುವವರನ್ನು ಕಟ್ಟಿಕೊಂಡಿರುವ ಯುಪಿಎ
-2 ಸರಕಾರದ ಇದೇ ಗ್ರಹಮಂತ್ರಿಗಳು ಮಾರ್ಕ್ಸ್ ವಾದಿಗಳು ಮಾವೋವಾದಿಗಳನ್ನು ತಮ್ಮ ‘ಸಮರ ಸಂಗಾತಿಗಳು‘ ಎಂದು ಬಗೆದಿದ್ದರು ಎಂದೂ ಹೇಳಿ ಆಮೇಲೆ ಬಾಯಿ ಮುಚ್ಚಿಕೊಂಡಿದ್ದವರು ಎಂಬುದನ್ನು ಕೂಡಾ ಇಲ್ಲಿ ನೆನಪಿಸಿಕೊಳ್ಳಬಹುದು.ತೃಣಮೂಲ ಎಂ.ಪಿ.ಯ ತಿಪ್ಪರಲಾಗಗಳು-2 ರ ಪ್ರಮುಖ ಅಂಗಪಕ್ಷ ತೃಣಮೂಲ ಕಾಂಗ್ರೆಸ್ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಈ ಬಾರಿ ಜಾದವಪುರ ಕ್ಷೇತ್ರದಿಂದ ಲೋಕಸಭೆಗೆ ಆರಿಸಿ ಹೋದ ಕಬೀರ್ ಸುಮನ್ ರವರ ರಾಜೀನಾಮೆಯ ಪ್ರಹಸನ. ತನ್ನ ಪಕ್ಷ ‘ಮಾವೋವಾದಿ‘ಯಾಗಿದೆ(ತಿನ್ನುವವರು) ಅಂದರೆ ಭ್ರಷ್ಟಗೊಂಡಿದೆ,ಆಂತರಿಕ ಪ್ರಜಾ ಪ್ರಭುತ್ವವಿಲ್ಲ ಎಂದು ಪತ್ರಿಕಾ ಸಮ್ಮೇಳನದಲ್ಲಿ ಆತ ಹೇಳಿದರು. ತೃಣಮೂಲ ಕಾಂಗ್ರೆಸಿನೊಂದಿಗೆ ಇರುವುದೆಂದರೆ ಮಾನ-ಮರ್ಯಾದೆಯಿಲ್ಲದೆ ಇರುವುದು ಎಂದೂ ಅವರು ವರ್ಣಿಸಿದರು.ಯಾವುದೇ ಕಾರಣಕ್ಕೆ ತಾನು ಮುಂದುವರೆಯಲು ಸಾಧ್ಯವಿಲ್ಲ ಎಂದರು. ಇದು ಮಾರ್ಚು 29ರಂದು. ಅಂದೇ ಅವರು ‘ದೀದಿ‘ಗೆ ತಾನು ತನ್ನ ಲೋಕಸಭಾ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಎಸ್ಎಂಎಸ್ ಕಳಿಸಿದರಂತೆ. ಪತ್ರವನ್ನು ಪ್ರತ್ಯೇಕವಾಗಿ ಕಳಿಸುವುದಾಗಿ ಹೇಳಿದರಂತೆ.ಆದರೆ ಮರುದಿನವೇ
‘ಪತ್ರಿಕಾ‘ ಗುಂಪು ‘ನೆರವಿ‘ಗೆ ಧಾವಿಸಿತು. ತಾನು ಲೋಕಸಭೆಗೆ ಹೋಗುವುದಿಲ್ಲ, ಜನರ ಬಳಿಗೆ ಹೋಗುತ್ತೇನೆ ಎಂಬ ಅವರ ಹೇಳಿಕೆ ಪ್ರಕಟವಾಯಿತು. ಮಾರ್ಚ್ 31ರಂದು ತನ್ನ ನಿರ್ಧಾರವನ್ನು ‘ಮರುಪರಿಶೀಲಿಸುತ್ತೇನೆ‘ಎಂಬ ಹೇಳಿಕೆ ಪ್ರಕಟವಾಯಿತು. ಕೊಟ್ಟೇ ಇರದ ರಾಜೀನಾಮೆಯನ್ನು ‘ಮರುಪರಿಶೀಲಿಸುವ‘ ಹೇಳಿಕೆ!ಈ ಹಿಂದೆ ಇನ್ನೊಬ್ಬ ತೃಣಮೂಲ ಎಂಪಿ ಸುಚಾರು ಹಲ್ದರ್
( ರಾಣಾಘಾಟ್ ಕ್ಷೇತ್ರ) ‘ದೀದಿ‘ಯ ವಿರುದ್ಧ ದನಿಯೆತ್ತಿದ್ದು, ಇದು ಎಲ್ಲರ ಚಾಳಿಯಾಗಬಹುದೆಂಬ ಭಯ ಈ‘ಪತ್ರಿಕಾ‘ ಗುಂಪು ಆಕೆಯ ‘ನೆರವಿ‘ಗೆ ಧಾವಿಸಲು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ‘ಇವರು ಹುಚ್ಚರೇ ಅಥವ ಧೂರ್ತರೇ?’ ಎಂದು ಬಂಗಾಳಿಗಳು ಸ್ವಾತಂತ್ರ್ಯ ಪೂರ್ವದಲ್ಲಿ ಈ ಹಿಂದೆ ಬ್ರಿಟಿಶರ ಬಾಲ ಹಿಡಿಯುತ್ತಿದ್ದ ‘ಬಾಬು‘ಗಳ ಬಗ್ಗೆ ಹೇಳುತ್ತಿದ್ದಂತೆ ಹೇಳುತ್ತಿದ್ದಾರಂತೆ.೦